ಕೃಷ್ಣನ ನಾಮಬಲದಲ್ಲಿ ಸಂಕಷ್ಟ ನಿವಾರಣೆ ಶಕ್ತಿ: ಡಿ.ಟಿ.ರವೀಂದ್ರ

| Published : Aug 17 2025, 01:34 AM IST

ಸಾರಾಂಶ

ಭಗವಾನ್ ಶ್ರೀಕೃಷ್ಣ ಅವತಾರಪುರುಷ, ಸದಾಕಾಲ ಭಕ್ತರ ಶ್ರೇಯಸ್ಸನ್ನು ಬಯಸುವ ಎಲ್ಲಾ ಸದ್ಗುಣಗಳನ್ನು ಹೊಂದಿರುವ ಮಹಾನ್‌ ಶಕ್ತಿ. ತನ್ನ ಬಾಲ್ಯದಲ್ಲಿಯೇ ಅನೇಕ ಲೀಲೆಗಳ ಮೂಲಕ ಧರ್ಮವನ್ನು ಕಾಪಾಡುವ ಇಚ್ಚಾಶಕ್ತಿ ಹೊಂದಿದ್ದು ಇದು ಇಂದಿಗೂ ಪ್ರಸ್ತುತವಾಗಿದೆ ಎಂದು ಸಾಣಿಕೆರೆ ವಶಿಷ್ಠ ಶೈಕ್ಷಣಿಕ ಅಭಿವೃದ್ದಿ ಅಕಾಡೆಮಿ ವೇದ ಶಾಲೆಯ ಅಧ್ಯಕ್ಷ ಡಿ.ಟಿ.ರವೀಂದ್ರ ತಿಳಿಸಿದರು.

ಚಳ್ಳಕೆರೆ: ಭಗವಾನ್ ಶ್ರೀಕೃಷ್ಣ ಅವತಾರಪುರುಷ, ಸದಾಕಾಲ ಭಕ್ತರ ಶ್ರೇಯಸ್ಸನ್ನು ಬಯಸುವ ಎಲ್ಲಾ ಸದ್ಗುಣಗಳನ್ನು ಹೊಂದಿರುವ ಮಹಾನ್‌ ಶಕ್ತಿ. ತನ್ನ ಬಾಲ್ಯದಲ್ಲಿಯೇ ಅನೇಕ ಲೀಲೆಗಳ ಮೂಲಕ ಧರ್ಮವನ್ನು ಕಾಪಾಡುವ ಇಚ್ಚಾಶಕ್ತಿ ಹೊಂದಿದ್ದು ಇದು ಇಂದಿಗೂ ಪ್ರಸ್ತುತವಾಗಿದೆ ಎಂದು ಸಾಣಿಕೆರೆ ವಶಿಷ್ಠ ಶೈಕ್ಷಣಿಕ ಅಭಿವೃದ್ದಿ ಅಕಾಡೆಮಿ ವೇದ ಶಾಲೆಯ ಅಧ್ಯಕ್ಷ ಡಿ.ಟಿ.ರವೀಂದ್ರ ತಿಳಿಸಿದರು.

ಇಲ್ಲಿಯ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತನಾಡಿದರು. ಶಾಲೆಯ ಪುಟಾಣಿ ಮಕ್ಕಳು ಶ್ರೀಕೃಷ್ಣ, ರಾಧೆಯ ವೇಷದಲ್ಲಿ ಎಲ್ಲರ ಗಮನಸೆಳೆದರು. ಸಂಸ್ಥೆ ವತಿಯಿಂದ ಕೃಷ್ಣ, ರಾಧೆಯ ವೇಷ ಧರಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ಕಿರಣ್, ಪ್ರಧಾನ ವ್ಯವಸ್ಥಾಪಕ ಆರ್.ವಿಜಯ್, ಪ್ರಾಂಶುಪಾಲ ಸಿ.ಎಂ.ಸಂದೀಪ್, ಬಿ.ಆರ್.ಪುಪ್ಪರಾಣಿ, ಅಧೀಕ್ಷಕ ಸಿ.ವಿರೂಪಾಕ್ಷಪ್ಪ, ಜಿ.ಎಸ್.ಚೇತನ್, ಸಂದೀಪ್ ಮುಂತಾದವರು ಭಾಗವಹಿಸಿದ್ದರು.