ಹೊಸಕೋಟೆ: ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಜನ್ಮದಾತೆಗೆ ಪೂಜ್ಯನೀಯ ಅಗ್ರಸ್ಥಾನ ನೀಡಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಸಮೇತನಹಳ್ಳಿ ಗ್ರಾಪಂ ಮಹಿಳಾ ಗ್ರಾಮಸಭೆ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೯ ತಿಂಗಳು ಹೊತ್ತು ಮಗುವಿಗೆ ಜನ್ಮ ನೀಡುವ ತಾಯಿ ಸ್ಥಾನ ಅತ್ಯಂತ ಶ್ರೇಷ್ಠವಾದದ್ದು. ಗರ್ಭಿಣಿಯರಿಗೆ ಸೀಮಂತ ಮಾಡುವುದು, ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಆಶೀರ್ವಾದ ಲಭಿಸಿ ಸಂತೋಷ ಹಾಗೂ ಧೈರ್ಯ ತುಂಬುವುದಕ್ಕಾಗಿ. ಸಮೇತನಹಳ್ಳಿ ಗ್ರಾಪಂ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದರು.ಗ್ರಾಪಂ ಅಧ್ಯಕ್ಷ ನಡವತ್ತಿ ಕಾಂತರಾಜು ಮಾತನಾಡಿ, ಗ್ರಾಪಂ ವತಿಯಿಂದ ಇದೇ ಪ್ರಥಮ ಬಾರಿಗೆ ಮಹಿಳಾ ಗ್ರಾಮಸಭೆ ಜೊತೆಗೆ ಗ್ರಾಪಂ ವ್ಯಾಪ್ತಿಯ 143 ಗರ್ಭಿಣಿ ಮಹಿಳೆಯರನ್ನು ಒಂದೆಡೆ ಸೇರಿಸಿ ಸಾಮೂಹಿಕ ಸೀಮಂತ ಮಾಡುತ್ತಿದ್ದೇವೆ. ಇದು ಗರ್ಭಿಣಿಯರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವ ಸಾಮಾಜಿಕ ಕಾರ್ಯಕ್ರಮ ಎಂದರು.
ಪ್ರತಿಭಾ ಶರತ್ ಮಾತನಾಡಿ, ಗರ್ಭಿಣಿಯರು ಶಾಂತಚಿತ್ತರಾಗಿ ನೆಮ್ಮದಿಯಿಂದ ಇರಬೇಕು. ಪ್ರತಿ ಮಹಿಳೆಗೂ ತಾಯ್ತನ ಪವಿತ್ರವಾದುದು. ಮನಸ್ಥಿತಿಯ ಸಮತೋಲನ ಕಾಯ್ದುಕೊಳ್ಳಬೇಕು. ಮೊಬೈಲ್‌ಗಳಿಂದ ದೂರವಿದ್ದು ಉತ್ತಮ ಪುಸ್ತಕ ಗಳನ್ನು ಓದುವುದರಿಂದ ಮಗುವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಕೆಎಂಎಫ್ ಮಂಜುನಾಥ್, ತಾಪಂ ಇಒ ಮುನಿಯಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಿ.ಸಿ.ಲಕ್ಷ್ಮಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತಕೂರು ಮುನಿರಾಜು, ಮಾಜಿ ಅಧ್ಯಕ್ಷ ಬಾಬುರೆಡ್ಡಿ, ನಿರ್ದೇಶಕ ಆನಂದಾಚಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಳ್ಳಿ ದೇವರಾಜು, ಸಮೇತನಹಳ್ಳಿ ಸೊಣ್ಣಪ್ಪ, ಸಿಡಿಪಿಒ ಶಿವಮ್ಮ, ಬಿಎಂಆರ್‌ಡಿಎ ಸದಸ್ಯ ಕೊರಳೂರು ಸುರೇಶ್, ಪಿಡಿಒ ಪ್ರಸಾದ್ ಮತ್ತಿತರರು ಹಾಜರಿದ್ದರು.
ಫೋಟೋ : 25 ಹೆಚ್ ಎಸ್ ಕೆ 1 ಮತ್ತು 2
1:
ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.2: ಗರ್ಭಿಣಿ ಮಹಿಳೆಯರಿಗೆ ಶಾಸಕ ಶರತ್ ಬಚ್ಚೇಗೌಡ ಬಾಗಿನದ ಕಿಟ್ ನೀಡಿ ಶುಭ ಹಾರೈಸಿದರು.