ವಿದ್ಯಾರ್ಥಿಗಳು ಗುರು ಹೇಳಿದ ಪಾಠವನ್ನು ವಿನಯ, ನಿಷ್ಠೆ, ವಿಧಿಯರಾಗಿ ಕೇಳಿ, ಮನನ ಮಾಡಿಕೊಂಡಾಗ ಶೈಕ್ಷಣಿಕ ಪ್ರಯಾಣದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಗೆಜ್ಜೆ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೆಜ್ಜೆ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳು ಗುರು ಹೇಳಿದ ಪಾಠವನ್ನು ವಿನಯ, ನಿಷ್ಠೆ, ವಿಧಿಯರಾಗಿ ಕೇಳಿ, ಮನನ ಮಾಡಿಕೊಂಡಾಗ ಶೈಕ್ಷಣಿಕ ಪ್ರಯಾಣದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಗೆಜ್ಜೆ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೆಜ್ಜೆ ಹೇಳಿದರು.ನಗರದ ಬಂಜಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ವೇದಿಕೆಯಿಂದ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸರ್ವಜ್ಞನ ಅನುಭಾವ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಸರ್ವಜ್ಞನ ಪರಿಸರ ಗುರು ಹಿರಿಯರು, ಸಮಾಜದಿಂದ ಜ್ಞಾನವನ್ನು ಪಡೆದು ಜ್ಞಾನದ ಪರ್ವತವೇ ಆಗಿ ರೂಪಗೊಂಡನು. ಸರ್ವಜ್ಞನು ಯಾರು ಮುಲಾಜಿಲ್ಲದ ತಪ್ಪು ಮಾಡಿದವರನ್ನು ಟೀಕಿಸುತ್ತ, ಒಳ್ಳೆ ಕೆಲಸವನ್ನು ಸ್ತುತಸ್ತುತ ದೇಸಿಯ ಮಟ್ಟಾದ ತ್ರಿಪದಿಯಲ್ಲಿ ಸಾಹಿತ್ಯ ರಚಿಸಿ ತ್ರಿಪದಿ ಬ್ರಹ್ಮ ಎನಿಸಿಕೊಂಡರು. ಸರ್ವಜ್ಞ ಸರಳವಾಗಿ ಜೀವನೋಪಾಯದ ಮಾರ್ಗಗಳನ್ನು ಸನ್ಮಾರ್ಗವನ್ನು ತ್ರಿಪದಿಗಳ ಮೂಲಕ ತಿಳಿಸಿದ್ದಾನೆ ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶ ದೇಶ ಸಮೃದ್ಧಿ ಸಾಧಿಸಲು ಶಿಕ್ಷಕರ ಪಾತ್ರ ಮಹತ್ವದಾಗಿದೆ. ಹೀಗಾಗಿ ಶಿಕ್ಷಕರು ಶರಣ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಂಬೂನಾಥ ಕಂಚಾರಿ ಮಾತನಾಡಿ, ವಿದ್ಯೆ ಉಳ್ಳವನ ಮುಖ ಮುದ್ದು ಬರುವಂತಿಕ್ಕೂ ಎಂದು ಸರ್ವಜ್ಞನ ತ್ರಿಪದಿಯನ್ನು ನೆನಪಿಸುತ್ತ ವಿದ್ಯೆಯ ಮಹತ್ವವನ್ನು ತಿಳಿಸಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.ಕಾಲೇಜಿನ ಪ್ರಾಚಾರ್ಯೆ ಡಾ.ಜಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ದತ್ತಿ ಕಾರ್ಯಕ್ರಮಗಳಿಗೆ ನಮ್ಮ ಕಾಲೇಜು ಯಾವಾಗಲೂ ಸಹಕಾರ ನೀಡುತ್ತದೆ. ಇದು ಜ್ಞಾನದಾಸೋದ ಕಾರ್ಯಕ್ರಮ ಮಕ್ಕಳಿಗೆ ಸಂಸ್ಕಾರ ನೀಡಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಹಾಗೂ ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ ಅವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಪ್ರಸ್ತಾವಿಕವಾಗಿ ಮಾತನಾಡಿದರು. ದಾಸೋಹಿಗಳಾದ ರವೀಂದ್ರ ಮೇಡೆಗಾರ, ಟಿ.ಬಿ.ಪವಾರ ಉಪಸ್ಥಿತರಿದ್ದರು. ಸತೀಶ ಮಣ್ಣೂರ ಸ್ವಾಗತಿಸಿದರು. ಎಸ್.ಸಿ.ಮಾಳಗಿ ವಂದಿಸಿದರು. ಶಂಕರ ಹುಣಸಗಿ ನಿರೂಪಿಸಿದರು.