ರೈತರ ಸಮಸ್ಯೆ ಆಲಿಸುವುದೇ ಗ್ರಾಮ ಪರಿಕ್ರಮ ಉದ್ಧೇಶ

| Published : Feb 13 2024, 12:48 AM IST

ಸಾರಾಂಶ

ಮೋದೀಜಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾಗ 5 ವರ್ಷಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳನ್ನು ಗ್ರಾಮಗಳಲ್ಲಿ ಜನರಿಗೆ ಮನದಟ್ಟು ಆಗುವಂತೆ ಮಾಡಿ ೩ನೇ ಬಾರಿ ಮೋದಿಯವರನ್ನು ಪ್ರಧಾನಿಯಾಗಿಸುವುದೇ ಗ್ರಾಮ ಪರಿಕ್ರಮ ಯಾತ್ರೆ ಉದ್ದೇಶ

ಕನ್ನಡಪ್ರಭ ವಾರ್ತೆ ಟೇಕಲ್

ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರವು ಗ್ರಾಮೀಣ ಜನರಿಗಾಗಿ ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಬಿಜೆಪಿ ಸರ್ಕಾರವು ಕರ್ನಾಟದಲ್ಲಿ ಅಧಿಕಾರದಲ್ಲಿ ಇದ್ದಾಗ ಜಾರಿಗೊಳಿಸಿದ ರೈತಪರ ಕಾರ್ಯಕ್ರಮಗಳ ಕುರಿತು ರೈತರು ಮತ್ತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವುದೇ ಗ್ರಾಮ ಪರಿಕ್ರಮ ಯಾತ್ರೆ ಉದ್ದೇಶ ಎಂದು ಸಂಸದ ಎಸ್. ಮುನಿಸ್ವಾಮಿ ತಿಳಿಸಿದರು.

ಅವರು ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾಮದಲ್ಲಿ ರೈತ ಎತ್ತಿನಗಾಡಿಗೆ ಪೂಜೆ ಸಲ್ಲಿಸಿ ನಂತರ ಎತ್ತಿನಗಾಡಿಗೆ ಚಾಲನೆ ನೀಡುವುದರ ಮೂಲಕ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ದಿನ 5 ಹಳ್ಳಿಗಳಿಗೆ ಭೇಟಿ

ಗ್ರಾಮ ಪರಿಕ್ರಮ ಯಾತ್ರೆಗೆ ಮೊದಲು ಗೋಪೂಜೆ ಮಾಡಿ 30 ದಿನಗಳ ಕಾಲ ಪರಿಕ್ರಮ ಯಾತ್ರೆ ಇರುತ್ತದೆ. ಪ್ರತಿದಿನ ಪ್ರತಿ ಜಿಲ್ಲೆಯ 5 ಹಳ್ಳಿಗಳಿಗೆ ಪ್ರವಾಸ ಮಾಡಲಾಗುವುದು. ರೈತರ ಸಮಸ್ಯೆ ಆಲಿಸುವುದು ಮತ್ತು ಅವರ ಬೇಕು ಬೇಡಗಳನ್ನು ಪಟ್ಟಿ ಮಾಡಿ ರೈತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರ ಮುಖಾಂತರ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷರಿಗೆ ತಲುಪಿಸಲಾಗುವುದು. ಭವಿಷ್ಯದಲ್ಲಿ ನಮ್ಮ ಸರ್ಕಾರದ ಯೋಜನೆ ಮತ್ತು ಪಕ್ಷದ ಪ್ರಣಾಳಿಕೆ ರೂಪಿಸುವಲ್ಲಿ ರೈತರ ಸಲಹೆಗಳನ್ನು ಅಳವಡಿಸಿಕೊಳ್ಳುವುದೆ ಯಾತ್ರೆಯ ಪ್ರಮುಖ ಉದ್ದೇಶ ಎಂದರು. ಮೋದೀಜಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾಗ 5 ವರ್ಷಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳನ್ನು ಗ್ರಾಮಗಳಲ್ಲಿ ಜನರಿಗೆ ಮನದಟ್ಟು ಆಗುವಂತೆ ಮಾಡಿ ೩ನೇ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸಲು ಪಕ್ಷದ ಕಾರ್ಯಕರ್ತರು ಭೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಬೇಕೆಂದರು. ಗ್ಯಾರಂಟಿ ಅಲ್ಪಾವಧಿ ಯೋಜನೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೫ ಗ್ಯಾರಂಟಿಗಳ ಯೋಜನೆ ಜಾರಿಗೆ ತಂದಿದ್ದರೂ ಇವುಗಳಿಂದ ಅನುಕೂಲವಾಗಿಲ್ಲ. ಇದು ಪೂರ್ಣಾವಧಿ ಗ್ಯಾರಂಟಿ ಯೋಜನೆಯಲ್ಲ. ಅಲ್ಪಾವಧಿ ಯೋಜನೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾಜಪ ಎಲ್ಲ ಸ್ಥಾನಗಳನ್ನು ಗೆದ್ದು ದೇಶಕ್ಕೆ ಮಾದರಿಯಾಗಲಿದೆ ಎಂದರು.

ಇದಕ್ಕೂ ಮುಂಚೆ ಸಂಸದರು ಕೆ.ಜಿ. ಹಳ್ಳಿ ವಿನಾಯಕಸ್ವಾಮಿ ಆಲಯದ ಮುಂದೆ ಗೋಪೂಜೆ ಮಾಡಿ ರೈತರ ಜೊತೆ ಎತ್ತಿನ ಬಂಡಿಗೆ ಪೂಜೆ ಮಾಡಿ ಅದನ್ನು ಚಾಲನೆ ನೀಡಿದರು. ನಂತರ ಉತ್ತರ ಭಾರತದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಚಾಲನೆ ನೀಡಿದ ಪರಿಕ್ರಮ ಯಾತ್ರೆಯಲ್ಲಿ ಮಾತನಾಡಿದ ತುಣುಕುಗಳ ಲೈವ್ ವೀಡಿಯೋವನ್ನು ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರ ಜೊತೆ ಕುಳಿತು ದೊಡ್ಡ ಪರದೆ ಮೇಲೆ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಲಕ್ಷ್ಮಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್, ಜಿಲ್ಲಾ ರೈತ ಘಟಕದ ಮುಖಂಡರು ಅಪ್ಪಿ, ಪ್ರ.ಕಾ.ಶಿವಣ್ಣ, ನರೇಶ, ರಾಜ್ಯಕಾರಣಿ ಸಮಿತಿ ನಾರಾಯಣಶೆಟ್ಟಿ, ಮುಖಂಡರಾದ ದಿಶಾ ಸಮಿತಿ ಸೂರ್ಯನಾರಾಯಣರಾವ್, ತಾ.ಪಂ. ಮಾಜಿ ಸದಸ್ಯರಾದ ರಮೇಶ್‌ಗೌಡ ಹೆಚ್.ಎಂ., ಕೆ.ಎಂ.ರಾಮಕೃಷ್ಣಪ್ಪ, ಹೆಚ್.ಎಂ.ಸೊಣ್ಣಪ್ಪ, ಮುನಿಶಾಮಿಗೌಡ, ಮುನಿಯಪ್ಪ, ರೈತ ಮೊರ್ಚಾದ ರಾಮಕೃಷ್ಣೆಗೌಡ, ಬನಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್. ಮಂಜುನಾಥ, ಪ್ರಶಾಂತ್, ಸೋಮಶೇಖರ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.