ಪೊಲೀಸರು ದಿನಕ್ಕೆ 14 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಹಬ್ಬ-ಹರಿದಿನಗಳಲ್ಲಿ ಸಹ ಹೆಚ್ಚು ಸಮಯ ಕಾರ್ಯನಿರ್ವಹಿಸುತ್ತಾರೆ.
ಹುಬ್ಬಳ್ಳಿ:
ದೇಶದ ಸುರಕ್ಷತೆಗೆ ಪೊಲೀಸರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಜನಸಾಮಾನ್ಯರು ಉತ್ತಮ ಜೀವನ ನಡೆಸಲು ಪೊಲೀಸ್ ಇಲಾಖೆ ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಹೇಳಿದರು.ಇಲ್ಲಿನ ಹಳೆಯ ಸಿಎಆರ್ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾತನಾಡಿ, ಪೊಲೀಸರು ದಿನಕ್ಕೆ 14 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಹಬ್ಬ-ಹರಿದಿನಗಳಲ್ಲಿ ಸಹ ಹೆಚ್ಚು ಸಮಯ ಕಾರ್ಯನಿರ್ವಹಿಸುತ್ತಾರೆ ಎಂದರು. ಆರ್‌ಪಿಐ ಸಂತೋಷ ಭೋಜಪ್ಪಗೋಳ ನಾಯಕತ್ವದಲ್ಲಿ ಪೊಲೀಸ್ ಪಡೆ ಗೌರವ ವಂದನೆ ಸಲ್ಲಿಸಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಡಿಸೋಜಾ ಅವರ ನೇತೃತ್ವದಲ್ಲಿ ವಾದ್ಯಮೇಳ ತಂಡ ರಾಷ್ಟ್ರ ಗೀತೆ ನುಡಿಸಿದರು.ಮೇಯರ್ ದುರ್ಗಮ್ಮ ಬಿಜವಾಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಲ್ಲಪ್ಪ ಬಡಿಗೇರ, ಡಿಸಿಪಿಗಳಾದ ರವೀಶ ಸಿ.ಆರ್., ಶ್ರುತಿ ಎನ್.ಎಸ್, ಎಸಿಪಿ ಪ್ರಶಾಂತ ಸಿದ್ದಣ್ಣಗೌಡರ, ಉದ್ಯಮಿ ವಿಎಸ್‌ವಿ ಪ್ರಸಾದ, ಸತೀಶ ಮೆಹರವಾಡೆ, ಶಾಂತರಾಜ ಪೋಳ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು. ನಿಖಿಲ್ ನಾಯ್ಕ ನಿರೂಪಿಸಿ ವಂದಿಸಿದರು.