ಮಹಿಳಾ ಮೋರ್ಚಾ ತೋರಿಸುತ್ತಿರುವ ಶಕ್ತಿ, ಶಿಸ್ತಿನ ಮೆರವಣಿಗೆ ಮತ್ತು ಸಂಘಟನೆಯ ಬಲವನ್ನು ನೋಡಿದಾಗ ಪಕ್ಷದ ಭವಿಷ್ಯ ಇನ್ನಷ್ಟು ಉಜ್ವಲವಾಗಿರುವುದು ಸ್ಪಷ್ಟವಾಗುತ್ತದೆ. ದತ್ತಪೀಠ ನಮ್ಮ ನಂಬಿಕೆಯ ಪ್ರತೀಕವಾಗಿದೆ. ಅಲ್ಲಿ ನಡೆಯುವ ಶೋಭಾಯಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪಾವನ ಯಾತ್ರೆಯಾಗಿದೆ. ನಮ್ಮ ಮಹಿಳೆಯರು ಮನೆ–ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ದೊಡ್ಡ ಬದಲಾವಣೆಯ ಸಂಕೇತವಾಗಿದೆ. ನಿಮ್ಮ ಈ ಚಟುವಟಿಕೆಗಳು ಯುವಜನತೆಗೆ ಮಾದರಿಯಾಗಿವೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಶೋಭಾಯಾತ್ರೆಯು ನಮ್ಮ ಹಿಂದೂ ಧರ್ಮದ ದತ್ತಪೀಠದ ಪರಂಪರೆಯನ್ನು ಉಳಿಸುವುದಲ್ಲದೆ, ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಸಹೋದರತ್ವವನ್ನು ಬಲಪಡಿಸುತ್ತದೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ದತ್ತಮಾಲಾ ಹಾಗೂ ಅನುಸೂಯಾ ಜಯಂತಿ ಅಂಗವಾಗಿ ಶ್ರೀ ಚನ್ನಕೇಶವ ದೇಗುಲ ಮುಂಭಾಗ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಇಂದು ನಮ್ಮ ಮಹಿಳಾ ಮೋರ್ಚಾ ತೋರಿಸುತ್ತಿರುವ ಶಕ್ತಿ, ಶಿಸ್ತಿನ ಮೆರವಣಿಗೆ ಮತ್ತು ಸಂಘಟನೆಯ ಬಲವನ್ನು ನೋಡಿದಾಗ ಪಕ್ಷದ ಭವಿಷ್ಯ ಇನ್ನಷ್ಟು ಉಜ್ವಲವಾಗಿರುವುದು ಸ್ಪಷ್ಟವಾಗುತ್ತದೆ. ದತ್ತಪೀಠ ನಮ್ಮ ನಂಬಿಕೆಯ ಪ್ರತೀಕವಾಗಿದೆ. ಅಲ್ಲಿ ನಡೆಯುವ ಶೋಭಾಯಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪಾವನ ಯಾತ್ರೆಯಾಗಿದೆ. ನಮ್ಮ ಮಹಿಳೆಯರು ಮನೆ–ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ದೊಡ್ಡ ಬದಲಾವಣೆಯ ಸಂಕೇತವಾಗಿದೆ. ನಿಮ್ಮ ಈ ಚಟುವಟಿಕೆಗಳು ಯುವಜನತೆಗೆ ಮಾದರಿಯಾಗಿವೆ ಎಂದರು.ನಂತರ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಗಣೇಶ್ ಅವರು ಪ್ರತಿವರ್ಷದಂತೆಯೇ ಈ ವರ್ಷವೂ ದತ್ತಪೀಠ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಮಹಿಳಾ ಕಾರ್ಯಕರ್ತೆಯರು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ನಾವು ಈ ವರ್ಷ ಕೂಡ ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತಪೀಠ ಶೋಭಾಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಬೋಳ ರಾಮೇಶ್ವರ ದೇಗುಲದಿಂದ ಐಟಿಐ ಕಾಲೇಜಿನವರೆಗೆ ಶೋಭಾಯಾತ್ರೆ ನಡೆದು ಬಳಿಕ ದತ್ತಪೀಠಕ್ಕೆ ತಲುಪಲಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ರತ್ನ ಸಂಗಮೇಶ್, ತೀರ್ಥ, ಸೀತಾ, ಶಿವಮ್ಮ, ಪ್ರಭ, ಮಂಜುಳ, ಭಾರತಿ, ರೂಪ ಸೇರಿದಂತೆ ಇತರರು ಹಾಜರಿದ್ದರು.