ಮ್ಯೂಸಿಯಂ ಆನ್ ವೀಲ್ಸ್

| Published : May 19 2025, 02:17 AM IST

ಸಾರಾಂಶ

ಎರಡು ಬಸ್‌ ಗಳಲ್ಲಿ ಮಾರ್ಗದರ್ಶಕರೊಂದಿಗೆ ಪ್ರಯಾಣಿಸಿದ ನಾಗರಿಕರು ವಸ್ತುಸಂಗ್ರಹಾಲಯಗಲ್ಲಿನ ಐತಿಹಾಸಿಕ ವಸ್ತುಗಳನ್ನು ವೀಕ್ಷಿಸಿ ಅಚ್ಚರಿಪಟ್ಟರು.

ಕನ್ನಡಪ್ರಭ ವಾರ್ತೆ ಮೈಸೂರು

ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮ್ಯೂಸಿಯಂ ಆನ್ ವ್ಹೀಲ್ಸ್ ಗೆ ಇಲಾಖೆ ಆಯುಕ್ತ ಎ. ದೇವರಾಜು ಚಾಲನೆ ನೀಡಿದರು.

ನಗರದ ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯದ ಆವರಣದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ 130 ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಾಗರಿಕರು ವೈವಿಧ್ಯಮಯ ವಸ್ತುಸಂಗ್ರಹಾಲಯಗಳನ್ನು ವೀಕ್ಷಿಸಿದರು.

ಎರಡು ಬಸ್‌ ಗಳಲ್ಲಿ ಮಾರ್ಗದರ್ಶಕರೊಂದಿಗೆ ಪ್ರಯಾಣಿಸಿದ ನಾಗರಿಕರು ವಸ್ತುಸಂಗ್ರಹಾಲಯಗಲ್ಲಿನ ಐತಿಹಾಸಿಕ ವಸ್ತುಗಳನ್ನು ವೀಕ್ಷಿಸಿ ಅಚ್ಚರಿಪಟ್ಟರು. ವೆಲ್ಲಿಂಗ್ಟನ್‌ ಬಂಗಲೆ, ಸಿದ್ಧಾರ್ಥನಗರದಲ್ಲಿರುವ ‌‌ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತುಸಂಗ್ರಹಾಲಯ, ರೈಲ್ವೆ ವಸ್ತುಸಂಗ್ರಹಾಲಯ, ನಗುವನಹಳ್ಳಿಯಲ್ಲಿರುವ ಪಯಣ ಕಾರು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ಇಲಾಖೆಯ ಉಪ ನಿರ್ದೇಶಕಿ ಸಿ.ಎನ್‌. ಮಂಜುಳಾ, ಎಂಜಿನಿಯರ್ ಟಿ. ತಾರಕೇಶ, ಸಹಾಯಕ ನಿರ್ದೇಶಕ ಸುನಿಲ್‌ ಕುಮಾರ್‌, ಸಿಬ್ಬಂದಿ ಡಿ. ಮಂಜುನಾಥ ಮೊದಲಾದವರು ಇದ್ದರು.