ಚಂದ್ರಶೇಖರನಾಥ ಶ್ರೀಗಳ ಅಗಲಿಕೆಯಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ನಷ್ಟ: ಡಾ.ಬಿ.ಕೃಷ್ಣ

| Published : Aug 18 2025, 12:00 AM IST

ಚಂದ್ರಶೇಖರನಾಥ ಶ್ರೀಗಳ ಅಗಲಿಕೆಯಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ನಷ್ಟ: ಡಾ.ಬಿ.ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚಂದ್ರಶೇಖರನಾಥ ಶ್ರೀಗಳು ಒಕ್ಕಲಿಗ ಮಠವನ್ನು ಸ್ಥಾಪನೆ ಮಾಡಿ ಸಮಾಜದ ಬಡವರ ಸೇವೆ ಮಾಡುವ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ ಜನಮಾನಸದಲ್ಲಿ ಭಕ್ತಿಯನ್ನು ನೆಲೆಗೊಳಿಸುವ ಕೈಂಕರ್ಯದಲ್ಲಿ ನಿರತರಾಗಿದ್ದರು. ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಭೈರವೈಕ್ಯ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಅಗಲಿಕೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಎಂದು ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ ಶನಿವಾರ ಹೇಳಿದರು.

ಪಟ್ಟಣದ ಟೌನ್ ಕ್ಲಬ್ ಆವರಣದಲ್ಲಿ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಭೈರವೈಕ್ಯ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಚಂದ್ರಶೇಖರನಾಥ ಶ್ರೀಗಳು ಒಕ್ಕಲಿಗ ಮಠವನ್ನು ಸ್ಥಾಪನೆ ಮಾಡಿ ಸಮಾಜದ ಬಡವರ ಸೇವೆ ಮಾಡುವ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ ಜನಮಾನಸದಲ್ಲಿ ಭಕ್ತಿಯನ್ನು ನೆಲೆಗೊಳಿಸುವ ಕೈಂಕರ್ಯದಲ್ಲಿ ನಿರತರಾಗಿದ್ದರು. ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.

ತಮ್ಮ ಉತ್ತರಾಧಿಕಾರಿಯಾಗಿ ಡಾ.ನಿಶ್ಚಲಾನಂದ ಸ್ವಾಮೀಜಿ ಅವರನ್ನು ನೇಮಿಸುವ ಮೂಲಕ ಮಠಕ್ಕೆ ಒಂದು ದೊಡ್ಡ ಶಕ್ತಿ ತಂದು ಕೊಟ್ಟಿದ್ದಾರೆ. ಶ್ರೀಚಂದ್ರಶೇಖರನಾಥ ಶ್ರೀಗಳ ಅಗಲಿಕೆ ಒಕ್ಕಲಿಗ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಈ ವೇಳೆ ಸಂಘದ ಮುಖಂಡರಾದ ಎಂ.ಜಿ.ಶ್ರೀಕಂಠಯ್ಯ, ವಿ.ಟಿ.ರವಿಕುಮಾರ್, ಎಂ.ಎ.ಕೃಷ್ಣ, ಚಂದ್ರು, ಪುಟ್ಟಸ್ವಾಮಿ, ಕೃಷ್ಣೇಗೌಡ, ಕೆ.ಶಿವಕುಮಾರ್, ಎಂ.ಡಿ.ಮಹಾಲಿಂಗಯ್ಯ , ವೀರಣ್ಣ, ಶಾಮಿಯಾನ ಗುರುಸ್ವಾಮಿ, ಮಹಾಲಿಂಗ, ದೊರೆಸ್ವಾಮಿ, ರವಿ ಮತ್ತಿತರರು ಇದ್ದರು.

ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ವಿಶೇಷ ಪೂಜೆ, ಶಾಸಕ ಜಿ.ಟಿ.ದೇವೇಗೌಡ ದಂಪತಿ ಭಾಗಿ

ಕೆ.ಆರ್.ಪೇಟೆ:

ತಾಲೂಕಿನ ಭೂವರಹನಾಥ ಕ್ಷೇತ್ರದಲ್ಲಿ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.

ಮೈಸೂರಿನ ಶಾಸಕ ಜಿ.ಟಿ.ದೇವೇಗೌಡ ದಂಪತಿ ವಿಶೇಷ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿದರು.

ತಿರುಮಲ ತಿರುಪತಿ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ವರಹನಾಥ ಕಲ್ಲಹಳ್ಳಿ ಶ್ರೀಲಕ್ಷ್ಮಿ ಸಮೇತ ಭೂವರಹನಾಥ ಸ್ವಾಮಿ ಸುಕ್ಷೇತ್ರವನ್ನು ಶಾಸಕ ಜಿ.ಟಿ.ದೇವೇಗೌಡ ತಮ್ಮ ಧರ್ಮಪತ್ನಿ ಲಲಿತಾ ಅವರೊಂದಿಗೆ ಆಗಮಿಸಿ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯ ಸ್ವಾಮಿ ಮೂರ್ತಿಗೆ ನಡೆದ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಮಹೋತ್ಸವವನ್ನು ಕಣ್ತುಂಬಿಕೊಂಡರು.

ಬೆಳಗ್ಗೆ ಸ್ವಾಮಿ 1 ಸಾವಿರ ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನ ಹಾಲು, ಜೇನುತುಪ್ಪ ಹಸುವಿನ ತುಪ್ಪ, ಸುಗಂಧ ದ್ರವ್ಯಗಳು, ಅರಿಶಿನ, ಚಂದನ ಹಾಗೂ ಪವಿತ್ರ ಗಂಗಾಜಲದಿಂದ ವರಹನಾಥ ಸ್ವಾಮಿ 17 ಅಡಿ ಎತ್ತರದ ಮೂರ್ತಿಗೆ ಅಭಿಷೇಕ ಮಾಡಿದರು.

ನಂತರ ಮಲ್ಲಿಗೆ, ಜಾಜಿ ಸಂಪಿಗೆ, ಸೇವಂತಿಗೆ, ಕನಕಾಂಬರ, ಕಮಲ, ಪವಿತ್ರ ಪತ್ರೆಗಳು, ಧವನ, ತುಳಸಿ ಸೇರಿದಂತೆ 58 ಬಗೆಯ ವಿವಿಧ ಅಪರೂಪದ ಪುಷ್ಪಗಳಿಂದ ಪುಷ್ಪಾಭಿಷೇಕದೊಂದಿಗೆ ಪಟ್ಟಾಭಿಷೇಕ ಮಾಡಿ ಸಂಭ್ರಮಿಸಲಾಯಿತು. ಈ ವೇಳೆ ದೇವಾಲಯದ ವ್ಯವಸ್ಥಾಪಕ ಟ್ರಸ್ಟಿ ಶಿನಿವಾಸ ರಾಘವನ್ ಇದ್ದರು.