ಸಾರಾಂಶ
ಸ್ಟಾರ್ಟ್ಅಪ್ಸ್ ಮತ್ತು ತಳಮಟ್ಟದ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಕನ್ನಡಪ್ರಭ ವಾರ್ತೆ, ಮಣಿಪಾಲ
ಮಾಹೆ ವಿವಿಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮತ್ತು ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ನ ಡಿಲ್ಯಾಬ್ಸ್ ಇನ್ಕ್ಯುಬೇಟರ್ ಅಸೋಸಿಯೇಶನ್ ಗಳು ಮಹತ್ತ್ವದ ಸಹಭಾಗಿತ್ವಕ್ಕೆ ಸಹಿ ಹಾಕಿವೆ. ಸ್ಟಾರ್ಟ್ಅಪ್ಸ್ ಮತ್ತು ತಳಮಟ್ಟದ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಎಂಐಟಿಯ ನಿರ್ದೇಶಕ ಕಮಾಂಡರ್ (ಡಾ.) ಅನಿಲ್ ರಾಣಾ ಅವರು, ಇಂದು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಆಸಕ್ತಿ ಹೆಚ್ಚುತ್ತಿದ್ದು, ಈ ಸಹಭಾಗಿತ್ವದಿಂದ ಎಂಐಟಿಯ ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ, ಮಾರ್ಗದರ್ಶನ ಲಭಿಸಲಿದೆ, ತಮ್ಮದೇ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದಭಿಪ್ರಾಯಪಟ್ಟರು.
ಡಿಲ್ಯಾಬ್ಸ್ ಇನ್ಕ್ಯುಬೇಟರ್ ಅಸೋಸಿಯೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌಮ್ಯ ಕುಮಾರ್, ಮಾಹೆಯ ಜೊತೆಗಿನ ಈ ತಿಳಿವಳಿಕೆ ಒಪ್ಪಂದವು ಭಾರತದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಎರಡೂ ಸಂಸ್ಥೆಗಳು ಮಹತ್ತರ ಪಾತ್ರ ವಹಿಸಲಿವೆ.ಈ ಸಂದರ್ಭ ಮಾಹೆ ವೆಂಚರ್ ಉಪಾಧ್ಯಕ್ಷ ಸುರೇಶ ಕೆ.ಬಂಡಿ, ಕುಲಸಚಿವ ಡಾ.ಪಿ.ಗಿರಿಧರ ಕಿಣಿ, ಸಹಉಪಕುಲಪತಿ ಡಾ. ನಾರಾಯಣ ಸಭಾಹಿತ್, ಪರೀಕ್ಷಾಂಗ ಕುಲಸಚಿವ ಡಾ.ವಿನೋದ್ ವಿ.ಥಾಮಸ್, ಎಂಐಟಿಯ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್, ಸಹನಿರ್ದೇಶಕ ಡಾ. ಶ್ರೀರಾಮ್ ಕೆ.ವಿ., ನಾವೀನ್ಯ ವಿಭಾಗದ ಮುಖ್ಯ ಅಧಿಕಾರಿ ಡಾ.ಮುಹಮ್ಮದ್ ಜುಬೇರ್, ಮಣಿಪಾಲ್-ಕರ್ನಾಟಕ ಸರ್ಕಾರ ಬಯೋ ಇನ್ಕ್ಯುಬೇಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮನೇಶ್ ಥಾಮಸ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))