ದಲಿತರ ಸ್ಮಶಾನಕ್ಕೆ ಜಾಗದ ಸಮಸ್ಯೆ: ಶಾಸಕ ಪ್ರದೀಪ್‌ ಈಶ್ವರ್‌

| Published : Oct 01 2024, 01:24 AM IST

ದಲಿತರ ಸ್ಮಶಾನಕ್ಕೆ ಜಾಗದ ಸಮಸ್ಯೆ: ಶಾಸಕ ಪ್ರದೀಪ್‌ ಈಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಬಂದಾಗಿನಿಂದ ದಲಿತರ ಸ್ಮಶಾನಕ್ಕೆ ಸಾಕಷ್ಟು ಜಾಗಗಳಿಲ್ಲ. ಜಾಗಗಳಿದ್ದರೂ ಬಲಾಡ್ಯರು ಒತ್ತುವರಿ ಮಾಡಿ ಕೊಂಡಿದ್ದಾರೆ. ನಾನು ಶಾಸಕನಾದ ಮೇಲೆ ಈ ಬಗ್ಗೆ ಗಮನ ಹರಿಸಿ, ಪೆರೇಸಂದ್ರ ಗ್ರಾಮದ ದಲಿತರಿಗೆ ಒಂದೂವರೆ ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರುಮಾಡಿಸಿದ್ದೇನೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮಸ್ತೆ ಚಿಕ್ಕಬಳ್ಳಾಪುರ ಮತ್ತು ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ನಗರದ 24 ನೇ ವಾರ್ಡ್ ಮತ್ತು ಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಐದು ಗ್ರಾಮಗಳಿಗೆ ಸೋಮವಾರ ಶಾಸಕ ಪ್ರದೀಪ್ ಈಶ್ವರ್ ಆಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಆಹವಾಲು ಸ್ವೀಕರಿಸಿದರು.

24ನೇ ವಾರ್ಡ್‌ಗೆ 14 ಕೋಟಿ ರು.

ನಗರದ 24 ನೇ ವಾರ್ಡ್ಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ನಾನು ಬರಲೇಬೇಕು ಬಂದಿದ್ದೇನೆ ಈ ವಾರ್ಡಿನ ಅಭಿವೃದ್ಧಿ ವಿಚಾರವಾಗಿ ಈಗಾಗಲೇ 14 ಕೋಟಿ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇದೊಂದು ಮಾದರಿ ವಾರ್ಡ್ ಆಗುವುದರಲ್ಲಿ ಅನುಮಾನವೇ ಬೇಡ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ ದಲಿತರ ಸ್ಮಶಾನಕ್ಕೆ ಸಾಕಷ್ಟು ಜಾಗಗಳಿಲ್ಲ. ಜಾಗಗಳಿದ್ದರೂ ಬಲಾಡ್ಯರು ಒತ್ತುವರಿ ಮಾಡಿ ಕೊಂಡಿದ್ದಾರೆ. ನಾನು ಶಾಸಕನಾದ ಮೇಲೆ ಈ ಬಗ್ಗೆ ಗಮನ ಹರಿಸಿ, ಪೆರೇಸಂದ್ರ ಗ್ರಾಮದ ದಲಿತರಿಗೆ ಒಂದೂವರೆ ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರುಮಾಡಿಸಿದ್ದೇನೆ. ಅದೇ ರೀತಿ ಈಗ ಬಂಡಹಳ್ಳಿ ಗ್ರಾಮದ ದಲಿತರ ಸ್ಮಶಾನ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ 15 ದಿನಗಳ ಕಾಲಾವಕಾಶ ನೀಡಿದ್ದೇನೆ ಎಂದರು.

ಬಂಡಹಳ್ಳಿಯಲ್ಲಿ ಆರೋಗ್ಯ ಮೇಳ

ಬಂಡಹಳ್ಳಿ ಗ್ರಾಮದಲ್ಲಿ ಸಮಾರು 15 ಕ್ಕೂ ಹೆಚ್ಚು ಮಂದಿ ಕ್ಯಾನ್ಸರ್ ಪೀಡಿತರಾಗಿದ್ದು, ಗ್ರಾಮದ ಎಲ್ಲರಿಗೂ ಎಲ್ಲಾ ರೀತಿಯ ಆರೋಗ್ಯ ಪರಿಕ್ಷೆಗಳನ್ನು ಆಕ್ಟೊಬರ್ 6 ರಂದು ಮಾಡಿಸಲು ಆರೋಗ್ಯ ಮೇಳವನ್ನು ಗ್ರಾಮದಲ್ಲೆ ಏರ್ಪಡಿಸಿದ್ದು, ಕ್ಯಾನ್ಸರ್ ಪೀಡಿತರಿಗೆ, ಹೃದ್ರೋಗ ಸೇರಿದಂತೆ ಮತ್ತಿತರ ರೋಗಗಳಿಗೆ ನನ್ನ ಸ್ವಂತ ಖರ್ಚಿನಿಂದ ಚಿಕಿತ್ಸೆಗಳನ್ನು ಕೋಡಿಸುವುದಾಗಿ ತಿಳಿಸಿದರಲ್ಲದೆ, ಗ್ರಾಮಗಳಲ್ಲಿ ಕಾಯಿಲೆಗಳಿಗೆ ಕಾರಣವಾದ ನೀರಿನ ಪರೀಕ್ಷೆ ಮಾಡಲು ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಈ ವೇಳೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಟಿಹೆಚ್ಓ ಡಾ.ಮಂಜುಳ, ವಿವಿಧ ಇಲಾಖಾ ಅಧಿಕಾರಿಗಳು, ಮುಖಂಡರು ಇದ್ದರು. ಸಿಕೆಬಿ-2 ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿಯಲ್ಲಿ ಗ್ರಾಮಸ್ಥರಿಂದ ಶಾಸಕ ಪ್ರದೀಪ್ ಈಶ್ವರ್ ಅಹವಾಲು ಆಲಿಸಿದರು.