ಸಾರಾಂಶ
ಕನ್ನಡ ನೆಲದ ದೇಸಿ ಸಂಸ್ಕೃತಿಯನ್ನು ಕೀರ್ತನೆಗಳ ಮೂಲಕ ಜನತೆಯ ಎದೆಗೆ ಬಿತ್ತಿದ ಕನಕದಾಸರು ಸಮಾನತೆಯ ಹರಿಕಾರರು ಎಂದು ಕಲಾವಿದ, ಸಾಹಿತಿ ಜಯಾನಂದ ಮಾದರ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಕನ್ನಡ ನೆಲದ ದೇಸಿ ಸಂಸ್ಕೃತಿಯನ್ನು ಕೀರ್ತನೆಗಳ ಮೂಲಕ ಜನತೆಯ ಎದೆಗೆ ಬಿತ್ತಿದ ಕನಕದಾಸರು ಸಮಾನತೆಯ ಹರಿಕಾರರು ಎಂದು ಕಲಾವಿದ, ಸಾಹಿತಿ ಜಯಾನಂದ ಮಾದರ ಹೇಳಿದರು.ಪ್ರಭಾ ನಗರ ಘಟಪ್ರಭಾ ಸಕ್ಕರೆ ಕಾರ್ಖಾನೆಯ ಹತ್ತಿರ ಕನಕದಾಸ ಸೇವಾ ಸಮಿತಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದವರು ಹಮ್ಮಿಕೊಂಡಿದ್ದ 537ನೇ ಕನಕದಾಸ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಜನಾಂಗಕ್ಕೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಮೂಲಕ ದಾಸರ ತತ್ವ ಚಿಂತನೆಗಳನ್ನು ಬೋಧಿಸುವ ಅಗತ್ಯವಿದೆ ಎಂದರು.
ಸುಮಂಗಲೆಯರ ಆರತಿ ಕುಂಭಮೇಳದೊಂದಿಗೆ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆ ಜರುಗಿತು. ಶಿಂಗಳಾಪುರದ ಶ್ರೀ ಸಿದ್ಧಾರೂಢ ಆಶ್ರಮದ ಶಿವಾನಂದ ಸ್ವಾಮೀಜಿ ಹಾಗೂ ಆದಿಗುರು ಶಂಕರಾಚಾರ್ಯ ಮಠದ ದಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಯಪ್ಪ ಮುತ್ತೆಪ್ಪಗೋಳ, ಖಾನಪ್ಪ ಚಳ್ಳಾಯಿ, ವಿಠಲ ಮಾರ್‍ಯಾಗೋಳ, ಬಾಳಪ್ಪ ಗೋಟ್ಯಾಗೋಳ, ಮಾರುತಿ ಚಳ್ಳಾಯಿ, ವಿಠಲ ಚಳ್ಳಾಯಿ, ಮಾಳಪ್ಪ ಆನಂದ ಭೀರನಗಡ್ಡಿ ಇದ್ದರು.ನಾರಾಯಣ ಜಾಧವ ಸ್ವಾಗತಿಸಿದರು. ಆನಂದ ಸೋರಗಾವಿ ನಿರೂಪಿಸಿದರು. ಮಲ್ಲಿಕಾರ್ಜುನ ಈಳಿಗೇರ ವಂದಿಸಿದರು.