ಭಾರಿ ಶಬ್ಧದ ಸಿಡಿಲಿಗೆ ಬೆಚ್ಚಿದ ಗ್ರಾಮದ ಜನ

| Published : May 13 2024, 12:00 AM IST

ಸಾರಾಂಶ

ಭಾರಿ ಶಬ್ಧದ ಸಿಡಿಲಿಗೆ ಗ್ರಾಮದ ಜನರು ಭಯಭೀತರಾಗಿದ್ದಾರೆ. 2018ರಲ್ಲೂ ಇದೇ ರೀತಿ ಕಂಪನ ಕೇಳಿ ಬಂದಿತ್ತು.

ಮಡಿಕೇರಿ: ಭಾರಿ ಶಬ್ಧದ ಸಿಡಿಲಿಗೆ ಗ್ರಾಮದ ಜನರು ಬೆಚ್ಚಿದ ಘಟನೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ವ್ಯಾಪ್ತಿಯ ಬಾರಿಬೆಳ್ಳಚ್ಚುವಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ಸಿಡಿಲಿಗೆ ಗ್ರಾಮದ ತಿಮ್ಮಪ್ಪ ಎಂಬುವರ ಮನೆಯ ಒಂದು ಭಾಗ ಬಿದ್ದಿದೆ. ಗ್ರಾಮದ ಇತರೆ ಮನೆಗಳೂ ಸಿಡಿಲಿನ ಶಬ್ಧದ ಅನುಭವ ಆಗಿದೆ. 2018 ರಲ್ಲೂ ಇದೇ ರೀತಿ ಕಂಪನ, ಶಬ್ಧ ಕೇಳಿತ್ತು. ಬಳಿಕ ಇಡೀ ಗ್ರಾಮವೇ ಕುಸಿದು ಹೋಗಿತ್ತು.

ಸ್ಥಳಕ್ಕೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಭೂ ವಿಜ್ಞಾನಿಗಳು ಪರಿಶೀಲಿಸುವಂತೆ ಬೋಪಯ್ಯ ಆಗ್ರಹಿಸಿದರು.

2018 ರಲ್ಲಿ ಇದೇ ರೀತಿ ಶಬ್ಧ ಕೇಳಿ ಬಂದಿತ್ತು. ನಂತರ ಗ್ರಾಮದಲ್ಲಿ ಭೂ ಕುಸಿತವಾಗಿತ್ತು. ಈ ಭಾರಿ ಇನ್ನೂ ವಿಚಿತ್ರವಾಗಿದೆ. ಭಾರಿ ಶಬ್ಧದೊಂದಿಗೆ ಒಂದು ಸ್ಥಳದಲ್ಲಿ ಭೂಮಿಯೇ ಛಿದ್ರವಾಗಿದೆ. ಛಿದ್ರವಾಗಿ ಆ ಮಣ್ಣು ಮನೆಗಳಿಗೆಲ್ಲಾ ಬಡಿದಿದೆ. ಜನರು ಅಲ್ಲಿರುವುದಕ್ಕೆ ಆತಂಕ ಪಡುತ್ತಿದ್ದಾರೆ ಎಂದು ಕಾಲೂರು ಗ್ರಾಮ ಪಂಚಾಯಿತಿ ಶುಭ ಸೋಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.