ಸಾರಾಂಶ
ತರೀಕೆರೆಯಲ್ಲಿ ಬೃಹತ್ ರಕ್ತದಾನ ಅಭಿಯಾನ-2025
ಕನ್ನಡಪ್ರಭ ವಾರ್ತೆ, ತರೀಕೆರೆರಕ್ತ ಭಗವಂತನ ಶಕ್ತಿ. ರಕ್ತ ದಾನ ಬೇರೆಯವರ ಪ್ರಾಣ ಕಾಪಾಡುತ್ತದೆ ಎಂದು ಚಿಕ್ಕಮಗಳೂರು ರಾಜಯೋಗಿನಿ ಬ್ರಹ್ಮಕುಮಾರಿ ಭಾಗ್ಯಕ್ಕ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ತರೀಕೆರೆ ಶಾಖೆಯಿಂದ ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ.ಪ್ರಕಾಶ್ ಮಣೀಜಿಯವರ 18ನೇ ಪುಣ್ಯ ಸ್ಮೃತಿದಿನದ ಪ್ರಯುಕ್ತ ನಡೆದ ಬೃಹತ್ ರಕ್ತದಾನ ಅಭಿಯಾನ-2025 ವಿಶ್ವಬಂಧುತ್ವ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆ. 22 ರಿಂದ 25ರ ವರೆಗೆ ದೇಶಾದ್ಯಂತ ನಡೆಯುವ ಅಭಿಯಾನದಲ್ಲಿ 1 ಲಕ್ಷ ಯೂನಿಟ್ ರಕ್ತ ಸಂಗ್ರಹ ಮಾಡುವ ಆಶಯ ಹೊಂದಲಾಗಿದೆ. ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ.ಪ್ರಕಾಶ್ ಮಣೀಜಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲ್ಲರಿಗೂ ಮಾತೃ ಸ್ವರೂಪದಲ್ಲಿ ಕಾಣುತ್ತಿದ್ದರು. ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ, ಸಹೋದರ ಸಹೋದರಿಯವರಿಗೆ ಮಾರ್ಗದರ್ಶಕರಾಗಿ ನಡೆಸಿ ಲಕ್ಷಾಂತರ ಜನರಿಗೆ ಬೆಳಕಾಗಿದ್ದರು. ದಾದಿ ಡಾ.ಪ್ರಕಾಶ್ ಮಣೀಜಿ ಜೀವನವೇ ಜಗತ್ತಿಗೆ ಬಹು ದೊಡ್ಡ ಸಂದೇಶ ಎಂದು ಹೇಳಿದರು.ಸಾರ್ವಜನಿಕ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ಇಂದು ಬಹಳ ವಿಶೇಷ ದಿನ, ಬಹಳಷ್ಟು ಕೇಂದ್ರದಲ್ಲಿ ರಕ್ತದಾನ ಅಭಿಯಾನ ನಡೆಯುತ್ತದೆ. ರಕ್ತದಾನ ಅತ್ಯಂತ ಶ್ರೇಷ್ಠದಾನ. ಸಾಕಷ್ಟು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಶಿಬಿರಗಳು ರಕ್ತದ ಕೊರತೆ ನೀಗಿಸುತ್ತಿದೆ. ರಕ್ತದಾನದಿಂದ ಬಹಳಷ್ಟು ಉಪಯೋಗವಿದೆ. ಪ್ರಾಣ ಉಳಿಸುವ ಜತೆಗೆ ಹೃದಯ ರೋಗ, ಒತ್ತಡ ಕಡಿಮೆ ಮಾಡುತ್ತದೆ ಎಂದು ಹೇಳಿದರು.ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದೇವೇಂದ್ರಪ್ಪ ರಾಥೋಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ. ರವಿಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ.ಹರೀಶ್, ನವೀನ್ ಕುಮಾರ್, ಪ್ರವೀಣ್ ನಾಹರ್, ಮಮತ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್, ತಾಪಂ ಕಾರ್ಯನಿರ್ವಾಹಕ ಡಾ.ಆರ್. ದೇವೇಂದ್ರಪ್ಪ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗೌತಮ್ ಎಲ್.ಆರ್. ಮೆಗ್ಗನ್ ಬೋಧನಾ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ ಅಪ್ತ ಸಮಾಲೋಕರು ಹನುಮಂತಪ್ಪ ಎಸ್. ಬಾವಿಕೆರೆ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲಕ ಡಾ. ಎಲ್.ಎಸ್.ಮಂಜುನಾಥ್, ಶಾರದ ಅಶೋಕ್ ಕುಮಾರ್, ಬಿ.ಕೆ.ಕಲೈವಾಣಿ, ಬಿ.ಕೆ.ಕವಿತಾ ಭಾಗವಹಿಸಿದ್ದರು.-
22ಕೆಟಿಆರ್.ಕೆ2ಃತರೀಕೆರೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ರಾಜಯೋಗಿನಿ ಬ್ರಹ್ಮಕುಮಾರಿ ಭಾಗ್ಯಕ್ಕ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೇವೇಂದ್ರ ರಾಥೋಡ್ , ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ, ರವಿಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ.ಹರೀಶ್, ಸಾರ್ವಜನಿಕ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಬಿ.ಕೆ.ಕಲೈವಾಣಿ ಭಾಗವಹಿಸಿದ್ದರು.