- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕಮಗಳೂರು ಘಟಕದಿಂದ ನೂತನ ಪದಾಧಿಕಾರಿಗಳ ಪದಗ್ರಹಣ, ಪತ್ರಿಕಾ ದಿನಾಚರಣೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕಮಗಳೂರು ಘಟಕದ 2025-28ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಪತ್ರಿಕಾ ದಿನಾಚರಣೆ ಹಾಗೂ ಕೆಯುಡಬ್ಲ್ಯುಜೆ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕಾರಂಗ ಜನಪರವಾಗಿ ನಿಂತು ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಪತ್ರಿಕಾರಂಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಪತ್ರಿಕೋದ್ಯಮ ಸಮಾಜದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಖಡ್ಗಕ್ಕಿಂತ ಲೇಖನಿ ಹರಿತ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಬೆನ್ನೆಲುಬು. ಸಮಾಜದಲ್ಲಿ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಸಂಘದಿಂದ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಇತ್ತೀಚಿನ ವರ್ಷಗಳಿಂದ ನಿರಂತರ ವಾಗಿ ನೀಡುತ್ತಿದೆ. ಇಂದು ಐದನೇ ದತ್ತಿ ಪ್ರಶಸ್ತಿ ಪ್ರದಾನಮಾಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್‌ಗೌಡ, ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮೊದಲಾದವರಿದ್ದರು.-- ಬಾಕ್ಸ್----ಸುಳ್ಳು ಸುದ್ದಿ ಪತ್ತೆಗೆ ಎಐ ಪರಿಹಾರ: ರವಿ ಹೆಗಡೆ
ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳ ಸತ್ಯಾಸತ್ಯತೆ ತಿಳಿಯುವುದಕ್ಕೆ ಆರ್ಟಿಫಿಯಲ್ ಇಂಟೆಲಿಜೆನ್ಸ್ (ಎಐ) ಒಂದೇ ಪರಿಹಾರವಾಗಿದೆ ಎಂದು ಕನ್ನಡಪ್ರಭ ಹಾಗೂ ಏಷಿಯಾ ನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.ಎಡ ಮತ್ತು ಬಲ ಪಂಥಗಳ ನಡುವೆ ಸತ್ಯ ಮರೆಯಾಗಲಿದ್ದು, ತಮ್ಮ ವಿಚಾರಗಳನ್ನು ಸಮಾಜದ ಮುಂದೆ ತರುವ ಉದ್ದೇಶ ದಿಂದ ಅನೇಕ ವಾಸ್ತಾವಂಶಗಳನ್ನು ಮುಚ್ಚಿಡಲಾಗುತ್ತಿದೆ. ಜತೆಗೆ, ಸುಳ್ಳು ಸುದ್ದಿ ಸೃಷ್ಟಿಸಲಾಗುತ್ತದೆ. ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ಪರಿಶೀಲನೆ ಮಾಡಿಕೊಳ್ಳುವುದಕ್ಕೆ ಸದ್ಯಕ್ಕೆ ಇರುವ ಪರಿಹಾರ ಮಾರ್ಗ ಎಂದರೆ, ಆರ್ಟಿಫಿಯಲ್ ಇಂಟೆಲಿಜೆನ್ಸ್ (ಎಐ) ಒಂದೇ ಎಂದು ಹೇಳಿದರು.ಓದುಗರು ಪತ್ರಿಕೋದ್ಯಮದ ಮೇಲೆ ಅಪಾರವಾದ ವಿಶ್ವಾಸಾರ್ಹತೆ ಇಟ್ಟುಕೊಂಡಿದ್ದಾನೆ. ಈ ವಿಶ್ವಾಸ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಪತ್ರಿಕೋದ್ಯಮದ ಮೇಲಿದೆ. ಈ ನಿಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಪ್ರಸ್ತುತ ಪತ್ರಿಕೋದ್ಯಮ ಹೊಸ ಸವಾಲು ಎದುರಿಸುತ್ತಿದೆ. ಹೊಸ ಸವಾಲುಗಳಿಗೆ ಹೊಸ ರೀತಿ ವೇದಿಕೆ ಸೃಷ್ಟಿಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದರು.---ಬಾಕ್ಸ್---
ಮಾಧ್ಯಮಗಳಿಗೆ ಸವಾಲುಗಳ ನಡುವೆ ಹೊಣೆಗಾರಿಕೆ ಇದೆ: ಸಿ.ಟಿ.ರವಿ ತಾಂತ್ರಿಕತೆ ಬೆಳವಣಿಗೆ ನಡುವೆ ಪ್ರತಿಕೋದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇದರ ನಡುವೆ ಸಮಾಜವನ್ನು ಸುಶಿಕ್ಷಿತಗೊಳಿಸುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ಪತ್ರಿಕಾರಂಗದ ಸತ್ಯದ ಕೈಗನ್ನಡಿಯಾಗಿದೆ. ಆದರೆ, ಇಂದು ಮಾದ್ಯಮಗಳು ಉದ್ಯಮದ ರೂಪ ಪಡೆದಿದ್ದು, ಲಾಭ ನಷ್ಟ ವನ್ನುಎದುರಿಸುತ್ತಿದೆ. ಜತೆಗೆ, ತಾಂತ್ರಿಕತೆ ಬೆಳೆದಂತೆ ಮಾದ್ಯಮಗಳಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ಸಮಾಜ ಗಟ್ಟಿ ಕೊಳ್ಳಬೇಕಾದರೇ ಮಾದ್ಯಮಗಳ ಪಾತ್ರ ದೊಡ್ಡದಿದೆ ಎಂದರು.-- ಬಾಕ್ಸ್--ಚಿಕ್ಕಮಗಳೂರಿನಲ್ಲಿ ಪತ್ರಿಕಾ ಭವನ ನಿರ್ಮಿಸಿಕೊಡಿ: ಅನಿಲ್ ಆನಂದ್ ಮನವಿ
ಚಿಕ್ಕಮಗಳೂರು ನಗರದಲ್ಲಿ ಪತ್ರಕರ್ತರಿಗೆ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಅನಿಲ್ ಆನಂದ್ ಮನವಿ ಮಾಡಿದರು.ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾ ರಂಗ ಕಾರ್ಯಚಟುವಟಿಕೆಗಳಿಗೆ ಒಂದು ಸೂಕ್ತ ಭವನವಿಲ್ಲ. ಹಾಗಾಗಿ ಸರ್ಕಾರದಿಂದ ಪತ್ರಿಕಾ ಭವನವನ್ನು ನಿರ್ಮಾಣ ಮಾಡಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.
ಜತೆಗೆ, ಬಹುತೇಕ ಪತ್ರಕರ್ತರು ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಹಾಗಾಗಿ, ರಿಯಾಯಿತಿ ದರದಲ್ಲಿ ಪತ್ರಕರ್ತರಿಗೆ ಸ್ವಂತ ಸೂರು ನಿರ್ಮಾಣಕ್ಕೆ ನಿವೇಶನ ನೀಡಬೇಕು. ಗ್ರಾಮೀಣ ಭಾಗ ಪತ್ರಕರ್ತರಿಗೆ ನೀಡಲಾದ ಬಸ್ ಪಾಸ್ ಯೋಜನೆ ಷರತ್ತು ಕಠಿಣವಾಗಿದ್ದು ಇನ್ನಷ್ಟು ಸಡಿಲಗೊಳಿಸಬೇಕು. ತ್ವರಿತವಾಗಿ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೊಳಿಸ ಬೇಕೆಂದು ಒತ್ತಾಯಿಸಿದರು.-- ಬಾಕ್ಸ್--ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನಲೆಯಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಿಂದ ಕುವೆಂಪು ಕಲಾಮಂದಿರದ ವರೆಗೆ ದತ್ತಿ ಪ್ರಶಸ್ತಿ ಪುರಸ್ಕೃತರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಚಾಲನೆ ನೀಡಿದರು. ವೀರಗಾಸೆ ಕಲಾವಿದರ ನೃತ್ಯಮೆರವಣಿಗೆಗೆ ಮೆರುಗು ನೀಡಿತು.-- ಬಾಕ್ಸ್---ಹಿರಿಯ ಪತ್ರಕರ್ತರಿಗೆ ಸನ್ಮಾನ:ಕನ್ನಡಪ್ರಭದ ತರೀಕೆರೆ ತಾಲೂಕು ವರದಿಗಾರರಾದ ಅನಂತ್ ನಾಡಿಗ್, ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್, ಬಿ.ಟಿ.ತಿಪ್ಪೇರುದ್ರಪ್ಪ, ಅಜ್ಜಂಪುರದ ಅಪ್ಪಾಜಿ, ಕೊಪ್ಪ ಬಿ.ವಿ.ವಿಶ್ವನಾಥ್ ಶೆಟ್ಟಿ, ಕಡೂರಿನ ಎನ್.ಗಿರೀಶ್ ಬೀರೂರು, ಪ್ರಸನ್ನ ಗೌಡನಹಳ್ಳಿ ಮೂಡಿಗೆರೆ, ಯೂಸೂಪ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.-- ಬಾಕ್ಸ್ ---
ಸುವರ್ಣ ಕಿರಣ್‌ಗೆ ವಿಶೇಷ ಪ್ರಶಸ್ತಿಇದೇ ವೇಳೆ ಏಷಿಯಾ ನೆಟ್ ಸುವರ್ಣ ನ್ಯೂಸ್‌ನ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಕೆ.ಕಿರಣ್, ಚಿಕ್ಕಮಗಳೂರಿನ ಕೆ.ಎಚ್.ರುದ್ರಯ್ಯ, ಬಿ.ಉಮೇಶ್ ನಾಯಕ್, ಬೆಂಗಳೂರಿನ ಹಿರಿಯ ಪೋಟೋ ಜರ್ನಲಿಸ್ಟ್ಅಕ್ರಮ್ ಅಬ್ದುಲ್ ಹಕ್, ಮಂಗಳೂರು ಇಬ್ರಾಹಿಂ ಅಡ್ಕಸ್ಥಳ, ಕೊಪ್ಪಳ ಶಿವಕುಮಾರ್ ಪತ್ತಾರ, ಬಿಳಿಗಿರಿ ಶ್ರೀನಿವಾಸ್ ಚಾಮರಾಜನಗರ, ಎಚ್.ಪಿ.ರವಿಕುಮಾರ್ ಇವರಿಗೆ ಕೆಯುಡಬ್ಯೂಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
-- ಬಾಕ್ಸ್--ಕನ್ನಡಪ್ರಭ ಸಂಪಾದಕ ಜೋಗಿ ಅವರಿಗೆ ಗೊಮ್ಮಟ ದತ್ತಿ ಪ್ರಶಸ್ತಿ
ಗಿರೀಶ್ ರಾವ್ ಹತ್ವಾರ್ (ಗೊಮ್ಮಟ ಮಾಧ್ಯಮ ಪ್ರಶಸ್ತಿ), ಬಿ.ವಿ. ಗೋಪಿನಾಥ್ (ಡಿವಿಜಿ ಪ್ರಶಸ್ತಿ), ರವಿಪ್ರಕಾಶ್ (ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ), ಮೀನಾ ಮೈಸೂರು (ಎಸ್.ವಿ. ಜಯಶೀಲರಾವ್ ಪ್ರಶಸ್ತಿ), ಜಾನ್ ಮಥಾಯಿಸ್ (ಡಾ.ಎಂ.ಎಂ. ಕಲ್ಬುರ್ಗಿ ಪ್ರಶಸ್ತಿ), ಮಾವಳ್ಳಿ ಶಂಕರ್ (ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ), ಅಡಿವೇಂದ್ರ ಇನಾಂದಾರ (ಪಾಟೀಲ್ ಪುಟ್ಟಪ್ಪ (ಪಾಪು) ಪ್ರಶಸ್ತಿ), ಮಂಜುಳಾ ಕಿರುಗಾವಲು (ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ), ಡಿ.ಜಿ. ಮೋಮಿನ್ (ಬದರಿನಾಥ ಹೊಂಬಾಳೆ ಪ್ರಶಸ್ತಿ), ದಿನೇಶ್ ಗೌಡಗೆರೆ (ಕಿಡಿಶೇಷಪ್ಪ ಪ್ರಶಸ್ತಿ), ಎಚ್.ಸಿ. ದಿನೇಶ್ ಕುಮಾರ್ (ರವಿ ಬೆಳಗೆರೆ ಪ್ರಶಸ್ತಿ), ಭವಾನಿ ಲಕ್ಷ್ಮೀನಾರಾಯಣ (ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ), ಬಿ.ಎಸ್. ಜಯರಾಂ (ಎಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ), ಟಿ.ವಿ. ರಾಜೇಶ್ವರ (ರಾಜಶೇಖರ ಕೋಟಿ ಪ್ರಶಸ್ತಿ).ಎಚ್.ಬಿ. ದಿನೇಶ್ (ಪಿ.ರಾಮಯ್ಯ ಪ್ರಶಸ್ತಿ), ಪ್ರದೀಪ್ ಅಣ್ಣಾಜಿ ಕುಲಕರ್ಣಿ (ಮಾ. ರಾಮಮೂರ್ತಿ ಪ್ರಶಸ್ತಿ), ಕೆ. ಸುರೇಶ್ (ಮಹದೇವ ಪ್ರಕಾಶ್ ಪ್ರಶಸ್ತಿ), ಶ್ರೀಕಾಂತ್ ಭಟ್ (ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ), ಜಿ. ವಾದಿರಾಜ್ ಕಮರೂರು (ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ), ಕಣ್ಣಪ್ಪ ಉಷಾಮಹಿ (ಎಂ. ನಾಗೇಂದ್ರ ರಾವ್ ಪ್ರಶಸ್ತಿ), ಬಿ.ಕೆ. ರಮ್ಯಶ್ರೀ (ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ), ಹರ್ಷವರ್ಧನ್ ಬ್ಯಾಡನೂರು (ಅಪ್ಪಾಜಿಗೌಡ (ಸಿನಿ) ಪ್ರಶಸ್ತಿ), ಎಸ್.ಆರ್. ನಂದಿಹಳ್ಳಿ (ಮೂಡಣ, ಹಾವೇರಿ ಪ್ರಶಸ್ತಿ), ಕೆ.ಎಚ್. ರುದ್ರಯ್ಯ, ಕೆ. ಕಿರಣ್, ಬಿ. ಉಮೇಶ್ ನಾಯಕ್, ಅಕ್ರಮ್ ಅಬ್ದುಲ್ ಹಕ್, ಇಬ್ರಾಹಿಂ ಅಡ್ಕಸ್ಥಳ, ಬಿಳಿಗಿರಿ ಶ್ರೀನಿವಾಸ್, ಎಚ್.ಪಿ. ರವಿಕುಮಾರ್ (ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.--- ಕೋಟ್---ವೃತ್ತಿ ಧರ್ಮ ಧರ್ಮ ಪಾಲಿಸದ ಪತ್ರಕರ್ತನಿಗೆ, ಆಡಳಿತ ವ್ಯವಸ್ಥೆಯ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ನೈತಿಕ ಹಕ್ಕು ಇರುವುದಿಲ್ಲ.-ಕೆ.ವಿ.ಪ್ರಭಾಕರ್
ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ.ಫೋಟೋ: ಸಿಕೆಎಂಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ ಪುರಸ್ಕೃತರ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಚಾಲನೆ ನೀಡಿದರು.ಫೋಟೋ:ಸಿಕೆಎಂ1
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಭಾಜನರಾದ ಏಷಿಯಾ ನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು ವರದಿಗಾರ ಕೆ. ಕಿರಣ್ ಸೇರಿದಂತೆ ಮೊದಲಾದವರಿಗೆ ಸ್ಮಾನಿಸಲಾಯಿತು.ಫೋಟೋ:ಸಿಕೆಎಂ2 (ಈ ಫೋಟೋ ಕಡ್ಡಾಯ ಬಳಸಿ)
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕನ್ನಡಪ್ರಭದ ತರೀಕೆರೆ ತಾಲೂಕು ವರದಿಗಾರರಾದ ಅನಂತ್ ನಾಡಿಗ್ ಸೇರಿದಂತೆ ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್, ಬಿ.ಟಿ.ತಿಪ್ಪೇರುದ್ರಪ್ಪ ಸೇರಿದಂತೆ ಮೊದಲಾದವರನ್ನು ಸನ್ಮಾನಿಸಲಾಯಿತು.