ಸಾರಾಂಶ
ದಲಿತಪರ ಸಂಘಟನೆಗಳು ಮತ್ತು ದಲಿತಪರ ಕಲಾವಿದರು ತಮ್ಮ ಸಾಹಿತ್ಯದ ಮೂಲಕ ಸಮಸ್ಯೆಗಳ ಧ್ವನಿಯಾಗುವುದನ್ನು ಬಿಟ್ಟು ಸರ್ಕಾರ ಮತ್ತು ಪ್ರಭುತ್ವದ ಗುಲಾಮಗಿರಿಯ ಟಾಂಗಗಳಂತೆ ವರ್ತಿಸುತ್ತಿರುವುದು ಅತ್ಯಂತ ವಿಷಾದಕರ.
ಗೊಲ್ಲಹಳ್ಳಿ ಶಿವಪ್ರಸಾದ್‌ಗೆ ಅಭಿನಂದನಾ ಸಮಾರಂಭದಲ್ಲಿ ಸಾಹಿತಿ ರಾಮಯ್ಯ ವಿಷಾದ
90ರ ದಶಕದ ಬಿಸಿ ಈಗಿಲ್ಲ, ಅನುದಾನ ದುರುಪಯೋಗ, ಪದವಿಯಲ್ಲ ಜವಾಬ್ದಾರಿ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ , ಕೋಲಾರದಲಿತಪರ ಸಂಘಟನೆಗಳು ಮತ್ತು ದಲಿತಪರ ಕಲಾವಿದರು ತಮ್ಮ ಸಾಹಿತ್ಯದ ಮೂಲಕ ಸಮಸ್ಯೆಗಳ ಧ್ವನಿಯಾಗುವುದನ್ನು ಬಿಟ್ಟು ಸರ್ಕಾರ ಮತ್ತು ಪ್ರಭುತ್ವದ ಗುಲಾಮಗಿರಿಯ ಟಾಂಗಗಳಂತೆ ವರ್ತಿಸುತ್ತಿರುವುದು ಅತ್ಯಂತ ವಿಷಾದಕರ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ೯೦ರ ದಶಕದಲ್ಲಿ ಇದ್ದಂತಹ ದಲಿತ ಹೋರಾಟಗಳು ಪ್ರಸ್ತುತ ದಿನಗಳಲ್ಲಿ ಕಾಣುತ್ತಿಲ್ಲ ಸತ್ತು ಹೋಗಿದೆ, ಪ್ರಸ್ತುತ ಸಮಾಜ ಅಸ್ಪೃಶ್ಯ ಸಮಾಜ, ದೌರ್ಜನ್ಯ, ದಬ್ಬಾಳಿಕೆಗಳಿಂದ ತತ್ತರಿಸಿಹೋಗಿದೆ. ನಮ್ಮ ಜೀವನವೂ ಸಂಭ್ರಮ ಮತ್ತು ಸಾವಿನ ನಡುವಿನ ಸಂಘರ್ಷದಂತೆ ಉಲ್ಬಣಗೊಂಡಿದೆ. ಇವುಗಳನ್ನು ಸಮತೋಲನದಿಂದ ಸ್ವೀಕರಿಸಿದಾಗ ನಮ್ಮ ಸಮಾಜ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಪ್ರಗತಿಪರ ಸಂಘಟನೆಗಳ ಐಕ್ಯತಾ ಸಮಿತಿವತಿಯಿಂದ ಜಾನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನುದಾನ ದುರುಪಯೋಗ
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅನುದಾನದ ಹಣವನ್ನು ದುರಪಯೋಗಪಡಿಸಿಕೊಂಡು ದಲಿತ ಸಮುದಾಯವನ್ನು ದಮನ ಮಾಡಲು ಹೊರಟಿದೆ. ಆದರೆ ದಲಿತಪರ ಸಂಘಟನೆಗಳು ಮತ್ತು ದಲಿತಪರ ಕಲಾವಿದರು ತಮ್ಮ ಸಾಹಿತ್ಯದ ಮೂಲಕ ಸಮಸ್ಯೆಗಳ ಧ್ವನಿಯಾಗುವುದನ್ನು ಬಿಟ್ಟು ಸರ್ಕಾರ ಮತ್ತು ಪ್ರಭುತ್ವದ ಗುಲಾಮಗಿರಿಯ ಟಾಂಗಗಳಂತೆ ವರ್ತಿಸುತ್ತಿರುವುದು ಅತ್ಯಂತ ವಿಷಾದಕರ ಎಂದರು. ಸನ್ಮಾನ ಸಮಾರಂಭಕ್ಕೆ ಸಂತಸ ಹಂಚಿಕೊಳ್ಳಲು ಸೇರಿದ ಜನ ಅಂದು ಒಗ್ಗೂಡಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ಶಿಕ್ಷಣದ ಭವಿಷ್ಯವನ್ನು ರೂಪಿಸುವಂತಹ ನಿಟ್ಟಿನಲ್ಲಿ ೫ಸಾವಿರ ಜನರ ಸಹಯೋಗದಲ್ಲಿ ಶಾಸಕರ ಮನೆಯ ಮುಂದೆ ಪ್ರಗತಿಪರ ಸಂಘಟನೆಗಳ ಐಕ್ಯತಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅಂದಾದರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.ಇದು ಪದವಿಯಲ್ಲ ಜವಾಬ್ದಾರಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾನಪದ ಸಾಹಿತ್ಯ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜನಪದ ಸಾಹಿತ್ಯದ ಅಧ್ಯಕ್ಷ ಸ್ಥಾನವನ್ನು ಹುದ್ದೆಯನ್ನು ಪದವಿಯನ್ನದೆ, ಜವಾಬ್ದಾರಿಯೆಂದು ಪರಿಗಣಿಸಿದ್ದೇನೆ. ನಾನು ಬಾಲ್ಯದಲ್ಲಿಯೇ ಅಹಃ ಅಸಹನೆ, ಅಹಂಕಾರ ಎಂಬುವುದನ್ನು ಬಿಟ್ಟು ಸಮಾಜದ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಾ, ಹೋರಾಟಗಳನ್ನು ಮಾಡಿದ್ದೇನೆ. ಜನಪದ ಸಾಹಿತ್ಯ ಶ್ರಮ ಜೀವಿಗಳ ಆಸ್ತಿಯಾಗಿದ್ದು, ಜೀವನದ ವಾಸ್ತವಿಕತೆಗಳ ಅನುಭವವನ್ನು ಕೂಡಿದ ಅರಿವಾಗಿದೆ ಮತ್ತು ಜನಪದ ತಾಯಿಯ ಪ್ರತಿರೂಪವಾಗಿ ಪದ ಅಕ್ಷರಗಳ ಸಮ್ಮಿಲನವಾಗಿದೆ ಎಂದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಂಗವಾದಿ ನಾರಾಯಣಪ್ಪ, ಐಪಲ್ಲಿ ನಾರಾಯಣಸ್ವಾಮಿ, ಸೂಲಿಕುಂಟೆ ಆನಂದ್, ಹುಣಸನಹಳ್ಳಿ ವೆಂಕಟೇಶ್, ಸೂಲಿಕುಂಟೆ ರಮೇಶ್, ಜೀವಿಕ ಡಾ.ರಾಮಚಂದ್ರ, ಕಲಾವಿದ ಯಲ್ಲಪ್ಪ, ಕವಿ.ಲಕ್ಷ್ಮಯ್ಯ,ಪಿವಿಸಿ ಮಣಿ, ಚಿಕ್ಕನಾರಾಯಣ, ಪ್ರಭಾವತಿ, ದೇಶಿಹಳ್ಳಿ ಶ್ರೀನಿವಾಸ್, ಕವಿ ವಿ.ಲಕ್ಷö್ಮಯ್ಯ, ಸಿ.ಜೆ.ನಾಗರಾಜ್, ಹಿರೇಕರಪನಹಳ್ಳಿ ಮುನಿರಾಜು, ಕಲಾವಿದೆ ಶಾಂತಮ್ಮ, ಮತ್ತಿಕುಂಟೆ ಕೃಷ್ಣ, ಮುತ್ತೇನಹಳ್ಳಿ ಮುನಿಕೃಷ್ಣ ಇದ್ದರು.