ಸಾರಾಂಶ
ಮಂಗಳೂರು : ರಸ್ತೆಯನ್ನು ದುರಸ್ತಿ ಪಡಿಸುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಹಾಗೂ ಸ್ಥಳೀಯ ಕಾರ್ಪೊರೇಟರ್‌ಗೆ ಮನವಿ ಸಲ್ಲಿಸಿದರೂ, ಯಾವುದೇ ಪರಿಹಾರ ಸಿಗದ ವೇಳೆ ಬೇಸತ್ತ ಸಾರ್ವಜನಿಕರು ಇದೀಗ ‘ನಮ್ಮ ಊರು ನಮ್ಮ ರಸ್ತೆ’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಸಮಾನ ಮನಸ್ಕರು ಒಂದೇ ವೇದಿಕೆಯಡಿ ಬಂದು ಇಂತಹ ಅಭಿಯಾನ ಆರಂಭಿಸಿದ್ದಾರೆ.
ಭಾನುವಾರ ನಗರದ ದೇರೆಬೈಲ್‌ನ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನಲ್ಲಿ ಮೃತ್ಯು ಕೂಪದಂತಿದ್ದ ಹೊಂಡಗಳನ್ನು ಮುಚ್ಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಹೊಂಡಗಳಿಗೆ ಡಾಂಬರೀಕರಣ ಮಾಡಲು ಬದಲು ಕನಿಷ್ಠ ಹೊಂಡಗಳನ್ನು ಮುಚ್ಚುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಕಳೆದ ಒಂದು ವಾರದಿಂದ 10ಕ್ಕೂ ಅಧಿಕ ದ್ವಿಚಕ್ರ ವಾಹನ ಚಾಲಕರು ಬ್ಯಾಲೆನ್ಸ್ ತಪ್ಪಿದ್ದರು.
ಇದರಿಂದ ಪ್ರಥಮವಾಗಿ ಟೌನ್‌ಶಿಪ್‌ನ ೧ನೇ ಮುಖ್ಯರಸ್ತೆ ಹಾಗೂ ಮುಖ್ಯರಸ್ತೆ ಸೇರುವಲ್ಲಿ ಅಭಿಯಾನ ನಡೆಸಿದರು.ರಸ್ತೆಯ ಹೊಂಡದಲ್ಲಿ ಬಾಳೆಗಿಡ ಅಥವಾ ಇನ್ಯಾವುದೇ ಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡಲು ಬದಲು ಹೊಂಡಗಳನ್ನು ಮುಚ್ಚುವ ಮೂಲಕ ಸ್ಥಳೀಯಾಡಳಿತ ವೈಫಲ್ಯವನ್ನು ಜನತೆಗೆ ತೋರಿಸೋಣ. ನಮ್ಮೂರಿನ ಹೊಂಡಗಳನ್ನು ನಾವೇ ಮುಚ್ಚೋಣ. ಆ ಮೂಲಕ ಪ್ರತಿಭಟನೆ ತೋರಿಸೋಣ ಎಂಬ ಉದ್ದೇಶದಿಂದ ವಿಭಿನ್ನ ರೀತಿಯ ಪ್ರತಿಭಟನೆಯನ್ನು ನಮ್ಮ ಊರು ನಮ್ಮ ರಸ್ತೆ ಅಭಿಯಾನ ಸಮಿತಿಯು ಕೈಗೊಂಡಿದೆ. ಅಭಿಯಾನದಲ್ಲಿ ಅಶೋಕ, ಹಿಮಕರ, ಸುನೀಲ್ ಹಯವದನ, ಶರವಣ ಮತ್ತು ರಘುರಾಮ ಅವರು ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.ತಮ್ಮ ಸ್ವಂತ ಕಾರಿನಲ್ಲಿ ಜಲ್ಲಿಕಲ್ಲು ಹಾಗೂ ಜಲ್ಲಿಹುಡಿಯನ್ನು ತಂದು ಹೊಂಡಗಳನ್ನು ಮುಚ್ಚಿದ್ದಾರೆ.