ಕನ್ನಡ ಭಾಷೆಯ ಶ್ರೀಮಂತಿಕೆ ನಮ್ಮ ನಿತ್ಯದ ಬದುಕಿನಲ್ಲಿರಬೇಕು-ತಹಸೀಲ್ದಾರ್‌

| Published : Nov 02 2024, 01:24 AM IST

ಸಾರಾಂಶ

ಕನ್ನಡ, ನಾಡು, ನುಡಿ ರಕ್ಷಣೆ ಕೇವಲ ಒಂದು ದಿನ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಸಾಲದು. ಕನ್ನಡ ಭಾಷೆಯ ಶ್ರೀಮಂತಿಕೆ ನಮ್ಮ ನಿತ್ಯದ ಬದುಕಿನಲ್ಲಿರಬೇಕು ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ಹೇಳಿದರು.

ರಟ್ಟೀಹಳ್ಳಿ: ಕನ್ನಡ, ನಾಡು, ನುಡಿ ರಕ್ಷಣೆ ಕೇವಲ ಒಂದು ದಿನ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಸಾಲದು. ಕನ್ನಡ ಭಾಷೆಯ ಶ್ರೀಮಂತಿಕೆ ನಮ್ಮ ನಿತ್ಯದ ಬದುಕಿನಲ್ಲಿರಬೇಕು ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಕನ್ನಡ ನಾಡಿನ ಬಾವುಟ ಎಷ್ಟು ಸುಂದರವಾಗಿದೆಯೋ ಹಾಗೆಯೇ ನಮ್ಮ ನೆಲ ಜಲ, ಭಾಷೆ, ಸಂಸ್ಕೃತಿ ಹಾಗೂ ಕನ್ನಡಿಗರು ಅಷ್ಟೆ ಸುಂದರ ಅಂತೆಯೇ ಕನ್ನಡ ನೆಲದಲ್ಲಿ ಹುಟ್ಟುವುದೇ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಸಾವಿರಾರು ವರ್ಷ ಕಳೆದರೂ ಶತಮಾನಗಳು ಉರುಳಿದರೂ ಯುಗಮಾನ ಮರಳಿದರು ಅಚ್ಚಳಿಯದೇ ಉಳಿಯುದೊಂದೆ ನಮ್ಮ ಕನ್ನಡ, ಜಾತಿ ಮತಗಳ ಮೀರಿದವರು ಹೊಸಮೌಲ್ಯಗಳ ಸಾರಿ ಜಗತ್ತಿಗೆ ಕನ್ನಡ ಭಾಷೆ ಹಾಗೂ ಕನ್ನಡದ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿದ ಕೀರ್ತಿ ಕನ್ನಡಿಗರಿಗೆ ಸಲ್ಲುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕಾಧ್ಯಕ್ಷ ಎನ್.ಸಿ. ಕಠಾರೆ ಮಾತನಾಡಿ, ಕನ್ನಡ ರಾಜ್ಯೋತ್ಸವದ ಮಹತ್ವ ಕನ್ನಡ ನಾಡಿನ ಇತಿಹಾಸ, ಸಂಸ್ಕ್ರತಿ, ಕಲೆ ಭಾಷೆ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

ಏಕೀಕೃತ ರಾಜ್ಯವಾದದ್ದು ನ.1, 1973ರಂದು ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡಿರುವ ನ.1ರ ಸುದಿನವಿದು. ಇಂತಹ ದಿನವನ್ನು ನಾವೆಲ್ಲರೂ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸೋಣ ಎಂದರು.

ಇಂದಿನ ದಿನಗಳಲ್ಲಿ ಕನ್ನಡವನ್ನು ಕನ್ನಡಿಗರೆ ಬಳಸಲು ಹಿಂಜರಿಯುವ ಸಂದರ್ಭದಲ್ಲಿ ಬೇರೆ ಭಾಷಿಕರು ಕನ್ನಡವನ್ನು ಕಲಿತು ಪ್ರೀತಿಸಿ ಆರಾಧಿಸುತ್ತಿರುವವರ ಬಗ್ಗೆ ನಾವೆಲ್ಲ ಹೆಮ್ಮ ಪಡುವಂತಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ನಾಡಿನ ಕೀರ್ತಿ ಸಾರುವ ಗೀತೆಗಳಿಗೆ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಪಿಎಸ್‌ಐ ರಮೇಶ ಪಿ.ಎಸ್. ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ದೊಡ್ಡಬಾರ್ಕಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಇದ್ದರು.

ಆಟೋ ರಾಜನ ಕನ್ನಡ ಪ್ರೀತಿ: ಪಟ್ಟಣದ ನಿವಾಸಿ ಆಟೋ ರಾಜ ಎಂದೇ ಖ್ಯಾತಿ ಪಡೆದ ವೀರಪ್ಪ ಹನುಮಂತಪ್ಪ ಹೆಬ್ಬಳ್ಳಿ ತಮ್ಮ ಆಟೋವನ್ನು ಹೂವಿನ ಅಲಂಕಾರದೊಂದಿಗೆ ತಾಯಿ ಭುವನೇಶ್ವರಿ ಅವರ ಭಾವಚಿತ್ರವಿರುವ ಆಟೋಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎನ್.ಸಿ. ಕಠಾರಿ ಚಾಲನೆ ನೀಡಿದರು.

ನಂತರ ಅವರು ಪಟ್ಟಣ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡದ ಕಂಪನ್ನು ಪಸರಿಸಿದರು.

ಕುಮಾರೇಶ್ವರ ಕಾಲೇಜ್ ಪ್ರಾಚಾರ್ಯ ಎಸ್.ಪಿ. ಬೆನಕನಕೊಂಡ, ಗಂಗಾಧರ ಹಲಗೇರಿ, ರಾಜು ಹರವಿಶೆಟ್ಟರ್, ಬುಳ್ಳಾಪುರ, ಕಟ್ಟಿ ಮುಂತಾದವರು ಇದ್ದರು.