'ಪೋಕ್ಸೋ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ'

| Published : Aug 30 2024, 01:08 AM IST / Updated: Aug 30 2024, 12:33 PM IST

'ಪೋಕ್ಸೋ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ'
Share this Article
  • FB
  • TW
  • Linkdin
  • Email

ಸಾರಾಂಶ

ಪೋಕ್ಸೋ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ ಎಂದು ಜೆಎಂಎಫ್ ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಸನ್ನ ಕುಮಾರ್ ಹೇಳಿದರು.

 ಹೊಸದುರ್ಗ :  ಪೋಕ್ಸೋ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ ಎಂದು ಜೆಎಂಎಫ್ ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಸನ್ನ ಕುಮಾರ್ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹೊಸದುರ್ಗ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪೋಕ್ಸೋ ಮತ್ತು ಬಾಲ್ಯ ವಿವಾಹ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇವಲ ಅತ್ಯಾಚಾರ ನಡೆದರೆ ಮಾತ್ರ ದೌರ್ಜನ್ಯವಲ್ಲ, ಅಸಭ್ಯವಾಗಿ ವರ್ತಿಸಿದರೂ ಅಂತವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಬಹುದು. ಮಕ್ಕಳು ತಮ್ಮ ಮೇಲೆ ಯಾವುದೇ ರೀತಿಯ ಅಸಭ್ಯ ವರ್ತನೆಗಳು ನಡೆದರೆ ನಿರ್ಭಯವಾಗಿ ನಿಮಗೆ ಯಾರು ಆಪ್ತರೇನಿಸುತ್ತಾರೋ ಅಂತವರ ಬಳಿ ತಿಳಿಸಿ ಪ್ರಕರಣ ದಾಖಲಿಸಬಹುದು ಎಂದರು.

ಸರ್ಕಾರಗಳು ಸಂವಿಧಾನದ ಅಡಿಯಲ್ಲಿ ಹೆಣ್ಣಿಗೆ ಮದುವೆ ವಯಸ್ಸು 18, ಗಂಡು ಮಕ್ಕಳಿಗೆ 21 ನಿಗದಿ ಮಾಡಿದೆ. ಈ ವಯಸ್ಸಿಗಿಂತ ಮುಂಚೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಈ ವಯಸ್ಸಿನಲ್ಲಿ ಓದುವ ಕಡೆ ಗಮನ ಹರಿಸಬೇಕು. ಮಕ್ಕಳು ಏನೇ ಕೆಲಸ ಮಾಡಿದರೂ ತಂದೆ ತಾಯಿಗಳಿಗೆ ಹೆಸರು ತರುವಂತಹ ಕೆಲಸ ಮಾಡಬೇಕು ಎಂದರು.

ಪ್ರಾಂಶುಪಾಲ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಜಗದೀಶ್ ನಾಯ್ಕ, ಸರ್ಕಾರಿ ಅಭಿಯೋಜಕಿ ಶಶಿಕಲಾ, ಪಿ ಎಸ್ ಐ ಮಹೇಶ್ ಇದ್ದರು.