ಹೊಸ ಸಾಹಿತ್ಯ ಬೆಳೆಸುವ ಜವಾಬ್ದಾರಿ ಸಾಹಿತಿಗಳದ್ದು

| Published : Apr 10 2025, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಾಹಿತ್ಯವನ್ನು ಉಳಿಸಿ ಹೊಸ ಸಾಹಿತ್ಯ ಬೆಳೆಸುವ ಜವಾಬ್ದಾರಿ ಇಂದಿನ ಸಾಹಿತಿಗಳ ಮೇಲಿದೆ. ಬಂಡಾಯ ಸಾಹಿತ್ಯದ ಒಲವುಳ್ಳ ಡಾ.ರೇಖಾ ಮುಂಬರುವ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಆಶಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಾಹಿತ್ಯವನ್ನು ಉಳಿಸಿ ಹೊಸ ಸಾಹಿತ್ಯ ಬೆಳೆಸುವ ಜವಾಬ್ದಾರಿ ಇಂದಿನ ಸಾಹಿತಿಗಳ ಮೇಲಿದೆ. ಬಂಡಾಯ ಸಾಹಿತ್ಯದ ಒಲವುಳ್ಳ ಡಾ.ರೇಖಾ ಮುಂಬರುವ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಆಶಿಸಿದರು.

ನಗರದ ಗ್ಯಾಲಕ್ಸಿ ಸಭಾಭವನದಲ್ಲಿ ಸಿದ್ದಾರ್ಥ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಡಾ.ರೇಖಾ ಬಸವರಾಜ ಪಾಟೀಲರ ಅವಳು ಗಜಲ್ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವೈದ್ಯೆ ಡಾ.ರೇಖಾ ಪಾಟೀಲ ಮಹಿಳಾ ಪರ ಚಿಂತಕಿ ಶಿಬಿರ, ಕಮ್ಮಟ, ಸಮ್ಮೇಳನಗಳಲ್ಲಿ ಬೇರೆ ಬೇರೆ ವಿಷಯಗಳ ಮೇಲೆ ಉಪನ್ಯಾಸ ನೀಡಿದ ಪ್ರಭುತ್ವ ಅವರದ್ದು. ತಮ್ಮ ಜೀವನದ ಅನುಭವ ಧಾರೆ ಎರೆದು ರಚಿಸಿದ ಅವಳು ಗಜಲ್ ಸಂಕಲನ ಸಾಹಿತ್ಯ ಲೋಕದ ಮೈಲುಗಲ್ಲಾಗಲಿ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಅವನು ಅವಳಾಗಬಹುದು. ಅವಳು ಅವನಾಗಬಹುದು. ಆದರೆ ಅವಳು ಅವಳಾಗುವುದು ಕಷ್ಟಸಾಧ್ಯ. ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರ ತರಬೇಕು. ಪುಸ್ತಕ ಕೊಂಡು ಓದುವುದು ಕೂಡ ಸಾಹಿತ್ಯದ ಒಂದು ಭಾಗ. ಈ ಕೃತಿಯಲ್ಲಿ ೫೨ ಮೌಲ್ಯಯುತವಾದ ಗಜಲಗಳಿವೆ. ಜೀವ ಪರವಾದ ಅಂಶವೇ ಸ್ತ್ರೀವಾದ. ಅದನ್ನು ಈ ಕೃತಿ ಉದ್ದಕ್ಕೂ ನೋಡಲು ಸಾಧ್ಯ. ಪತಿವೃತೆ ಹೆಣ್ಣಿಗೆ ಎಷ್ಟು ಮುಖ್ಯವೋ ಪತ್ನಿವೃತವೂ ಗಂಡಿಗೆ ಅಷ್ಟೆ ಮುಖ್ಯ. ಪುರುಷನೆಂಬ ಅಹಂಕಾರ ಕಳೆದಾಗಲೇ ಮನಸ್ಸು ಮಾಗುವುದು ಎಂದರು.

ಗ್ರಂಥಕರ್ತೆ ರೇಖಾ ಪಾಟೀಲ ಮಾತನಾಡಿ, ವಿಜಯಪುರ ಭೌತಿಕವಾಗಿ ಬರಗಾಲ ನಾಡು ಎಂದು ಕರೆದರೂ ಇದು ಪ್ರೀತಿ ಸೆಲೆಯ ತವರು. ಎಲ್ಲಾ ಸಾಹಿತಿಗಳ ಕೃತಿ ರತ್ನಗಳ ಸಂಗಮದಲ್ಲಿ ಮಿಂದವಳು ನಾನು. ಹಿರಿಯ ಬರಹಗಾರರ ಕೃತಿಗಳ ಓದು ಹಾಗೂ ಸಾಹಿತ್ಯ ಸ್ಪಂದನ ಬಳಗವೇ ನನ್ನ ಕೃತಿಗೆ ಪ್ರೇರಣೆ ಎಂದರು.

ಡಾ.ಎಂ.ಎಸ್.ಮದಭಾವಿ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ, ಶಸಾಪ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಡಾ.ವಿ.ಡಿ.ಐಹೊಳ್ಳಿ, ಬಸವರಾಜ ಮನಗೊಂಡ, ಡಾ.ಸುಭಾಸಚಂದ್ರ ಕನ್ನೂರ, ಡಾ.ಮಲ್ಲಿಕಾರ್ಜುನ ಮೇತ್ರಿ, ದೊಡ್ಡಣ್ಣ ಭಜಂತ್ರಿ, ಬಸವರಾಜ ಪಾಟೀಲ, ಅಭಿಷೇಕ ಚಕ್ರವರ್ತಿ, ಸಿದ್ಧಲಿಂಗಪ್ಪ ಹದಿಮೂರ, ಬಿ.ಜಗದೀಶ, ಡಾ.ಆನಂದ ಕುಲಕರ್ಣಿ, ಡಾ.ಗೀತಾ ಪಾಟೀಲ, ಡಾ.ಭಾರತಿ ಪಾಟೀಲ, ಪ್ರೊ.ವೈ. ಲಕ್ಷ್ಮೀದೇವಿ, ಕೆ. ಸುನಂದಾ, ಶಿಲ್ಪಾ ಬಸ್ಮೆ, ವಿದ್ಯಾವತಿ ಅಂಕಲಗಿ, ಲತಾ ಚಿನಗುಂಡಿ, ಉಜ್ವಲಾ ಸರನಾಡಗೌಡ, ರಾಜಕುಮಾರ ಜೊಳ್ಳಿ, ಬಸವರಾಜ ಕುಂಬಾರ, ರವಿ ಕಿತ್ತೂರ, ಮಾಧವ ಗುಡಿ, ಸಂಗಮೇಶ ಬದಾಮಿ, ಎಸ್.ಐ.ಮೇತ್ರಿ, ಶಂಭು ಮೇರವಾಡಿ, ಯಲ್ಲಣ್ಣ ವಿಜಾಪುರ, ಎಮ್.ಎಸ್. ಮಾಗಣಗೇರಿ, ಪ್ರೊ. ವಿ.ಎಸ್.ಬಗಲಿ, ಹೇಮಲತಾ ವಸ್ತ್ರದ, ಅಮರೇಶ ಸಾಲಕ್ಕಿ, ಬಿ.ಆರ್.ಬನಸೋಡೆ, ಎಸ್.ಎಮ್.ಖೇಡಗಿ, ಪ್ರೊ. ನಾಗರಾಜ, ಮಹಮ್ಮದಗೌಸ ಹವಾಲದಾರ, ಪ್ರಭಾವತಿ ದೇಸಾಯಿ, ಶಾರದಾ ಕೊಪ್ಪ, ಮ.ಗು. ಯಾದವಾಡ, ಬಮ್ಮನಜೋಗಿ ಪಾಟೀಲ, ಸುಭಾಸ ಯಾದವಾಡ, ಮಹೇಶ ಚಿಂತಾಮನಿ, ಡಾ. ಅರುಣ ಹುಂಡೇಕಾರ, ಸುಭಾಸ ಬಗಲಿ, ಮೋಹನ ಬಗಲಿ, ಸಿಪಿಐ ಕಲ್ಲನಗೌಡ ಪಾಟೀಲ, ಡಾ.ಸುರೇಶ ಕಾಗಲಕರೆಡ್ಡಿ, ಅನೀಲ ಪಾಟೀಲ, ಡಾ.ರಾಜಶ್ರೀ ಪಾಟೀಲ, ಡಾ.ಸಂದ್ಯಾ ಆಲದಕಟ್ಟಿ, ಕವಿತಾ ಹೆಬ್ಬಳ್ಳಿ, ಸಂಗೀತಾ ಪಾಟೀಲ, ಭಾರತಿ ಮೇಟಿ, ನದಾಫ, ಖಾಜಿ, ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.

---------------

ಕೋಟ್‌....

ಸಂಗಾತಿ ಎಂದು, ಸಹೋದರಿ ಎಂದು, ತಾಯಿ ಮಗಳೆಂದು ತಮ್ಮ ಸರಿಸಮಾನವಾಗಿ ನಡೆಸಿದರೆ ಅದುವೆ ಪುರುಷ ಸಮಾಜ ಹೆಣ್ಣಿಗೆ ಕೊಡುವ ಗೌರವ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಟ್ಟುಕೊಳ್ಳುವ ಮಹಿಳೆಯರು ತಮ್ಮ ಕಟು ಅನುಭವಗಳನ್ನು ಬರಹದ ಮೂಲಕ ಹಂಚಿಕೊಳ್ಳಬೇಕು. ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಪಟ್ಟವನ್ನು ಪುರುಷರು ಕಟ್ಟಿದ್ದೆ ಹೊರತು ಮಹಿಳೆಯರಲ್ಲ.

- ಡಾ.ಮಲ್ಲಿಕಾ ಘಂಟಿ, ವಿಶ್ರಾಂತ ಕುಲಪತಿ