ಸಾರಾಂಶ
ರಾಣಿಬೆನ್ನೂರು: ಸೇವಾ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ ಹತ್ತನೆ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ತಾಲೂಕು ಅಧ್ಯಕ್ಷ ಬಸವಂತಕುಮಾರ ಮಾತನಾಡಿ, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಈವರೆಗೂ ಆಗಿರುವ ಎಲ್ಲ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು. ಕೆಸಿಎಸ್ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಬೇಕು.
ಅಂತರ ಜಿಲ್ಲಾದಲ್ಲಿ ಪತಿ- ಪತ್ನಿ ಪ್ರಕರಣಗಳ ವರ್ಗಾವಣೆಯ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು. ಅಂತರ ಜಿಲ್ಲಾ ವರ್ಗಾವಣೆಯ ಕೆಸಿಎಸ್ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸಬೇಕು.ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಇಲ್ಲಿಯವರಿಗೂ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದೆ. ಕಾಟಾಚಾರಕ್ಕೆ ಮಾತ್ರ ಸಭೆ ಕರೆದು ಯಾವುದೇ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಖಂಡನೀಯವಾಗಿದೆ. ಆದ್ದರಿಂದ ಬೇಡಿಕೆಗಳು ಈಡೇರುವ ತನಕ ಧರಣಿ ಸತ್ಯಾಗ್ರಹ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ರಾಜ್ಯ ನೌಕರರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಕೆಂಚರೆಡ್ಡಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ ಬೆಂಬಲ ನೀಡಿದರು.ಉಪಾಧ್ಯಕ್ಷ ಸಂಜೀವರೆಡ್ಡಿ ಭತ್ತೆರ, ಪ್ರಧಾನ ಕಾರ್ಯದರ್ಶಿ ಕೋಟ್ರೇಶ ಎ.ಎಂ., ಖಜಾಂಚಿ ಬಸವರಾಜ ಎಡಿಕಾಲು, ಹಿರಿಯ ಗ್ರಾಮಧಿಕಾರಿ ಮಂಜುನಾಥ ಎಂ.ಎನ್., ಹರೀಶ ಕೂನಬೇವು, ಗುರು ಲಮಾಣಿ, ಇಮಿಮ್ ಜಾಫರ್ ತಹಶೀಲ್ದಾರ, ಹನುಮಂತ ಯು., ಗಿರೀಶ ಪಾಟೀಲ, ದೀಪಾ ಎಂ.ಎಸ್, ಪುಷ್ಪಾ ತೆಲಗಡೆ, ತರನಮ್ ಆರ್.ಜೆ., ವಿನೂತ ಪಿ.ಎಸ್., ವಿಶಾಲ ಚಕ್ರಸಾಲಿ, ಭಾವನಾ, ಕವಿತಾ ಎಚ್, ರೇಖಾ ಎಂ.ಎಸ್, ಐಶ್ವರ್ಯ, ಚೇತನಾಕುಮಾರಿ, ಪ್ರಭಾಕರ ಎಮ್., ಪ್ರಕಾಶ ಲಮಾಣಿ, ಸುರೇಶ ಎಸ್.ಬಿ., ಕಿರಣ ಕುರುವತ್ತಿ, ಮಂಜುನಾಥ ಜಲ್ಲೇರ, ವೆಂಕಟೇಶ, ಹನುಮಂತಪ್ಪ ಓಲೇಕಾರ ಸೇರಿದಂತೆ ಇತರರಿದ್ದರು.ಗ್ಯಾರಂಟಿ ಯೋಜನೆಗೆ ಹಣ ಇಲ್ಲದೇ ದಿವಾಳಿ: ಆರೋಪ
ಶಿಗ್ಗಾಂವಿ: ಗ್ಯಾರಂಟಿ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆರು ತಿಂಗಳಿಂದ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಸಮರ್ಪಕವಾಗಿ ಹಣ ನೀಡದೆ ದಿವಾಳಿಯಾಗಿದೆ ಎಂದು ತಾಲೂಕು ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗಿವೆ. ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣ ಎಲ್ಲಿ ಹೋಯಿತು? ಹೆಣ್ಣುಮಕ್ಕಳಿಗೆ ನೀಡುತ್ತಿರುವ ₹೨೦೦೦ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಯುವನಿಧಿ ಮಾತ್ರ ಕೇವಲ ಘೋಷಣೆಗೆ ಸೀಮಿತವಾಯಿತು. ಅನ್ನಭಾಗ್ಯದ ಹಣ ನೀಡಿಲ್ಲ. ಯಾವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರಿಸಲಿ ಎಂದು ಒತ್ತಾಯಿಸಿದ್ದಾರೆ.