ಸ್ಥಳದಲ್ಲಿ ಸಮಸ್ಯೆ ಪರಿಹರಿಸುವುದೇ ಜನಸ್ಪಂದನದ ಉದ್ದೇಶಳ ಜಿಲ್ಲಾಧಿಕಾರಿ

| Published : Jun 28 2024, 12:47 AM IST

ಸ್ಥಳದಲ್ಲಿ ಸಮಸ್ಯೆ ಪರಿಹರಿಸುವುದೇ ಜನಸ್ಪಂದನದ ಉದ್ದೇಶಳ ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಇಳಕಲ್ಲ ನಗರದ ತಾಲೂಕು ತಹಸೀಲ್ದಾರ್‌ ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ರಾಜ್ಯದಲ್ಲಿರುವ ಜನರ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಿದ್ದು, ಈ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಎಸ್. ಹೇಳಿದರು.

ನಗರದ ತಾಲೂಕು ತಹಸೀಲ್ದಾರ್‌ ಕಚೇರಿಯಲ್ಲಿ ಕರ್ನಾಟಕ ಸರ್ಕಾರ, ಇಳಕಲ್ಲ ತಾಲೂಕು ಆಡಳಿತ, ತಾಪಂ ಹಾಗೂ ನಗರಸಭೆ ಇಳಕಲ್ಲ ಜಂಟಿಯಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಮಾಡಲು ಜಿಲ್ಲೆ ಮತ್ತು ತಾಲೂಕಿನ ಎಲ್ಲ ಇಲಾಖೆಗಳನ್ನು ಇಲ್ಲಿಯೇ ಕರೆತಂದಿದೆ. ನ್ಯಾಯಾಲಯಗಳಲ್ಲಿರದ ಸಮಸ್ಯೆಗಳಿದ್ದರೆ, ತಕ್ಷಣವೇ ಪರಿಹರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇಂಥ ಜನಸ್ಪಂದನ ಕಾರ್ಯಮಗಳಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಈ ಉದ್ದೇಶದಂದಲೇ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಮಾಡುವುದರ ಜೊತೆಗೆ ಜಿಲ್ಲಾಮಟ್ಟ, ತಾಲೂಕು ಮಟ್ಟದಲ್ಲಿ ಏರ್ಪಡಿಸಿದೆ. ಇನ್ಮುಂದೆ ಇಂಥ ಕಾರ್ಯಕ್ರಮ ಹೋಬಳಿ ಮಟ್ಟದಲ್ಲೂ ಮಾಡಲಾಗುವುದು, ಇದರಲ್ಲಿ ಪಾರದರ್ಶಕತೆ ಇದ್ದು, ಪ್ರಜಾಪ್ರಭುತ್ವ ಇದೆ. ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹರಿಸಲಾಗುವುದು, ತೊಂದರೆ ಇದ್ದರೆ ಒಂದು ವಾರದಲ್ಲಿ ಪರಿಹಾರ ಮಾಡಿ ಕೊಡುತ್ತಾರೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ ಕುರೇರ ಹಾಗೂ ಇತರರು ಮಾತನಾಡಿದರು. ತಹಸೀಲ್ದಾರ್‌ ಎಸ್.ಬಿ. ಕೂಡಲಗಿ, ಸಿಪಿಐ ಸುನೀಲ ಸವದಿ, ತಾಪಂ ಅಧಿಕಾರಿ ಮುರಳೀಧರ ದೇಶಪಾಂಡೆ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಇತರರು ಉಪಸ್ಥಿತರಿದ್ದರು. ಉಪತಹಸೀಲ್ದಾರ್‌ ಈಶ್ವರ ಗಡ್ಡಿ ಸ್ವಾಗತಿಸಿದರು. ಸಾವಿರಾರು ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದರು.