ಸಾರಾಂಶ
ಜಾತ್ರೆಗಳು ಮತ್ತು ಸಂಭ್ರಮದ ಮಹೋತ್ಸವಗಳ ಜೊತೆಗೆ ಜನರನ್ನು ಮನರಂಜಿಸುವ ಸ್ಪರ್ಧೆಗಳು ಕೂಡ ನಡೆಯುತ್ತಿವೆ. ಟಗರಿನ ಕಾಳಗ ಹೆಚ್ಚಿನ ರೀತಿಯಲ್ಲಿ ಜನರನ್ನು ಮನರಂಜಿಸುತ್ತದೆ ಎಂದು ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜಾತ್ರೆಗಳು ಮತ್ತು ಸಂಭ್ರಮದ ಮಹೋತ್ಸವಗಳ ಜೊತೆಗೆ ಜನರನ್ನು ಮನರಂಜಿಸುವ ಸ್ಪರ್ಧೆಗಳು ಕೂಡ ನಡೆಯುತ್ತಿವೆ. ಟಗರಿನ ಕಾಳಗ ಹೆಚ್ಚಿನ ರೀತಿಯಲ್ಲಿ ಜನರನ್ನು ಮನರಂಜಿಸುತ್ತದೆ ಎಂದು ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ ಹೇಳಿದರು.ಪಟ್ಟಣದ ಕರಿಸಿದ್ದೇಶ್ವರ ಹಾಗೂ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಾರುತೇಶ್ವರ ದೇವಸ್ಥಾನ ಹತ್ತಿರದ ಮೈದಾನದಲ್ಲಿ ಶನಿವಾರ ನಡೆದ ಟಗರಿನ ಕಾಳಗ ಉದ್ಘಾಟಿಸಿ ಮಾತನಾಡಿದರು. ಜಾತ್ರಾ ಮಹೋತ್ಸವದ ನಿಮಿತ್ತ 7 ದಿನ ಪ್ರವಚನ ಶಿರೂರಿನ ಚಿನ್ಮಯಾನಂದ ಸ್ವಾಮೀಜಿ ಹೇಳಿದರು. ಪಾಲಕಿ ಸೇವೆ, ಡೊಳ್ಳಿನ ಪದ, ಗಾಯನ ಸಂಘ, ಮಹಾಪ್ರಸಾದ ನಿರಂತರವಾಗಿದ್ದವು. ಅದ್ದೂರಿಯಿಂದ ಜಾತ್ರೆ ಮತ್ತು ಟಗರಿನ ಕಾಳಗ ಸ್ಪರ್ಧೆ ನಡೆಯಿತು.
ಹಿರಿಯರಾದ ಮಹಾಲಿಂಗಪ್ಪ ಜಕ್ಕನ್ನವರ, ಸತ್ಯಪ್ಪ ಹುದ್ದಾರ,ಮಹೇಶ ಇಟಕನ್ನವರ,ಶಿವಲಿಂಗ ಟಿರಕಿ ಪುರಸಭೆ ಸದಸ್ಯ ಮುಸ್ತಾಕ ಚಿಕ್ಕೋಡಿ, ಶ್ರೀಶೈಲ ಪಾಟೀಲ, ಮಹಾಲಿಂಗ ಪಾಟೀಲ, ನಜೀರ ಝಾರೆ,ಮಹಾಲಿಂಗ ಮಾಳಿ, ಆಸೀಪ್ ಜಮಾದಾರ,ವಿಜಯ ಸಬಕಾಳೆ,ಆನಂದ ಬಂಡಿ,ಸೋಮು ದಿವಾನ್, ಮುತ್ತು ದಿವಾನ್,ರಮೇಶ ಲದ್ದಿ,ಶ್ರೀಶೈಲ ಅವಟಿ,ಉಮೇಶ್ ಲದ್ದಿ,ಸುನೀಲ ಮೇಟಿ,ಗೋಪಾಲ ಕಂಬಾರ,ಶಂಕರ ಯಾದವಾಡ,ಬಸು ನರಗಟ್ಟಿ,ಭರಮಪ್ಪ ಅವಟಿ ಸೇರಿದಂತೆ ಇತರರಿದ್ದರು. ಪತ್ರಕರ್ತ ರಾಜೇಂದ್ರ ನಾವಿ ನಿರೂಪಿಸಿ, ವಂದಿಸಿದರು.