ಜಾಗೃತಿ ಮೂಡಿಸುವುದೇ ವಿಜ್ಞಾನ ದಿನದ ಉದ್ದೇಶ: ಚನಮಲ್ಲಪ್ಪ

| Published : Mar 06 2025, 12:31 AM IST

ಜಾಗೃತಿ ಮೂಡಿಸುವುದೇ ವಿಜ್ಞಾನ ದಿನದ ಉದ್ದೇಶ: ಚನಮಲ್ಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ವಿಜ್ಞಾನ ಹಾಗೂ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ವಿಜ್ಞಾನ ಹಾಗೂ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಕ್ಕೆ ಚಾಲನೆ ನೀಡಿ, ಮಕ್ಕಳ ಪ್ರಯೋಗಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಮಕ್ಕಳು ತಾವೇ ತಯಾರಿಸಿದ ಪ್ರಯೋಗಗಳನ್ನು ತಾವೇ ನಿರರ್ಗಳವಾಗಿ ವಿವರಿಸುವ ಗುಣ ನೋಡಿದರೆ ತುಂಬಾ ಸಂತೋಷ ಅನಿಸುತ್ತದೆ ಎಂದರು.

ಬಿಆರ್‌ಪಿ ಬಿ.ಎಸ್.ಅವಟಿ ಮಾತನಾಡಿ, ಮಕ್ಕಳಲ್ಲಿ ಇಂದು ಸಂಶೋಧನಾ, ಏಕೆ ಹೇಗೆ ಎಂಬ ಪ್ರಶ್ನೆ ಕೇಳುವಂತಾ ಹಾಗೂ ಸೃಜನಶೀಲ ಮಕ್ಕಳಾಗಿ ಬೆಳೆಯುವಂತಾ ಶಿಕ್ಷಣ ನಮ್ಮ ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ ಎಂದು ಹೇಳಿದರು. ಈ ಶಾಲೆಯ ಮಕ್ಕಳ ಹಲವಾರು ಪ್ರಯೋಗಗಳ ನೋಡಿದರೆ ಈ ಮಕ್ಕಳ ಕ್ರಿಯಾಶೀಲತೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿ.ಐ.ಗೊಡ್ಯಾಳ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಹಾಗೂ ಕ್ರಿಯಾಶೀಲತೆಯ ಗುಣಗಳು ದೊರೆಯುವಂತಾ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು. ಈ ಸರ್ಕಾರಿ ಶಾಲೆ ಮಕ್ಕಳು ಯಾವುದೇ ಕಾರ್ಯಕ್ರಮವಿದ್ದರು ಅದರಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಾರೆ. ಕಾರಣ ಈ ಮಕ್ಕಳಲ್ಲಿ ಪರಿಶ್ರಮ ಇದೆ ಎಂದು ತಿಳಿಸಿದರು.

ಈ ವೇಳೆ ಸುರೇಶ ಗಿಡ್ಡಪ್ಪಗೋಳ, ರೇಖಾ ಬೆಳ್ಳುಬ್ಬಿ, ಜ್ಯೋತಿ ಕೊಟ್ಟಗಿ, ಐ.ಸಿ.ಪಾಟೀಲ್, ಕೆ.ಆರ್.ದಾಸರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.