ಬರಹಗಾರನಿಗೆ ಬದ್ಧತೆ ಇರಬೇಕು. ಅಸಹಾಯಕರಿಗೆ, ಅಶಕ್ತರಿಗೆ ದನಿಯಾಗಬೇಕು.

ಗದಗ: ಸಾಹಿತ್ಯ ವಲಯಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಮೂಲಕ ಕನ್ನಡದ ಹಿರಿಮೆಯನ್ನು ಗಡಿಯಾಚೆಗೂ ವಿಸ್ತರಿಸುವ ಕಾರ್ಯವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಮಾಡಿದ್ದಾರೆ. ಅವರ ಕೃತಿಗಳನ್ನು ಓದುವ ಮೂಲಕ ನಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕೆಂದು ಸಂಸ್ಕೃತಿ ಚಿಂತಕ ಪ್ರೊ. ಕೆ.ಎಚ್. ಬೇಲೂರ ತಿಳಿಸಿದರು. ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜರುಗಿದ ತಯಬಅಲಿ ಹೊಂಬಳ ಅವರ ಮೊದಲ ಸಹಗಮನ ಮತ್ತು ಬಾರೋ ಬಾರೋ ಚಂದ್ರಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೌಲಿಕ ಕೃತಿಗಳಿಂದ ಕನ್ನಡ ಸಾಹಿತ್ಯ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದರು.ಸಾಹಿತಿ ತಯಬಅಲಿ ಹೊಂಬಳ ಅವರ ಕಾದಂಬರಿ ಮೊದಲ ಸಹಗಮನ ಹಾಗೂ ಮಕ್ಕಳ ಕಥಾ ಸಂಕಲನ ಬಾರೋ ಬಾರೋ ಚಂದ್ರಮ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ. ಶಿವಪ್ಪ ಕುರಿ ಅವರು, ಬರಹಗಾರನಿಗೆ ಬದ್ಧತೆ ಇರಬೇಕು. ಅಸಹಾಯಕರಿಗೆ, ಅಶಕ್ತರಿಗೆ ದನಿಯಾಗಬೇಕು ಎಂದರು. ಮೊದಲ ಸಹಗಮನ ಕೃತಿಯನ್ನು ಪರಿಚಯಿಸಿದ ನೀಲಮ್ಮ ಅಂಗಡಿ ಮಾತನಾಡಿ, ಇಲ್ಲಿ ವೃದ್ಧಾಪ್ಯದ ಸಂಕಟಗಳನ್ನು ವಿವರಿಸಿದ್ದಾರೆ. ಬದುಕಿನ ಅಂತಿಮ ಸಮಯದಲ್ಲಿ ಹಿರಿಯರಿಗೆ ಬೇಕಾಗಿರುವುದು ಹಿಡಿಯಷ್ಟು ಪ್ರೀತಿ. ಅದರಿಂದ ವಂಚಿತರಾಗಿ ತೊಳಲಾಡುವ ಕುಟುಂಬವೊಂದರ ಸಂದರ್ಭವನ್ನು ಮನ ಮಿಡಿವಯುವಂತೆ ಚಿತ್ರಿಸಿದ್ದಾರೆ ಎಂದರು.ಬಾರೋ ಬಾರೋ ಚಂದ್ರಮ ಕೃತಿಯನ್ನು ಕ್ಷಮಾ ವಸ್ತ್ರದ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು.

ಈ ವೇಳೆ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಬಸವರಾಜ ಗಿರಿತಿಮ್ಮಣ್ಣವರ, ಎಂ.ಸಿ. ವಗ್ಗಿ, ವಿದ್ಯಾಧರ ದೊಡ್ಡಮನಿ, ಶಶಿಕಾಂತ ಕೊರ್ಲಹಳ್ಳಿ, ಶಿವಾನಂದ ಭಜಂತ್ರಿ, ಶಿ. ಜಯದೇವಭಟ್, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಶೈಲಶ್ರೀ ಕಪ್ಪರದ, ಕೆ.ಎಸ್. ಬಾಳಿಕಾಯಿ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಮಲ್ಲಿಕಾರ್ಜುನ ನಿಂಗೋಜಿ, ಪ್ರಲ್ಲಾದ ನಾರಪ್ಪನವರ, ಕಸ್ತೂರಿ ಕಡಗದ, ಮಂಜುಳಾ ವೆಂಕಟೇಶಯ್ಯ, ರಾಹುಲ ಗಿಡ್ನಂದಿ ಇತರರು ಇದ್ದರು.