ಸಾರಾಂಶ
ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟುಹೋಗಿದ್ದ ₹1 ಲಕ್ಷ ಮೌಲ್ಯ ಬೆಲೆ ಬಾಳುವ ಬಂಗಾರದ ಆಭರಣಗಳಿದ್ದ ಬ್ಯಾಗ್ ಅನ್ನು ಪೊಲೀಸರು ಪತ್ತೆ ಮಾಡಿ, ಹಿಂದಿರುಗಿಸಿದ್ದಾರೆ.
ದಾವಣಗೆರೆ: ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟುಹೋಗಿದ್ದ ₹1 ಲಕ್ಷ ಮೌಲ್ಯ ಬೆಲೆ ಬಾಳುವ ಬಂಗಾರದ ಆಭರಣಗಳಿದ್ದ ಬ್ಯಾಗ್ ಅನ್ನು ಪೊಲೀಸರು ಪತ್ತೆ ಮಾಡಿ, ಹಿಂದಿರುಗಿಸಿದ್ದಾರೆ.
ನಜ್ಮಾ ಎಂಬವರು ನಗರದ ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಪಯಣಿಸಿ, ಬೀಡಿ ಲೇಔಟ್ ಬಳಿ ಆಟೋ ಇಳಿದಿದ್ದರು. ಆದರೆ, ಚಿನ್ನದ ಆಭರಣಗಳಿದ್ದ ಬ್ಯಾಗ್ ಅನ್ನು ಆಟೋದಲ್ಲಿ ಮರೆತು ಮನೆಗೆ ಹೋಗಿದ್ದರು. ಅನಂತರ ಆಜಾದ್ ನಗರ ಠಾಣೆಯಲ್ಲಿ ಬ್ಯಾಗ್ ಮರೆತು ಆಟೋದಲ್ಲಿ ಬಿಟ್ಟಿರುವ ಕುರಿತು ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಟೋ ರಿಕ್ಷಾ ಚಾಲಕನನ್ನು ಪತ್ತೆ ಮಾಡಿದರು. 15 ಗ್ರಾಂ ಬಂಗಾರದ ಆಭರಣ, ಬಟ್ಟೆ, ಆಧಾರ್ ಕಾರ್ಡ್ ಇದ್ದ ಬ್ಯಾಗನ್ನು ಆಟೋ ಚಾಲಕನ ಉಪಸ್ಥಿತಿಯಲ್ಲಿ ಸಂಬಂಧಿಸಿದ ಮಹಿಳೆಗೆ ಹಿಂದಿರುಗಿಸಿದರು.ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ ಮಾರ್ಗದರ್ಶನದಲ್ಲಿ, ಆಜಾದ್ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಶ್ವಿನ್ ಕುಮಾರ್, ಸಿಬ್ಬಂದಿ ಮಂಜುನಾಥ್ ನಾಯ್ಕ, ನರೇಶ್ ಎಪಿ, ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಕೃಷ್ಣ, ಎನ್, ವೆಂಕಟೇಶ್ ಜಿ.ಆರ್. ಕಾರ್ಯಚರಣೆ ತಂಡದಲ್ಲಿದ್ದರು. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ತಂಡಕ್ಕೆ ಅಭಿನಂದಿಸಿದ್ದಾರೆ.
- - - -18ಕೆಡಿವಿಜಿ34ಃ: