ಸಾರಾಂಶ
ನರಸಿಂಹರಾಜಪುರ: ನಮ್ಮ ಹಿರಿಯರು, ಸ್ವಾತಂತ್ರ ಹೋರಾಟಗಾರರು ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದು ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.
- ಸೀನಿಯರ್ ಛೇಂಬರ್ ವತಿಯಿಂದ ವರ್ಕಾಟೆ ಸರ್ಕಾರಿ ಶಾಲೆಗೆ ರೈನ್ ಕೋಟು ವಿತರಣೆ
ನರಸಿಂಹರಾಜಪುರ: ನಮ್ಮ ಹಿರಿಯರು, ಸ್ವಾತಂತ್ರ ಹೋರಾಟಗಾರರು ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದು ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.ಶುಕ್ರವಾರ ತಾಲೂಕಿನ ವರ್ಕಾಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ18 ವಿದ್ಯಾರ್ಥಿಗಳಿಗೆ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ರೈನ್ ಕೋಟು ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಕಾಟೆ ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಖಾಸಗಿ ಶಾಲೆಗಿಂತ ಅತ್ಯುತ್ತಮವಾಗಿದ್ದು ಇಲ್ಲಿನ ಮಕ್ಕಳು ನಿರರ್ಗಳವಾಗಿ ಇಂಗ್ಲೀಷ್, ಹಿಂದಿ ಹಾಗೂ ಕನ್ನಡದಲ್ಲಿ ಮಾತನಾಡುವ ನೈಪುಣ್ಯತೆ ಬೆಳೆಸಿಕೊಂಡಿದ್ದಾರೆ. ಇಲ್ಲಿನ ಮಕ್ಕಳು ಬುದ್ದಿವಂತರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕ ಮಕ್ಕಳು ಇಂದು ಉನ್ನತ ಸ್ಥಾನಮಾನ ಗಳಿಸಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ಕಲಿತಿ ದ್ದೇವೆ ಎಂಬ ಕೀಳಿರಿಮೆ ಬೇಡ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು. ವರ್ಕಾಟೆ ಶಾಲೆಯ ಮಕ್ಕಳಿಗೆ ರೈನ್ ಕೋಟನ್ನು ನಮ್ಮ ಸಂಸ್ಥೆ ಹಿರಿಯ ಸದಸ್ಯ ಎಸ್.ಎಸ್. ಪುಟ್ಟಸ್ವಾಮಿ ನೀಡಿದ್ದು ಅವರಿಗೆ ಅಭಿನಂದಿಸುತ್ತೇವೆ ಎಂದರು.
ರೈನ್ ಕೋಟು ದಾನ ನೀಡಿದ ಎಸ್.ಎಸ್.ಪುಟ್ಟಸ್ವಾಮಿ ಮಾತನಾಡಿದರು.ಅತಿಥಿಗಳಾಗಿ ಸೀನಿಯರ್ ಛೇಂಬರ್ ಖಜಾಂಚಿ ಎಸ್.ಎಸ್.ಗಿರಿ,ಸದಸ್ಯರಾದ ಎಂ.ಆರ್.ಸುಂದರೇಶ್, ಕುಮಾರ ಜಿ. ಶೆಟ್ಟಿ,ಟಿ.ಎಂ.ಶಿವಕುಮಾರ್,ಮೆಸ್ಕಾಂ ಇಲಾಖೆ ಮಂಜುನಾಥ್, ಎಸ್.ಡಿಎಂಸಿ ಅದ್ಯಕ್ಷ ರವೀಂದ್ರ, ಮುಖ್ಯ ಶಿಕ್ಷಕ ದೇವೇಂದ್ರಪ್ಪ, ಸಹ ಶಿಕ್ಷಕಿ ಪ್ರಕೃತಿ ಇದ್ದರು.