ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಸಂಘದ ಕಾರ್ಯದರ್ಶಿಗಳ ಕರ್ತವ್ಯ ಮತ್ತು ಜವಾಬ್ದಾರಿ ಬಹಳ ಮುಖ್ಯವಾಗಿದ್ದು, ಕಡತಗಳ ನಿರ್ವಹಣೆ ಹಾಗೂ ಸಹಕಾರ ಸಂಘಗಳ ಚುನಾವಣೆ ನಡೆಸುವ ವಿಧಿ ವಿಧಾನಗಳ ತಿಳುವಳಿಕೆ ಅಗತ್ಯ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ನಿ., ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ತುಮಕೂರು ಹಾಗೂ ಸಹಕಾರ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಇತ್ತೀಚಿನ ಕಾನೂನು ತಿದ್ದುಪಡಿ ಅಂಶಗಳ ಹಾಗೂ ಪ್ರಮುಖವಾಗಿ ಶುದ್ಧ ಹಾಲು ಉತ್ಪಾದನೆ ಬಗ್ಗೆ ಕುರಿತು ತರಬೇತಿ ಪಡೆಯುವುದು ಅಗತ್ಯ. ಈ ವಿಶೇಷ ತರಬೇತಿಯನ್ನು ತಾಲೂಕಿನ ಎಲ್ಲಾ ಹಾಲಿನ ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಸದುಪಯೋಗ ಪಡಿಸಿಳ್ಳಿ ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಿ. ವೆಂಕಟೇಗೌಡ , ಈ ಭಾಗದ ನಿರ್ದೇಶಕರಾದ ಎಸ್. ಆರ್. ಗೌಡ ರವರ ಹೈನುಗಾರಿಕೆಗೆ ತೋರಿಸುತ್ತಿರುವ ಆಸಕ್ತಿ ಹಾಗೂ ವಿಶೇಷವಾಗಿ ರೈತರ ಮೇಲಿರುವ ಕಾಳಜಿ ಮತ್ತು ರೈತರಿಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳ ಆಯೋಜನೆಯೇ ಕಾರಣ, ಜಿಲ್ಲಾ ಸಹಕಾರ ಯೂನಿಯನ್ ಸದಾ ನಿಮ್ಮ ಸಹಕಾರಕ್ಕೆ ಎಂದಿಗೂ ಜೊತೆಯಾಗಿ ಇರುವುದು ಎಂದರು. ಈ ಸಂದರ್ಭದಲ್ಲಿ ಸಹಕಾರ ಸಂಘದ ನಿವೃತ್ತ ಅಪರ ನಿಬಂಧಕರಾದ ಹೆಚ್. ಎಸ್. ನಾಗರಾಜಯ್ಯ, ಒಕ್ಕೂಟದ ವ್ಯವಸ್ಥಾಪಕರಾದ ಡಾ. ಟಿ. ವಿ. ಶ್ರೀನಿವಾಸ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ತುಮಕೂರು ಜಿಲ್ಲಾ ಸಹಕಾರ ಯೂನಿಯನ್, ನಿರ್ದೇಶಕರಾದ ಹೆಚ್. ಕೆ. ರೇಣುಕಪ್ರಸಾದ್, ರಾಮಚಂದ್ರಯ್ಯ, ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷರಾದ ಕೆ. ಆರ್. ಜಗದೀಶ್, ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸನ್, ಶಿರಾ ತಾಲೂಕು ಹಾಲು ಒಕ್ಕೂಟದ ಮುಖ್ಯಸ್ಥರಾದ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್ ಹಿರೇಮಠ ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಆಡಳಿತ ಮಂಡಳಿ ವರ್ಗದವರು ಭಾಗವಹಿಸಿದ್ದರು.