ಸಾರಾಂಶ
ಇಲ್ಲಿಯ ಪುರಸಭೆ ಅಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ವಿಷಯವಾಗಿ ಸಭೆಯ ನೋಟಿಸ್ ನೀಡಲು ತೆರಳಿದ ಜವಾನನೊಂದಿಗೆ ಅಧ್ಯಕ್ಷರು ಕೈಕೈ ಮಿಲಾಯಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
- ಮಲೇಬೆನ್ನೂರು ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ವಿಷಯದ ನೋಟಿಸ್
- ರಾತ್ರಿಯೇ ನೋಟಿಸ್ ನೀಡಲು ಬಂದಿದ್ದೀಯ ಎಂದು ಅಧ್ಯಕ್ಷ ಹನುಮಂತಪ್ಪ ದುರ್ವರ್ತನೆ- - -
ಮಲೇಬೆನ್ನೂರು: ಇಲ್ಲಿಯ ಪುರಸಭೆ ಅಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ವಿಷಯವಾಗಿ ಸಭೆಯ ನೋಟಿಸ್ ನೀಡಲು ತೆರಳಿದ ಜವಾನನೊಂದಿಗೆ ಅಧ್ಯಕ್ಷರು ಕೈಕೈ ಮಿಲಾಯಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಆ.೧ರಂದು ಬೆಳಗ್ಗೆ ೧೧ ಗಂಟೆಗೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಸಭೆ ಆಯೋಜಿಸಲಾಗಿತ್ತು. ಕಚೇರಿ ಜವಾನ ಕುಮಾರ್ ಅಧ್ಯಕ್ಷ ಹನುಮಂತಪ್ಪ ಅವರಿಗೆ ರಾತ್ರಿ ನೋಟಿಸ್ ನೀಡಲು ತೆರಳಿದ್ದರು. ಆಗ ನೋಟಿಸ್ ನೀಡಲು ರಾತ್ರಿ ಬಂದಿದ್ದೀಯಾ ಎಂದು ಜವಾನ ಕುಮಾರ್ ಅವರ ಕೈ ತಿರುವಿದ ಘಟನೆ ನಡೆದಿದೆ.ಗುರುವಾರ ಬೆಳಗ್ಗೆ ಪೌರಸೇವಾ ನೌಕರರು ಚೌಡಪ್ಪ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಿಬ್ಬಂದಿ ಜತೆ ಅಧ್ಯಕ್ಷರು ನಡೆಸಿದ ವರ್ತನೆಯನ್ನು ಖಂಡಿಸಿದರು. ಕೆಲ ಪುರಸಭಾ ಸದಸ್ಯರಿಗೂ ಮಾಹಿತಿ ತಿಳಿಸಿ, ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ, ಅಧ್ಯಕ್ಷರಿಗೆ ಬುದ್ಧಿ ಹೇಳಿದ್ದಾರೆ.
ಬಳಿಕ ಅಧ್ಯಕ್ಷ ಹನುಮಂತಪ್ಪ ಅವರು ಇನ್ನು ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳುತ್ತೇನೆ. ಮತ್ತೊಮ್ಮೆ ಈ ತಪ್ಪು ಮಾಡುವುದಿಲ್ಲ, ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ. ಬಳಿಕ ವಿಷಯ ಸುಖಾಂತ್ಯ ಕಂಡಿದೆ.ಸಭೆಯಲ್ಲಿ ಮುಖ್ಯಾಧಿಕಾರಿ ಜಯಲಕ್ಷ್ಮೀ, ಸದಸ್ಯರಾದ ನಯಾಜ್, ಆರೀಫ್, ರೇವಣಸಿದ್ದೇಶ್, ಷಾ ಅಬ್ರಾರ್ ಪೌರ ಸೇವಾ ನೌಕರರು ಇದ್ದರು.
- - --ಚಿತ್ರ೨: ಪೌರಸವಾ ನೌಕರರು, ಪುರಸಭಾ ಸದಸ್ಯರ ಸಭೆಯಲ್ಲಿ ಅಧ್ಯಕ್ಷರ ವರ್ತನೆ ಖಂಡಿಸಲಾಯಿತು.