ಶಿರಹಟ್ಟಿ: ಪತ್ರಕರ್ತರು ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ಯುವ ಮುಖಂಡ ವಿರುಪಾಕ್ಷಪ್ಪ ನಂದೆಣ್ಣವರ ತಿಳಿಸಿದರು.ಕೆ.ಎಚ್. ಪಾಟೀಲ ಹಾಗೂ ಆನಂದಸ್ವಾಮಿ ಗಡ್ಡದ್ದೇವರಮಠ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಶಿಕ್ಷಕರ ಸೊಸೈಟಿಯಲ್ಲಿ ನೂತನ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತರು ರಾಜಕಾರಣಿಗಳ ನಿರ್ಧಾರಗಳು, ಯೋಜನೆಗಳು ಹಾಗೂ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಜನರಿಗೆ ಸರಳವಾಗಿ ಮತ್ತು ಸ್ಪಷ್ಟವಾಗಿ ತಿಳಿಸುತ್ತಾರೆ. ಇದರಿಂದ ಜನರು ರಾಜ್ಯ ಮತ್ತು ದೇಶದ ರಾಜಕೀಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಪತ್ರಕರ್ತರು ಸತ್ಯವನ್ನು ಹೊರತರುವ ಜವಾಬ್ದಾರಿಯನ್ನೂ ಹೊರುತ್ತಾರೆ. ಅವರು ಪ್ರಶ್ನೆಗಳನ್ನು ಕೇಳುವುದು ತಪ್ಪುಗಳನ್ನು ಬಹಿರಂಗಪಡಿಸುವುದು ಮತ್ತು ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುವುದು ಮಖ್ಯ. ಇದು ಪ್ರಜಾಪ್ರಭುತ್ವದ ಅರೋಗ್ಯಕರ ಕಾರ್ಯಾಚರಣೆಗೆ ಸಹಾಯಕವಾಗುತ್ತದೆ ಎಂದರು.ಮುಖಂಡರಾದ ಪವನ ಈಳಗೇರ, ಗಿರೀಶ ಶೆಟರೆಡ್ಡಿ ಮಾತನಾಡಿ, ಸಮಾಜದಲ್ಲಿನ ನೈಜ ಸ್ಥಿತಿಯನ್ನು ಹೊರತಂದು ಸತ್ಯವನ್ನು ಜನರ ಮುಂದೆ ಇಡುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ನೈಜ ಘಟನೆಗಳ ವರದಿ, ಸಮಾಜದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರ, ಸಮಸ್ಯೆಗಳು ಇತ್ಯಾದಿಗಳನ್ನು ಜನರಿಗೆ ತಿಳಿಸುವುದು. ಸತ್ಯದ ಅನ್ವೇಷಣೆ ಯಾವುದೇ ವಿಷಯವನ್ನು ಪರಿಶೀಲಿಸಿ, ನಿಖರವಾದ ಮಾಹಿತಿಯನ್ನು ನೀಡುವುದು ಪ್ರಮುಖವಾಗಿದೆ ಎಂದರು.
ಆನಂದ ಕೋಳಿ, ಸಂಜೀವರೆಡ್ಡಿ ವೆಂಕರಡ್ಡಿ, ಅಜರ್ ಹೆಸರೂರು, ಉದಯ ಕೆ. ಮಾಗಡಿ, ಮಲ್ಲಿಕಾರ್ಜುನ ಪಾಟೀಲ್, ಭರಮರಡ್ಡಿ ಗೋವಣ್ಣವರ, ಪಾಲಾಕ್ಷಪ್ಪ ಇಳಿಗೇರ, ಮಲ್ಲಿಕ್ ನಗಾರಿ, ಚನ್ನಪ್ಪ ಮರೀಗೌಡ್ರ, ಅಬ್ಬು ಮುಳಗುಂದ, ಸುನೀಲ ಜಾಧವ, ರಾಘವೇಂದ್ರ ಕುಲಕರ್ಣಿ, ನಿಂಗಪ್ಪ ಹಮ್ಮಿಗಿ, ಪ್ರದೀಪ ಗೊಡಚಪ್ಪನವರ, ಭರಮಪ್ಪ ಬಳೂಟಗಿ, ಗೌರೀಶ ನಾಗಶೆಟ್ಟಿ, ವೀರೇಶ ಉಮನಾಬಾದಿ ಸೇರಿದಂತೆ ನೂರಾರು ಯುವಕರು ಹಾಗೂ ಅಭಿಮಾನಿ ಬಳಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.