ಮೂಡುಬಿದಿರೆ ‘ಕೋಟಿ - ಚೆನ್ನಯ’ ಕಂಬಳ ಕೂಟ ಫಲಿತಾಂಶ

| Published : Jan 28 2025, 12:46 AM IST

ಸಾರಾಂಶ

ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ : 23, ಕನೆ ಹಲಗೆ ವಿಭಾಗದಲ್ಲಿ: 13, ಹಗ್ಗ ಕಿರಿಯ ವಿಭಾಗದಲ್ಲಿ : 35, ಅಡ್ಡಹಲಗೆ ವಿಭಾಗದಲ್ಲಿ: 6, ನೇಗಿಲು ಹಿರಿಯ ವಿಭಾಗದಲ್ಲಿ : 38 ಜತೆ, ನೇಗಿಲು ಕಿರಿಯ ವಿಭಾಗದಲ್ಲಿ: 123 ಹೀಗೆ ಕೂಟದಲ್ಲಿ ಒಟ್ಟು 244 ಜೊತೆ ಕೋಣಗಳು ಭಾಗವಹಿಸಿದ್ದವು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆಯ ಒಂಟಿಕಟ್ಟೆ ಕಡಲಕೆರೆಯಲ್ಲಿ ನಡೆದ 22ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಭಾನುವಾರ ಮಧ್ಯರಾತ್ರಿ ಮುಕ್ತಾಯಗೊಂಡಿತು.

ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ : 23, ಕನೆ ಹಲಗೆ ವಿಭಾಗದಲ್ಲಿ: 13, ಹಗ್ಗ ಕಿರಿಯ ವಿಭಾಗದಲ್ಲಿ : 35, ಅಡ್ಡಹಲಗೆ ವಿಭಾಗದಲ್ಲಿ: 6, ನೇಗಿಲು ಹಿರಿಯ ವಿಭಾಗದಲ್ಲಿ : 38 ಜತೆ, ನೇಗಿಲು ಕಿರಿಯ ವಿಭಾಗದಲ್ಲಿ: 123 ಹೀಗೆ ಕೂಟದಲ್ಲಿ ಒಟ್ಟು 244 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆ ಹಲಗೆಯಲ್ಲಿ ನಿಡೋಡಿ ಕಾನ ರಾಮ ಸುವರ್ಣ(ಪ್ರಥಮ), ಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡ್ಡಾಪಿ ಸುರೇಶ್ ನಾಯ್ಕ.

ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ‘ಎ’ ಪ್ರಥಮ, ಹಲಗೆ ಮುಟ್ಟಿದವರು : ಭಟ್ಕಳ ಹರೀಶ್., ಬೋಳಾರ ತ್ರಿಶಾಲ್ ಕೆ ಪೂಜಾರಿ ‘ಬಿ’ ದ್ವಿತೀಯ, ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ.

ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ನಂದಳಿಕೆ ಶ್ರೀಕಾಂತ್ ಭಟ್ ‘ಎ’, ಓಡಿಸಿದವರು: ಬಂಬ್ರಾಣಬೈಲು ವಂದಿತ್‌ ಶೆಟ್ಟಿ, ದ್ವಿತೀಯ ಕೊಳಕೆ ಇರ್ವತ್ತೂರು ಭಾಸ್ಕರ ಎಸ್‌ ಕೋಟ್ಯಾನ್ ‘ಎ’, ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.

ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಉಮನೊಟ್ಟು ಶಿವರಾಮ ಹೆಗ್ಡೆ ಪ್ರಥಮ, ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ.

ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ದ್ವಿತೀಯ (ಬಿ), ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ.

ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ, ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ. ದ್ವಿತೀಯ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ, ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.

ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಮುನಿಯಾಲು ಉದಯ ಕುಮಾರ್ ಶೆಟ್ಟಿ ‘ಎ’, ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್. ದ್ವಿತೀಯ, ಕಲ್ಯ ಮಿತ್ತಬೆಟ್ಟು ಶ್ರೀಧರ ಕರಿಯಣ್ಣ ಪೂಜಾರಿ, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಮೂಡುಬಿದಿರೆ ಉಪವಲಯಾರಣ್ಯಧಿಕಾರಿಗಳಾದ ಗುರುಮೂರ್ತಿ, ಬಸಪ್ಪ, ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ಹರಿಪ್ರಸಾದ್‌ ಶೆಟ್ಟಿ, ಕಂಬಳ ಸಮಿತಿಯ ಪ್ರಮುಖರಾದ ಗುಣಪಾಲ ಕಡಂಬ, ಭಾಸ್ಕರ ಕೋಟ್ಯಾನ್, ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು ರಂಜಿತ್ ಪೂಜಾರಿ ಭಾಗವಹಿಸಿ ಬಹುಮಾನ ವಿತರಿಸಿದರು.