ಸಾರಾಂಶ
ಜಗತ್ತಿನಲ್ಲಿಯೇ ಅತೀ ದೊಡ್ಡ ಲಿಖಿತ ಸಂವಿಧಾನ ನಮ್ಮದು. ಅದನ್ನು ಎಲ್ಲರೂ ಗೌರವಿಸಬೇಕು: ನಗರದ ವೈದ್ಯ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿ ಡಾ.ಬಿ.ಎಸ್.ಮರೇಗುದ್ದಿ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಗತ್ತಿನಲ್ಲಿಯೇ ಅತೀ ದೊಡ್ಡ ಲಿಖಿತ ಸಂವಿಧಾನ ನಮ್ಮದು. ಅದನ್ನು ಎಲ್ಲರೂ ಗೌರವಿಸಬೇಕು ಎಂದು ನಗರದ ವೈದ್ಯ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿ ಡಾ.ಬಿ.ಎಸ್.ಮರೇಗುದ್ದಿ ಹೇಳಿದರು.ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ವಿವಿಧ ಅಂಗ ಸಂಸ್ಥೆಗಳ ಪರವಾಗಿ ಸಕ್ರಿ ಪ್ರೌಢಶಾಲೆಯ ಮೈದಾನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ತತ್ವಗಳನ್ನು ಪಾಲಿಸಬೇಕು. ಅದರ ಆಶಯವನ್ನು ಸಾಕಾರಗೊಳಿಸುವಲ್ಲಿ ಎಲ್ಲರೂ ಪ್ರಯತ್ನಶೀಲರಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ವಿ.ವೈ.ಕವಠೇಕರ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಎನ್‌ಸಿಸಿ ಕೆಡೆಟ್ಸ್ ಪಥಸಂಚಲನ, ವಿದ್ಯಾರ್ಥಿಗಳ ಛದ್ಮವೇಷ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ ಸ್ವಾಗತಿಸಿದರು. ಡಾ.ಸಂದೀಪ ಹುಯಿಲಗೋಳ ಪರಿಚಯಿಸಿದರು. ಕೆ.ವಿಜಯಕುಮಾರ ನಿರೂಪಿಸಿದರು. ಪ್ರಾಚಾರ್ಯ ಅಶೋಕ ಕಂದಗಲ್ ವಂದಿಸಿದರು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಪ್ರಾಚಾರ್ಯ ಶ್ರೀನಿವಾಸ ನರಗುಂದ, ಉಪಪ್ರಾಚಾರ್ಯ ಬಿ.ಎಚ್.ಲಮಾಣಿ ಇದ್ದರು. ಆಡಳಿತ ಮತ್ತು ಕಾನೂನು ಸಲಹೆಗಾರಕೆ.ಎಸ್.ದೇಶಪಾಂಡೆ, ಸದಸ್ಯರಾದ ಆರ್.ಎಸ್.ಕಂದಕೂರ, ಎಸ್.ಕೆ.ಕುಲಕರ್ಣಿ, ಡಾ.ಜೆ.ಎಸ್.ದೇಶಪಾಂಡೆ, ಡಾ.ಎಂ.ಜಿ.ದೀಕ್ಷಿತ್ ಮತ್ತಿತರರು ಇದ್ದರು.