ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗೆ ಅಧ್ಯಕ್ಷರ ತರಾಟೆ

| Published : Nov 29 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಒಳಚರಂಡಿ ಕಾಮಗಾರಿಗೆ ನೀಡಲಾಗಿದ್ದ ಅವಧಿ ಮುಗಿದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ನೋಟಿಸ್‌ ನೀಡಿ ಎಂದು ಹೇಳಿದರೂ ಯಾವುದೇ ಕ್ರಮಕೈಗೊಂಡಿಲ್ಲ. ನಿಮಗೆ ಏನಾದರೂ ತೊಂದರೆಗಳಿದ್ದರೆ ಹೇಳಿ, ಅದನ್ನು ಬಿಟ್ಟು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾಮಗಾರಿ ಮಾಡಿದರೆ ನಡೆಯುವುದಿಲ್ಲ ಎಂದು ಒಳಚರಂಡಿ ವಿಭಾಗದ ಎಂ.ಎಲ್‌.ಹೊನಕಟ್ಟಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಸಿಂದಗಿ:

ಒಳಚರಂಡಿ ಕಾಮಗಾರಿಗೆ ನೀಡಲಾಗಿದ್ದ ಅವಧಿ ಮುಗಿದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ನೋಟಿಸ್‌ ನೀಡಿ ಎಂದು ಹೇಳಿದರೂ ಯಾವುದೇ ಕ್ರಮಕೈಗೊಂಡಿಲ್ಲ. ನಿಮಗೆ ಏನಾದರೂ ತೊಂದರೆಗಳಿದ್ದರೆ ಹೇಳಿ, ಅದನ್ನು ಬಿಟ್ಟು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾಮಗಾರಿ ಮಾಡಿದರೆ ನಡೆಯುವುದಿಲ್ಲ ಎಂದು ಒಳಚರಂಡಿ ವಿಭಾಗದ ಎಂ.ಎಲ್‌.ಹೊನಕಟ್ಟಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ತರಾಟೆಗೆ ತೆಗೆದುಕೊಂಡರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪುರಸಭೆಯ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಲಾಗಿದೆ. ನೀವು ಅಂದು ಎಲ್ಲಿಗೆ ರಸ್ತೆ ಇದೆಯೋ ಅದರ ಪಕ್ಕದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟರೆ, ವಿದ್ಯುತ್ ಇಲಾಖೆಯವರು ವಿದ್ಯುತ್ ಕಂಬಗಳು ಪಕ್ಕದಲ್ಲಿಯೇ ಹಾಕಿದ್ದಾರೆ. ಹಾಕುವ ಮುಂಚೆ ಯೋಚಿಸಿದರೇ ಇಂದು ರಸ್ತೆ ಮಧ್ಯದಲ್ಲಿ ಕಂಬಗಳು ಬರುತ್ತಿರಲಿಲ್ಲ. ಇದೀಗ ರಸ್ತೆಯ ಮೇಲಿರುವ ಕಂಬಗಳನ್ನು ಸ್ಥಳಾಂತರಿಸಬೇಕಾದರೆ ಅದಕ್ಕೆ ಪುರಸಭೆ ಹಣ ಪಾವತಿಸಬೇಕು ಎನ್ನುತ್ತೀರಿ. ಆದರೆ, ಕಂಬಗಳನ್ನು ಸ್ಥಳಾಂತರಿಸಲು ಸುಮಾರು ₹ ೫೦-೬೦ಲಕ್ಷ ಕಟ್ಟಬೇಕಾಗುತ್ತದೆ. ಅಷ್ಟೊಂದು ಆದಾಯ ಪುರಸಭೆ ಹೊಂದಿಲ್ಲ. ನಮ್ಮ ಬಜೆಟ್ ನಲ್ಲಿ ಜನರಿಗೆ ಮೂಲಭೂತ ಸೌಕರ್ಯ ನೀಡಬೇಕಾಗಿದೆ ನೀವು ಆದಾಯಕ್ಕಿಂತಲೂ ಹೆಚ್ಚಿನ ಹಣ ವಿದ್ಯುತ್ ಇಲಾಖೆಗೆ ಕಟ್ಟುವುದು ಹೇಗೆ..? ನೀವು ಮಾಡಿರುವ ತಪ್ಪಿಗೆ ಪುರಸಭೆಗೆ ಹೊರೆ ಹಾಕುವುದು ಸರಿಯಲ್ಲ. ಪುರಸಭೆ ವತಿಯಿಂದ ಜೆಸಿಬಿ ವಾಹನ ಸೌಲಭ್ಯ ಒದಗಿಸುತ್ತೇವೆ. ಅರಣ್ಯ ಇಲಾಖೆಯ ಗಿಡಗಳು ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿ ಕೊಡುವಂತೆ ಎಂದು ತಿಳಿಸಿದರು.

ಪುರಸಭೆ ಚೆಕ್‌ಗಳು ಬೇಕಾಬಿಟ್ಟಿಯಾಗಿ ಸಂದಾಯವಾಗುತ್ತಿವೆ. ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಗಮನಕ್ಕೆ ಬರುತ್ತಿಲ್ಲವೇ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ವರದಿಗಾರರ ಪ್ರಶ್ನೆಗೆ ಪುರಸಭೆಯ ಮುಖ್ಯಾಧಿಕಾರಿ ಎಸ್.ರಾಜಶೇಖರ ಉತ್ತರಿಸಿ, ಹಾಗೆ ಆಗಲು ಸಾಧ್ಯವಿಲ್ಲ. ಒಂದು ವೇಳೆ ಬೋಗಸ್ ಚಕ್‌ ಇದ್ದರೇ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಮತ್ತು ಸಂಬಂಧಿಸಿದ ಬ್ಯಾಂಕ್‌ಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ ಎಂದು ಹೇಳಿದರು.ಈ ವೇಳೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮುಖ್ಯಾಧಿಕಾರಿ ಎಸ್. ರಾಜಶೇಖರ, ಅಜರ್ ನಾಟೀಕಾರ, ನಬಿರಸೂಲ್ ಉಸ್ತಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಗಳು ಇದ್ದರು.ಕೋಟ್‌

ಪುರಸಭೆಗೆ ಬಜೆಟ್‌ಗೆ ಅನುದಾನ ನೀಡುವ ಕುರಿತು ಚರ್ಚಿಸಿದ್ದೇನೆ. ಅವರ ಕೂಡ ಸಹಕರಿಸುವ ಭರವಸೆ ನನಗಿದೆ. ನನಗೆ ಬೇಕಾಗುವ ಅಂದಾಜು ಅನುದಾನದ ಕುರಿತು ಶಾಸಕರಿಗೆ ನಾನೇ ಸ್ವತಃ ಪತ್ರ ಬರೆದು ಮನವಿ ಮಾಡುವೆ. ಶಾಂತವೀರ ಬಿರಾದಾರ, ಪುರಸಭೆ ಅಧ್ಯಕ್ಷ