ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ಪಟ್ಟಣದ ಶಾಂತೇಶ್ವರ ದೇವಸ್ಥಾನದಿಂದ ಸಿದ್ಧಾರೂಢರ ಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕುಂಭ ಹೊತ್ತ ಮಹಿಳೆಯರು, ಯುವಕರು ಹೆಜ್ಜೆ ಹಾಕಿದರು. 55 ಜೋಡಿ ಎತ್ತಿನ ಗಾಡಿ, ಡೋಲು, ಡೊಳ್ಳು, ವೀರಗಾಸೆ, ಪುರವಂತರ ತಂಡ, ಚೆಟ್ಟಿ ಮೇಳ, ಬೃಹತ್ ಗೊಂಬೆಗಳಲ್ಲದೇ, ಬ್ಯಾಂಡ್ ಬಾಜಾ ಸೇರಿ ಸಕಲ ವಾದ್ಯಗಳೊಂದಿಗೆ ಸಿದ್ಧಾರೂಢರ ಮೂರ್ತಿಯನ್ನು ಅದ್ಧೂರಿ ಮೆರವಣೆಗೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಶಾಂತೇಶ್ವರ ದೇವಸ್ಥಾನದಿಂದ ಸಿದ್ಧಾರೂಢರ ಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕುಂಭ ಹೊತ್ತ ಮಹಿಳೆಯರು, ಯುವಕರು ಹೆಜ್ಜೆ ಹಾಕಿದರು. 55 ಜೋಡಿ ಎತ್ತಿನ ಗಾಡಿ, ಡೋಲು, ಡೊಳ್ಳು, ವೀರಗಾಸೆ, ಪುರವಂತರ ತಂಡ, ಚೆಟ್ಟಿ ಮೇಳ, ಬೃಹತ್ ಗೊಂಬೆಗಳಲ್ಲದೇ, ಬ್ಯಾಂಡ್ ಬಾಜಾ ಸೇರಿ ಸಕಲ ವಾದ್ಯಗಳೊಂದಿಗೆ ಸಿದ್ಧಾರೂಢರ ಮೂರ್ತಿಯನ್ನು ಅದ್ಧೂರಿ ಮೆರವಣೆಗೆ ಮಾಡಲಾಯಿತು.ಮೂರ್ತಿಯನ್ನು ಕಂಡು ಭಕ್ತರು ಮೆರವಣಿಗೆಯ ಮೇಲೆ ಪುಷ್ಪವೃಷ್ಟಿಗೈದರು. ಕುಂಭ ಹೊತ್ತ, ಗ್ರಂಥ ತಲೆಯಲ್ಲಿ ಇಟ್ಟುಕೊಂಡಿದ್ದ ಭಕ್ತರು ಹೆಜ್ಜೆ ಹಾಕುತ್ತಿದ್ದರೆ ಓಂ ನಮಃ ಶಿವಾಯ ಎಂಬ ಮಂತ್ರ ಅಂತಃಶಕ್ತಿಯನ್ನು ಹೊರಹೊಮ್ಮಿಸುತ್ತಿತ್ತು. ಅಜ್ಜನ ಭಜನೆಗಳು ಆಯಾಸವನ್ನು ಮರೆಸುತ್ತಿದ್ದವು. ಬರೋಬ್ಬರಿ 4 ಗಂಟೆಗೂ ಅಧಿಕ ಕಾಲ ಮೆರವಣಿಗೆ ನಡೆಯಿತು. ಪಟ್ಟಣದ ಸಿದ್ಧಲಿಂಗ ದ್ವಾರ ಬಾಗಿಲದವರಿಗೆ ಮೆರವಣೆಗೆ ಬಂದು ತಲುಪಿತು. ನಂತರ ಆಳೂರ ಗ್ರಾಮಕ್ಕೆ ಕುಂಭ ಮೆರವಣಿಗೊಂದಿಗೆ ಸಿದ್ಧಾರೂಢರ ಮಠಕ್ಕೆ ಮೆರವಣಿಗೆ ತಲುಪಿತು. ಈ ಸಂದರ್ಭದಲ್ಲಿ ಆಳೂರ ಮಠದ ಶಂಕರಾನಂದ ಮಹಾಸ್ವಾಮಿಗಳು, ಸ್ವರೂಪನಂದ ಶ್ರೀಗಳು, ಕಾಸುಗೌಡ ಬಿರದರ, ದಯಸಾಗರ ಪಾಟೀಲ, ಅನಿಲಪ್ರಸಾದ ಏಳಗಿ, ಅನಿಲಗೌಡ ಬಿರಾದಾರ, ಗದಗದ ಪರಿಪೂರ್ಣ ಆನಂದ ಭಾರತಿ ಶ್ರೀಗಳು, ಬಸುಗೌಡ ಪಾಟೀಲ, ಗುರುಪಾದ ವಾಡಿ, ಪಾಂಡುರಂಗ ಕುಲಕರ್ಣಿ, ಹೋನ್ನಪ್ಪಗೌಡ ಪಾಟೀಲ, ಸಂತೋಷ ಸದಲಾಪೂರ, ರಮಸಿಂಗ್ ಕನ್ನೊಳ್ಳಿ, ಕಾಂತು ಬಬಲಾದ, ರಮೇಶ ಗುಡೇವಾಡಿ, ಅಣ್ಣಪ್ಪ ವಾಡಿ, ರಾಜು ವಾಲಿಕಾರ, ಬಸವರಾಜ ವಾಲಿಕಾರ, ರಾಜಶೇಖರ ನಾಟೀಕಾರ, ಸುರೇಶ ನಾಟೀಕಾರ, ಅಪ್ಪು ಮಾವಿನಹಳ್ಳಿ ಇದ್ದರು.