ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಸಮಾಜಕ್ಕೆ ಬಡವರಿಗೆ, ಅನಾಥರಿಗೆ, ದೀನ ದುರ್ಬಲರಿಗೆ ಸಹಾಯ ಮಾಡುವ ಗುಣವನ್ನು ರೋಟರಿ ಕಲಿಸುತ್ತದೆ ಎಂದು ಬಿಮ್ಸ್ ಸಿಇಒ ಸಿದ್ದು ಹುಲ್ಲೊಳ್ಳಿ ತಿಳಿಸಿದರು.ನಗರದ ಮೈಗೂರು ರಸ್ತೆಯಲ್ಲಿರುವ ಪಂಚಮಸಾಲಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಸಂಸ್ಥೆಗಳ 2025-26ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಪರರ ಮಕ್ಕಳ ಸಾಧನೆ ಕಂಡು ಸಂತೋಷ ಪಡಬೇಕು. ಅದು ನಮ್ಮ ಮಕ್ಕಳ ಸಾಧನೆಗೆ ಪ್ರೇರಣೆಯಾಗುತ್ತದೆ. ಸೇವಾ ಮನೋಭಾವ ಬೆಳಸಿಕೊಳ್ಳಬೇಕು ಎಂಬುವುದನ್ನು ಸಂಸ್ಥೆ ಕಲಿಸುತ್ತದೆ. ರೋಟರಿ ಸಂಸ್ಥೆಯು ಮಿನಿ ಬಸ್ ನಿಲ್ದಾಣ, ಡಯಾಲಿಸಸ್ ಸೆಂಟರ್ ಹೀಗೆ ಅನೇಕ ಸಮಾಜ ಮುಖಿ ಕೆಲಸಮಾಡಿದೆ. ಸಂಸ್ಥೆ ಸದಸ್ಯರು ತಮ್ಮ ಹುಟ್ಟುಹಬ್ಬವನ್ನು ಅನಾಥ ಮಕ್ಕಳೊಂದಿಗೆ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಬೆಳಗಾವಿ ದಕ್ಷಿಣದ ಪಾಸ್ಟ್ ಡಿಸ್ಟ್ರಿಕ್ ಗವರ್ನರ ಆನಂದ ಕುಲಕರ್ಣಿ ಮಾತನಾಡಿ, ಜೀವನವು ಶಾಶ್ವತವಲ್ಲ, ಇರುವುದರೊಳಗೆ ಸಹಾಯ, ದಾನ ಮಾಡಬೇಕು. ರೋಟರಿ ಎಂದರೆ ಸಂಸ್ಕಾರ, ಸಂಸ್ಕೃತಿ, ವಿಶ್ವಾಸ, ವಿಶ್ವಮಾನ್ಯ. ರೋಟರಿ ಸಂಸ್ಥೆಯು ಸುಮಾರು 50 ಕೋಟಿ ಮಕ್ಕಳಿಗೆ ಪೋಲಿಯೋ ರೋಗದಿಂದ ಮುಕ್ತಗೊಳಿಸಿದೆ. ಸಮಾಜ ಮುಖಿಯಾಗಿ ಸೇವೆಸಲ್ಲಿಸುತ್ತಿದೆ. ನೂತನ ಪದಾಧಿಕಾರಿಗಳು ಹಾಗೂ ನೂತನ ಸದಸ್ಯರು ಸಂಸ್ಥೆಯ ಸೇವಾಕಾರ್ಯಗಳ ಬಗ್ಗೆ ತಿಳಿದುಕೊಂಡು ಉತ್ತಮ ರೀತಿಯಲ್ಲಿ ಕೆಲಸಮಾಡಬೇಕೆಂದು ಸಲಹೆ ನೀಡಿದರು.
2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜಶೇಖರ ಕೊವಳ್ಳಿ, ಕಾರ್ಯದರ್ಶಿಯಾಗಿ ಎಂ.ಎಚ್.ಕಡ್ಲಿಮಟ್ಟಿ, ಖಜಾಂಚಿಯಾಗಿ ಶಂಕರ ತೇಲಿ ಹಾಗೂ ಇನ್ನರ್ ವ್ಹೀಲ್ ಅಧ್ಯಕ್ಷೆಯಾಗಿ ಗಿರಿಜಾ ಮೈತ್ರಿ, ಕಾರ್ಯದರ್ಶಿಯಾಗಿ ಮೇಘಾ ಮಹಾಬಳ ಶೆಟ್ಟಿ, ಖಜಾಂಚಿಯಾಗಿ ಯಶಸ್ವಿನಿ ಮಠ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ರಾಜಶೇಖರ ಕೋವಳ್ಳಿ ಮಾತನಾಡಿದರು. 91 ಸದಸ್ಯರ ಸಹಕಾರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುದಾಗಿ ತಿಳಿಸಿದರು.ಬಾಗಲಕೋಟೆಯ ಅಸಿಸ್ಟೆಂಟ್ ಗೌರ್ನರ್ ನಾರಾಯಣ ಹೆರಕಲ್, ನಿಕಟ ಪೂರ್ವ ಅಧ್ಯಕ್ಷರಾದ ಕಿರಣ ಕುಮಾರ್ ದೇಸಾಯಿ ಸ್ವಾಗತಿಸಿದರು. ಅಸಿಸ್ಟಂಟ್ ಗವರ್ನರ್ ಆರ್‌ಪಿ ನ್ಯಾಮಗೌಡ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಮಲ್ಲಪ್ಪ ಬುಜರಕ ವಾರ್ಷಿಕ ವರದಿ ವಾಚಿಸಿದರು. ಸಾನಿಯಾ ಹುನಗುಂದ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶನ ನೀಡಿದರು. ಪ್ರಕಾಶ್ ಗೌಡರ, ಎಸ್.ಆರ ಕಡಿಬಾಗಿಲ, ಅಮೃತ ದೇಸಾಯಿ ನಿರೂಪಿಸಿದರು. ಎಂ.ಎಚ್ ಕಡ್ಲಿಮಠ ವಂದಿಸಿದರು. ವಿವೇಕಾನಂದ ಮಹಬಳಶೆಟ್ಟಿ, ಆರ್.ಎಸ್.ಬಿರಾದಾರ, ವಿನಯಕುಮಾರ ಸಿದ್ದಾರ, ಚಂದ್ರಕಾಂತ ಜನವಾಡ, ಶ್ರೀಧರ ಕಾಕಂಡಕಿ, ಎಸ್.ವೈ.ಬಿರಾದಾರ, ಮಹೇಶ ಪಾಟೀಲ, ಜಿ.ವಿ.ಪ್ರಭು, ಪ್ರಕಾಶ ಶಿಂಧೆ, ಎ.ಆರ್ ದೇವರೆಡ್ಡಿ, ಮೋಹನ್ ದಡುತಿ, ಚಂದ್ರಕಾಂತ್ ನಾಡಗೌಡ, ರಾಜಶೇಖರ್ ಕಾಮೋಜಿ, ಡಿ.ಎಸ್.ನಿಲಗುಂದ, ಪ್ರವೀಣ್ ಜಾಡ, ಬಸವರಾಜ ಆಲಗೂರ, ಬಸವರಾಜ ಬಳಗಾರ, ಅಲ್ಕಾ ಮಾಳಗಿ, ಶಿಲ್ಪಾ ಪಾಟೀಲ ಮುಂತಾದವರಿದ್ದರು.
;Resize=(128,128))
;Resize=(128,128))
;Resize=(128,128))