ಶಿಕ್ಷಣದಿಂದ ಸಮಾಜದ ಪ್ರಗತಿ ಸಾಧ್ಯ

| Published : Nov 11 2024, 12:56 AM IST

ಸಾರಾಂಶ

ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಡಾ.ಬಸವರಮಾನಂದ ಸ್ವಾಮೀಜಿ ಹೇಳಿದರು.

ಪಾವಗಡ: ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಡಾ.ಬಸವರಮಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಶ್ರೀ ನಂದಗೋಕುಲ ಗೆಳೆಯರ ಬಳಗ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 80ರಷ್ಟು ಆಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣವು ಯಶಸ್ವಿಯ ತಪಸ್ಸಿದ್ದಂತೆ. ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಸಂಘಟಿತರಾಗಿ ಹೋರಾಟದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು. ಸರ್ಕಾರದ ಸೌಲಭ್ಯ ಸದ್ಬಳಿಕೆ ಮಾಡಿಕೊಳ್ಳಬೇಕು. ಕೌಶಲ್ಯ ತರಬೇತಿಯತ್ತ ಆಸಕ್ತಿವಹಿಸಿ ಅರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಪ್ರಗತಿ ಕಾಣುವಂತೆ ಸಲಹೆ ನೀಡಿದರು.

ಮಾಜಿ ಸಚಿವ ರಘುವೀರ ರೆಡ್ಡಿ ಮಾತನಾಡಿ, ಗೊಲ್ಲ ಸಮಾಜ ಸಂಘಟಿತರಾಗಿ ಪ್ರಗತಿ ಕಾಣಬೇಕು. ನಮ್ಮ ಹೆಜ್ಜೆ ಪ್ರಗತಿದತ್ತ ಸಾಗಿದರೆ ಮಾತ್ರ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.

ತಾಲೂಕು ಯಾದವ ಸಮಾಜದ ಅಧ್ಯಕ್ಷ ಮುಗದಾಳಬೆಟ್ಟ ನರಸಿಂಹಯ್ಯ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.

ಪಿಎಸ್‌ಐ ಕಾರನಾಗನಹಟ್ಟಿಯ ಚಂದ್ರಶೇಖರ್‌ ಮಾತನಾಡಿ, ಗೊಲ್ಲ ಸಮಾಜದ ಅರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಯತ್ತ ಸಾಗಬೇಕು ಎಂದರು.

ಚಲನಚಿತ್ರ ಹಿನ್ನಲೆ ಗಾಯಕ ಹಾಗೂ ಜಾನಪದ ವಿವಿಯ ಸಿಂಡಿಕೇಟ್‌ ಸದಸ್ಯ ಮೋಹನ್‌ಕುಮಾರ್‌, ಸಮಾಜ ಸಾಂಸ್ಕ್ರತಿಕ ಹಾಗೂ ಜಾನಪದ ನೆಲೆಗಟ್ಟಿನ ಬಗ್ಗೆ ಸಮಗ್ರವಾಗಿ ವಿವರಿಸಿದರು.

ಚಿನ್ನಮ್ಮನಹಳ್ಳಿ ನಾಗಣ್ಣ, ನರಸಪ್ಪ, ಈರಮಲ್ಲೇಗೌಡ, ವೀರ್ಲಗೊಂದಿ ನಾಗರಾಜು,ದೇವರಹಟ್ಟಿ ನಾಗೇಂದ್ರ,ನಾಗಣ್ಣ,ಈರಣ್ಣ, ಗಿರಿಯಪ್ಪ, ಕೆ.ಎಸ್‌.ಈರಣ್ಣ, ಮದ್ದಿಬಂಡೆ ಕೃಷ್ಣಮೂರ್ತಿ, ದೇವರಹಟ್ಟಿ ಶಿವಣ್ಣ, ವಡ್ಡರಹಟ್ಟಿ ರಾಮಲಿಂಗಪ್ಪ, ರಾಮಕೃಷ್ಣಪ್ಪ,ಶಿವಕುಮಾರ್‌,ಮದನ್‌ ,ಕುಮಾರ್‌,ಪಳಳ್ಳಪ್ಪ, ವೀರೇಂದ್ರ, ಕಾರನಾಗನಹಟ್ಟಿ ವಿರೇಶ್‌,ನಾಗಣ್ಣ, ಕಿರ್ಲಾಲಹಳ್ಳಿ ನವೀನ್‌ಕುಮಾರ್‌,ಚನ್ನಸಾಗರ ಮಲ್ಲೇಶ್‌ ಇದ್ದರು.