ಸಾರಾಂಶ
ಶೃಂಗೇರಿ: ಅಭಿವೃದ್ಧಿ ಹೆಸರಲ್ಲಿ ಇತ್ತಿಚೆಗೆ ಸ್ವಾಭಾವಿಕ ಅರಣ್ಯಗಳನ್ನು ಅವ್ಯಾಹತವಾಗಿ ನಾಶಗೊಳಿಸಲಾಗುತ್ತಿದೆ. ಸ್ವಾಭಾವಿಕ ಅರಣ್ಯ ಸಂಪತ್ತನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಪರಿಸರ ಹೋರಾಟಗಾರ ಅನಂತ್ ಹೆಗಡೆ ಆಶೀಸರ ಹೇಳಿದರು.

ತಾಲೂಕಿನ ಅಡ್ಡಗದ್ದೆಯಲ್ಲಿ ಅರಣ್ಯ ಇಲಾಖೆ, ಪಂಚಾಯಿತಿ ಜೀವವೈವಿಧ್ಯ ಸಮಿತಿ ಹಾಗೂ ಗ್ರಾಮ ಅರಣ್ಯ ಸಮಿತಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂತರ್ಜಲ ಉಳಿಸುವಲ್ಲಿ ಸ್ವಾಭಾವಿಕ ಅರಣ್ಯಗಳ ಪಾತ್ರ ಮಹತ್ತರವಾಗಿದೆ. ಸ್ವಾಭಾವಿಕ ಅರಣ್ಯಗಳಿದ್ದರೆ ಮಾತ್ರ ಮಳೆ, ಜಲ ಮೂಲ ಇರಲು ಸಾಧ್ಯ. ಇರುವ ಸ್ವಾಭಾವಿಕ ಅರಣ್ಯಗಳನ್ನು ಉಳಿಸಿ ಸಂರಕ್ಷಣೆ ಮಾಡಬೇಕಿದೆ ಎಂದರು.ಪ್ರಾಕೃತಿಕ ಸಂಪತ್ತಿನ ರಕ್ಷಣೆ, ಸೊಪ್ಪಿನ ಬೆಟ್ಟ, ಕಾನು, ಸ್ವಾಭಾವಿಕ ಅರಣ್ಯಗಳ ಸುಸ್ಥಿರ ನಿರ್ವಹಣೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸಿದ್ದಾರೆ. ತೋಟಗಳು, ಗೆದ್ದೆಯ ಸುತ್ತಲಿನ ಹಸಿರು ಪಟ್ಟಿ ಸೊಪ್ಪಿನ ಬೆಟ್ಟ ಸೇರಿದಂತೆ ತಾಲೂಕಿನಲ್ಲಿ 5 ಸಾವಿರ ಎಕರೆ ದಟ್ಟ ಅರಣ್ಯವಿದೆ. ಪ್ರತೀ ಗ್ರಾಮದಲ್ಲಿ ರೈತರೆ ಸೊಪ್ಪಿನ ಬೆಟ್ಟದ ಜೀವವೈವಿಧ್ಯತೆ ಉಳಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ಕಾರ್ಯಕರ್ತ ಆನೆಗುಳಿ ಸುಬ್ರಾವ್, ಆರ್ ಎಫ್ ಒ ಮಧುಕರ, ಅರಣ್ಯ ಸಮಿತಿಯ ರಾಮಚಂದ್ರ ರಾವ್, ಪರಾಶರ, ರಾಘವೇಂದ್ರ, ಗಣಪತಿ,ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.29 ಶ್ರೀ ಚಿತ್ರ 2-
ಶೃಂಗೇರಿ ಅಡ್ಡಗೆದ್ದೆಯಲ್ಲಿ ನಡೆದ ವನಮಹೋ್ತ್ಸವ ಕಾರ್ಯಕ್ರಮವನ್ನು ಪರಿಸರ ಹೋರಾಟಗಾರ ಅನಂತ್ ಹೆಗಡೆ ಆಶಿಸರ ಗಿಡ ನೆಡುವ ಮೂಲಕ ಉದ್ಘಾಟಿಸಿದರು.