ದರ್ಶನ್‌ ಗ್ಯಾಂಗ್‌ ಹತ್ಯೆ ನಡೆಸಿದೆಎನ್ನಲಾದ ಜಾಗಕ್ಕೆ ತೆರಿಗೆ ಕಟ್ಟಿಲ್ಲ!

| Published : Jun 21 2024, 01:02 AM IST / Updated: Jun 21 2024, 07:50 AM IST

ದರ್ಶನ್‌ ಗ್ಯಾಂಗ್‌ ಹತ್ಯೆ ನಡೆಸಿದೆಎನ್ನಲಾದ ಜಾಗಕ್ಕೆ ತೆರಿಗೆ ಕಟ್ಟಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ನಟ ದರ್ಶನ್‌ ಮತ್ತು ಅವರ ಗ್ಯಾಂಗ್‌ ಕೊಲೆ ನಡೆಸಿದೆ ಎನ್ನಲಾದ ರಾಜರಾಜೇಶ್ವರಿನಗರದ ಶೆಡ್‌ ಮತ್ತು ಜಾಗದ ಮಾಲೀಕ ಕೆ.ಜಯಣ್ಣ ಅವರಿಗೆ ಬಿಬಿಎಂಪಿ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

 ಬೆಂಗಳೂರು :  ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ನಟ ದರ್ಶನ್‌ ಮತ್ತು ಅವರ ಗ್ಯಾಂಗ್‌ ಕೊಲೆ ನಡೆಸಿದೆ ಎನ್ನಲಾದ ರಾಜರಾಜೇಶ್ವರಿನಗರದ ಶೆಡ್‌ ಮತ್ತು ಜಾಗದ ಮಾಲೀಕ ಕೆ.ಜಯಣ್ಣ ಅವರಿಗೆ ಬಿಬಿಎಂಪಿ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

ಕೆಂಗೇರಿ ಉಪ ವಲಯದ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್‌ನ ಪಟ್ಟಣಗೆರೆ ಮುಖ್ಯ ರಸ್ತೆಯ ಬಿಎಚ್‌ಇಎಲ್‌ ಬಡಾವಣೆಯಲ್ಲಿರುವ ಕೆ.ಜಯಣ್ಣ ಅವರ ಮಾಲೀಕತ್ವದ ಶೆಡ್‌ ಹಾಗೂ ಖಾಲಿ ಜಾಗದಲ್ಲಿ ನಟ ದರ್ಶನ್‌ ಮತ್ತು ತಂಡ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ನಡೆಸಿತು ಎಂಬ ಆರೋಪ ಕೇಳಿ ಬಂದಿದೆ. ಕೊಲೆ ನಡೆಸಲಾಗಿದೆ ಎಂಬ ಜಾಗ ಹಾಗೂ ಶೆಡ್‌ ಮಾಲೀಕ ಕೆ.ಜಯಣ್ಣ ತಂದೆ ಲೇ.ಕೃಷ್ಣಪ್ಪ ಅವರಿಗೆ ಇದೀಗ ಬಿಬಿಎಂಪಿ ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯು 2008ರಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂದು ನೋಟಿಸ್ ನೀಡಿದೆ.

ನೋಟಿಸ್‌ ತಲುಪಿದ 15 ದಿನದಲ್ಲಿ ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡು ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡಬೇಕು. ತಪ್ಪಿದಲ್ಲಿ ತಮ್ಮ ಸ್ವತ್ತಿಗೆ ಆಸ್ತಿ ತೆರಿಗೆಯನ್ನು ನಗರ ಪಾಲಿಕೆಯಲ್ಲಿ ಲಭ್ಯವಿರುವ ದಾಖಲೆಗಳ ಮಾಹಿತಿ ಆಧಾರದ ಮೇಲೆ ಆಸ್ತಿ ತೆರಿಗೆ ನಿರ್ಧಾರ ಮಾಡಿ ನೋಟಿಸ್‌ ಜಾರಿಗೊಳಿಸಲಾಗುವುದು. ಒಂದು ವೇಳೆ ಈಗಾಗಲೇ ಆಸ್ತಿ ತೆರಿಗೆ ಪಾವತಿ ಮಾಡಿದ್ದರೆ, ಸಂಬಂಧಪಟ್ಟ ದಾಖಲೆಗಳನ್ನು ಬಿಬಿಎಂಪಿ ಕಂದಾಯ ಅಧಿಕಾರಿಗಳಿಗೆ ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ನಿರ್ದೇಶಿಸಲಾಗಿದೆ.