ಶಿಕ್ಷಣಕ್ಕೆ ಶ್ರಮಿಸಿದ ಫುಲೆ ದಂಪತಿ ಆದರ್ಶಗಳ ಪಾಲಿಸಿ

| Published : Jan 03 2025, 12:30 AM IST

ಸಾರಾಂಶ

ಚಿಕ್ಕಮ್ಮನಹಟ್ಟಿ ನನ್ನ ಊಟ್ಟೂರಾಗಿದ್ದು, ಈ ಗ್ರಾಮದಲ್ಲಿ ಸುಮಾರು ₹೨೦ ಲಕ್ಷ ವೆಚ್ಚದಲ್ಲಿ ಶ್ರೀ ಪೂಜಾರಿ ಅಜ್ಜಯ್ಯ ದೇವಸ್ಥಾನ ಮಹಾದ್ವಾರ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ಚಿಕ್ಕಮ್ಮನಹಟ್ಟಿಯಲ್ಲಿ ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡಿ ಶಾಸಕ ದೇವೇಂದ್ರಪ್ಪ- - - ಕನ್ನಡಪ್ರಭ ವಾರ್ತೆ ಜಗಳೂರು

ಚಿಕ್ಕಮ್ಮನಹಟ್ಟಿ ನನ್ನ ಊಟ್ಟೂರಾಗಿದ್ದು, ಈ ಗ್ರಾಮದಲ್ಲಿ ಸುಮಾರು ₹೨೦ ಲಕ್ಷ ವೆಚ್ಚದಲ್ಲಿ ಶ್ರೀ ಪೂಜಾರಿ ಅಜ್ಜಯ್ಯ ದೇವಸ್ಥಾನ ಮಹಾದ್ವಾರ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ಶ್ರೀ ಪೂಜಾರಿ ಅಜ್ಜಯ್ಯ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕಾಮಗಾರಿ ಹಾಗೂ ವಿವಿಧ ಕಾಲನಿಗಳಲ್ಲಿ ಬೀದಿನೀರು ನಿರ್ವಹಣೆ ಸಲುವಾಗಿ ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಿಕ್ಕಮ್ಮನಹಟ್ಟಿಯಲ್ಲಿ ಸುಂದರವಾಗಿ ಕೆರೆ ನಿರ್ಮಿಸಲಾಗಿದೆ. ರಸ್ತೆ, ಚರಂಡಿಗಳ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಷೇತ್ರ ಅಭಿವೃದ್ಧಿಪಡಿಸುವುದು ನನ್ನ ಕರ್ತವ್ಯವೂ ಆಗಿದೆ ಎಂದರು.

ಬಡವರಿಗೆ ಶಿಕ್ಷಣ ಎನ್ನುವುದು ಮರೀಚಿಕೆಯಾಗಿತ್ತು. ಆದರೆ, ಸಾವಿತ್ರಿ ಬಾಫುಲೆ, ಜ್ಯೋತಿ ಬಾಫುಲೆ, ಡಾ. ಬಿ.ಅಂಬೇಡ್ಕರ್ ಅವರಂಥ ಮಹಾನ್ ನಾಯಕರು ಅಕ್ಷರಜ್ಞಾನ ಕಲಿಸಲು ಶ್ರಮಿಸಿದರು. ಅವರು ಬಾರದಿದ್ದರೇ ದಲಿತರು, ಹಿಂದುಳಿದ ವರ್ಗದವರು ಅಧಿಕಾರಿಗಳು, ಶಾಸಕರು, ಸಂಸದರು ಆಗಲು ಸಾಧ್ಯವಿರಲಿಲ್ಲ. ಈ ಹಿನ್ನೆಲೆ ಫುಲೆ ದಂಪತಿಯ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.

ಸಾಹಿತಿ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಬಡತನ, ಸಂಕಷ್ಟದ ಜೀವನ ಅನುಭವಿಸಿದಾಗ ಮಾತ್ರ ಜನರ ನೋವುಗಳ ಅರಿಯಲು ಸಾಧ್ಯ. ಕುಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ಹುಟ್ಟಿ, ಓದಿ, ಬೆಳೆದು ಇಂದು ಶಾಸಕ ಆಗಿರುವುದು ಡಾ. ಬಿ.ಆರ್. ಅಂಬೇಡ್ಕರ್ ದೇಶಕ್ಕೆ ನೀಡರುವ ಸಂವಿಧಾನ ಹಕ್ಕುಗಳಿಂದಾಗಿ. ಸಣ್ಣ ಹಳ್ಳಿಗೆ ಸುಂದರವಾದ ಗೋಕಟ್ಟೆಯನ್ನು ಕೆರೆಯಾಗಿ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಅಪರ ಜಿಲ್ಲಾಧಿಕಾರಿ ಲೋಕೇಶ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಜಿಪಂ ಎಇಇ ಶಿವಮೂರ್ತಿ, ನಿವೃತ್ತ ಶಿಕ್ಷಕ ಕಾಟಪ್ಪ, ಗ್ರಾಪಂ ಸದಸ್ಯ ಓ.ಮಂಜಣ್ಣ, ಬೊಮ್ಮಕ್ಕ, ಕೆಂಗಮ್ಮ, ಮಹಾಂತೇಶ ಮತ್ತಿತರರಿದ್ದರು.

- - - -02ಜೆ.ಜಿ.ಎಲ್.‌1:

ಚಿಕ್ಕಮ್ಮನಹಟ್ಟಿಯಲ್ಲಿ ಶ್ರೀ ಪೂಜಾರಿ ಅಜ್ಜಯ್ಯ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕಾಮಗಾರಿ ಹಾಗೂ ಬೀದಿನೀರು ನಿರ್ವಹಣೆ ಸಲುವಾಗಿ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಬಿ. ದೇವೇಂದ್ರಪ್ಪ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.