ರಾಸುಗಳನ್ನು ತೊಳೆದು ವಿಶೇಷವಾಗಿ ಹೂವಿನ ಅಲಂಕಾರ ಮತ್ತು ಕೊಂಬುಗಳಿಗೆ ಬಣ್ಣ ಬಣ್ಣದ ಅಲಂಕಾರದೊಂದಿಗೆ ಸಿಂಗರಿಸಿ ಮೆರವಣಿಗೆ ಮಾಡಿ ಗೋವಿಗೆ ನಮಸ್ಕರಿಸುತಿದ್ದ ದೃಶ್ಯ ಕಂಡು ಬಂತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಾದ್ಯಂತ ಗುರುವಾರ ಮಕರ ಸಂಕ್ರಾಂತಿಯ ಸಡಗರ ಸಂಭ್ರಮದಿಂದ ಆಚರಿಸಿದರು.

ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ (ಸಕ್ಕರೆ) ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ತಮ್ಮ ಆಪ್ತೇಷ್ಟರಿಗೆ ಹಂಚಿ ಸಂತೋಷಪಡುತ್ತಾರೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಹೆಚ್ಚಿತ್ತು. ರೈತ ಮಿತ್ರ ಎನಿಸಿಕೊಂಡ ರಾಸುಗಳನ್ನು ತೊಳೆದು ವಿಶೇಷವಾಗಿ ಹೂವಿನ ಅಲಂಕಾರ ಮತ್ತು ಕೊಂಬುಗಳಿಗೆ ಬಣ್ಣ ಬಣ್ಣದ ಅಲಂಕಾರದೊಂದಿಗೆ ಸಿಂಗರಿಸಿ ಮೆರವಣಿಗೆ ಮಾಡಿ ಗೋವಿಗೆ ನಮಸ್ಕರಿಸುತಿದ್ದ ದೃಶ್ಯ ಕಂಡು ಬಂತು. ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚಿದರು.

ಮನೆಗಳ ಮುಂದೆ ಗೋ ಸಗಣಿಯಿಂದ ಮನೆಗಳ ಅಂಗಳವನ್ನು ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ ರಂಗೋಲಿಯ ಮಧ್ಯ ಭಾಗದಲ್ಲಿ ಪಿಳ್ಳೆ ರಾಯನ ಇಟ್ಟು ಪೂಜಿಸುತ್ತಿದ್ದರು. ಅದೇ ರೀತಿ ಮನೆ ಮನೆಗಳಲ್ಲೂ ಹೊಸ ಮಡಿಕೆ ತಂದು ಶುಚಿಗೊಳಿಸಿ ಅದರಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಇಟ್ಟು ಪ್ರಸಾದ ರೂಪದಲ್ಲಿ ಮನೆಯವರು ಸಹ ಸ್ವೀಕರಿಸಿದರು. ಮತ್ತು ಒಣ ಕೊಬ್ಬರಿ ಕಡಲೆಬೀಜ ಕಡಲೆ ಪಪ್ಪು ಬೆಲ್ಲದ ಚೂರು, ಬಿಳಿ ಎಳ್ಳು ಮಿಶ್ರಣ ಮಾಡಿದ ಪದಾರ್ಥವನ್ನು ದೇವರಿಗೆ ನೈವೇದ್ಯ ಇಟ್ಟು ನೆರೆಹೊರೆಯವರಿಗೆ ಹಂಚಿದರು.

ಎಲ್ಲಾ ದೇಗುಲಗಳಲ್ಲಿ ಬೆಳಗ್ಗಿನಿಂದಲೇ ಅಭಿಷೇಕ, ಹೋಮ, ಹವನ, ವಿಶೇಷ ಪೂಜೆ ನಡೆದವು.ಭಕ್ತಾರಿಗೆ ಪ್ರಸಾದವನ್ನು ಹಂಚುವ ದೃಶ್ಯಗಳು ಸಾಮಾನ್ಯವಾಗಿತ್ತು. ನಗರದ ಕಾರ್ಖಾನ ಪೇಟೆಯ ಶ್ರೀ ವೇಣುಗೋಪಾಲ ಸ್ವಾಮಿ ಭಜನೆ ಮಂದಿರದ ವತಿಯಿಂದ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ವೇಣುಗೋಪಾಲ ಸ್ವಾಮಿಯ ಬ್ರಹ್ಮರಥೋತ್ಸವವನ್ನು ವಿಜೃಂಭನೆಯಿಂದ ಆಚರಿಸಿ, ನೆರೆದ ಭಕ್ತರಿಗೆ ಪ್ರಸಾದ ಹಂಚಿದರು .

ಒಟ್ಟಾರೆಯಾಗಿ ಜಿಲ್ಲೆಯ ಜಿಲ್ಲಾ ಕೇಂದ್ರವು ಸೇರಿದಂತೆ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬವು ಇಂದು ಬೆಲ್ಲಾ ಬೆಳಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು.ಸಿಕೆಬಿ-2 ಮಕರ ಸಂಕ್ರಾಂತಿ ಪ್ರಯುಕ್ತ ತಾಲ್ಲೂಕಿನ ಅರೂರು ಗ್ರಾಮದ ಗೋಪಾಲಕೃಷ್ಣ-ಹೇಮಾವತಿ ದಂಪತಿಗಳು ತಮ್ಮ ಹಸುಗಳಿಗೆ ಗೋ ಪೂಜೆ ಮಾಡಿದರು