ರಥಕ್ಕೆ ಹೊದಿಕೆ ಹಾಕುತ್ತಿದ್ದಾಗ ಬಿದ್ದು ಪೂಜಾರಿ ಸಾವು

| Published : Sep 19 2024, 01:46 AM IST

ಸಾರಾಂಶ

ಶ್ರಾವಣದಲ್ಲಿ ರಥೋತ್ಸವ ಮುಗಿದು ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುತ್ತಿದ್ದ ವೇಳೆ ಕಾಲು ಜಾರಿ ರಥದ ಮೇಲಿಂದ ಬಿದ್ದು ರಬಕವಿ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ರಬಕವಿ-ಬನಹಟ್ಟಿ: ಶ್ರಾವಣದಲ್ಲಿ ರಥೋತ್ಸವ ಮುಗಿದು ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುತ್ತಿದ್ದ ವೇಳೆ ಕಾಲು ಜಾರಿ ರಥದ ಮೇಲಿಂದ ಬಿದ್ದು ರಬಕವಿ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ರಬಕವಿಯ ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ (53) ಮೃತಪಟ್ಟವರು. ಶ್ರೀಮಲ್ಲಿಕಾರ್ಜುನ ದೇವಸ್ಥಾನದ ರಥೋತ್ಸವ ಶ್ರಾವಣ ಮಾಸದಲ್ಲಿ ಪೂರ್ಣಗೊಂಡಿತ್ತು. ಹೀಗಾಗಿ ರಥ ಪ್ರತಿವರ್ಷ ನಿಲ್ಲುವ ಸ್ಥಳದಲ್ಲೇ ನಿಂತಿತ್ತು. ಹೀಗಾಗಿ ರಥ ಧೂಳು ಹಿಡಿಯಬಾರದು ಎಂಬ ಕಾರಣಕ್ಕೆ ರಥಕ್ಕೆ ಮೇಲು ವಸ್ತ್ರ ಹೊದಿಕೆ ಹೊದಿಸಲಾಗುತ್ತದೆ. ಅದೇ ರೀತಿ ಈ ಸಾರಿ ಪೂಜಾರಿಗಳು ರಥದ ಮೇಲೆ ಹತ್ತಿ ಹೊದಿಕೆ ಹಾಕುತ್ತಿದ್ದ ವೇಳೆ ಏಕಾಏಕಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಇದೆ. ಈ ಕುರಿತು ತೇರದಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.