ಸಾರಾಂಶ
ರಾಜ್ಯ ಸರ್ಕಾರ ಘೋಷಿಸಿದ ಟನ್‌ಗೆ 3300 ದರವು ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡುವ ರೈತರಿಗೂ ದೊರೆಯಬೇಕು ಎಂದು ಹಳಿಯಾಳ ಬಿಜೆಪಿ ಘಟಕವು ತಾಲೂಕಾಡಳಿತವನ್ನು ಆಗ್ರಹಿಸಿದೆ.
ಬಿಜೆಪಿ ಪ್ರಮುಖರ, ರೈತರ ನಿಯೋಗದಿಂದ ತಾಲೂಕಾಡಳಿತಕ್ಕೆ ಮನವಿಕನ್ನಡಪ್ರಭ ವಾರ್ತೆ ಹಳಿಯಾಳ
ರಾಜ್ಯ ಸರ್ಕಾರ ಘೋಷಿಸಿದ ಟನ್‌ಗೆ 3300 ದರವು ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡುವ ರೈತರಿಗೂ ದೊರೆಯಬೇಕು ಎಂದು ಹಳಿಯಾಳ ಬಿಜೆಪಿ ಘಟಕವು ತಾಲೂಕಾಡಳಿತವನ್ನು ಆಗ್ರಹಿಸಿದೆ.ಶನಿವಾರ ಮಾಜಿ ಶಾಸಕ ಸುನೀಲ ಹೆಗಡೆ ಮುಂದಾಳತ್ವದಲ್ಲಿ ಬಿಜೆಪಿ ಪದಾಧಿಕಾರಿಗಳ ಹಾಗೂ ಪ್ರಮುಖರ ಹಾಗೂ ರೈತರ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರವು ಘೋಷಿಸಿದ ಕಬ್ಬಿನ ದರದ ಲಾಭವು ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೂ ದೊರಕುವಂತಾಗಬೇಕೆಂದು ಆಗ್ರಹಿಸಿದರು.
ನಮ್ಮ ಹಳಿಯಾಳದ ಸಕ್ಕರೆ ಕಾರ್ಖಾನೆಯ ಕಬ್ಬಿನ ಇಳುವರಿಯ ಪ್ರಮಾಣವು ಶೇ.11.85 ಇದ್ದು, ರಾಜ್ಯ ಸರ್ಕಾರ ಘೋಷಿಸಿದ ದರವು ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರೂ ನೀಡಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.ಬಿಜೆಪಿ ತಾಲೂಕು ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ರೈತ ಮೋರ್ಚಾ ಅಧ್ಯಕ್ಷ ಸೋನಪ್ಪ ಸುಣಕಾರ, ಜಿಲ್ಲಾ ರೈತ ಮೋರ್ಚಾ ಪ್ರಮುಖ ನಾರಾಯಣ ಕೆಸರೇಕರ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಫಕೀರಪ್ಪ ಮಾಳ್ವಿ, ಉದಯ ಜಾಧವ, ಜ್ಞಾನೇಶ ಮಾನಗೆ, ಹರಿದಾಸ ಬೊಬ್ಲಿ, ಬಸವರಾಜ ಮೇತ್ರಿ, ಪಾಂಡುರಂಗ ಪಾಟೀಲ, ಮಾರುತಿ ಪೆಟ್ನೇಕರ, ಶಿವಾಜಿ ಕೊಲೇಕರ, ರವಿ ಚವಲ, ಸುರೇಶ ಧಾರವಾಡಕರ, ಸಂಜು ಹಿರೇಕರ, ವಿಠ್ಠಲ ಸಕ್ಕಪ್ಪನವರ ಹಾಗೂ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))