ಐದು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಬಂದ್

| Published : Sep 20 2024, 01:32 AM IST

ಸಾರಾಂಶ

ಕೊರಟಗೆರೆ : ಇತ್ತೀಚಿಗಷ್ಟೇ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಾಗಿ ಎಲ್ಲೇಡೆ ಬೆಳೆಹಾನಿ, ಆಸ್ತಿಪಾಸ್ತಿ ಹಾಳಾಗಿದ್ದು, ಮಳೆ ಬಂದಾಗ ಸಾಮಾನ್ಯವಾಗಿ ರಸ್ತೆಗಳು ಹಾಳಾಗುತ್ತಿದ್ದು, ಅದರೆ ಈ ಐದು ಗ್ರಾಮಕ್ಕೆ ಸಂಚಾರ ಮಾಡುವ ಸೇತುವೆ ಕಿತ್ತು ಹೋಗಿ ವರ್ಷಗಳೆ ಕಳೆದರೂ ಯಾವೊಬ್ಬ ಅಧಿಕಾರಿಗಳು ಇತ್ತ ಭೇಟಿ ನೀಡಿಲ್ಲ.

ಎಚ್.ಎನ್.ನಾಗರಾಜು ಹೊಳವನಹಳ್ಳಿ

ಕೊರಟಗೆರೆ : ಇತ್ತೀಚಿಗಷ್ಟೇ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಾಗಿ ಎಲ್ಲೇಡೆ ಬೆಳೆಹಾನಿ, ಆಸ್ತಿಪಾಸ್ತಿ ಹಾಳಾಗಿದ್ದು, ಮಳೆ ಬಂದಾಗ ಸಾಮಾನ್ಯವಾಗಿ ರಸ್ತೆಗಳು ಹಾಳಾಗುತ್ತಿದ್ದು, ಅದರೆ ಈ ಐದು ಗ್ರಾಮಕ್ಕೆ ಸಂಚಾರ ಮಾಡುವ ಸೇತುವೆ ಕಿತ್ತು ಹೋಗಿ ವರ್ಷಗಳೆ ಕಳೆದರೂ ಯಾವೊಬ್ಬ ಅಧಿಕಾರಿಗಳು ಇತ್ತ ಭೇಟಿ ನೀಡಿಲ್ಲ.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಭಾಗದಲ್ಲಿ ಸುರಿದ ಭಾರಿ ಮಳೆಗೆ ಗರುಡಾಚಲ, ಜಯಮಂಗಲಿ ಹಾಗೂ ಸುವರ್ಣಮುಖಿ ನದಿಗಳು ಮೈದುಂಬಿ ಹರಿದ ಇನ್ನಲೇ ನದಿಗಳಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಗಳು ಸಂಪೂರ್ಣ ಹಾಳಾದರೆ. ಸೋಂಪುರ ಗ್ರಾಮದಿಂದ ಹನುಮೇನಹಳ್ಳಿ ಗ್ರಾಮಕ್ಕೆ ಸಂಚಾರ ಕಲ್ಪಿಸುವ ಮೇಲ್ಸೇತುವೆ ನೀರಿನ ರಭಸಕ್ಕೆ ಕಿತ್ತು ಹೋಗಿದ್ದು, ಗ್ರಾಮಸ್ಥರು ಸಂಚಾರ ಮಾಡಲು ತೊಂದರೆ ಉಂಟಾಗಿದೆ.ರಸ್ತೆ ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ;ಹನುಮೇನಹಳ್ಳಿ ಸೇರಿದಂತೆ ಐದಾರು ಗ್ರಾಮಕ್ಕೆ ಸಂಚಾರ ಮಾಡುವ ರಸ್ತೆಯ ಸೇತುವೆ ಕಿತ್ತು ಹೋಗಿದ ಪರಿಣಾಮ, ವಿಧ್ಯಾರ್ಥಿಗಳು, ಹಾಲು ಹಾಕುವ ರೈತರು, ಪಡಿತರ ತರುವವರು, ಬಸ್ಸಿಗೆ ಹೋಗುವವರು, ತೊಂದರೆ ಉಂಟಾಗಿ ೧೦ ಕಿಲೋ ದೂರ ಸಂಚಾರ ಮಾಡಿ ಬಳಸಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರುಗಾದರೂ ಆಸ್ಪತ್ರೆಗೆ ಹೋಗುವವರು ಕಷ್ಟ ಸಾಧ್ಯ. ಇನ್ನೂ ಆಂಬುಲ್ಯೆನ್ಸ್ ಬರುವುದು ಮರಿಚಿಕೆಯಾಗಿದೆ.ಹನುಮೇನಹಳ್ಳಿ, ತೊಗರಿಘಟ್ಟ, ಪಣ್ಣೇನಹಳ್ಳಿ, ಚಿಕ್ಕನಹಳ್ಳಿ ಗೋಡ್ರಹಳ್ಳಿ ಗ್ರಾಮಕ್ಕೆ ಸಂರ್ಪಕಿಸುವ ಮೊತ್ತೊಂದು ರಸ್ತೆಯ ಸೇತುವೆ ಅದು ಕೂಡ ಮಳೆಯ ರಭಸಕ್ಕೆ ಕಿತ್ತು ಹೋಗಿದ್ದು ಆ ರಸ್ತೆಯು ಬಂದ್ ಆಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಅನೇಕ ಭಾರಿ ತಹಸೀಲ್ದಾರ್, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಸುಮಾರು ಎರಡು ತಿಂಗಳ ಹಿಂದೆ ಸೇತುವೆ ಕೊಚ್ಚಿ ಹೋಗಿ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಮತ್ತು ವೃದ್ದರು ಪಿಂಚಣಿ ಹಣ ಪಡೆಯಲು ತುಂಬಾ ತೊಂದರೆ ಉಂಟಾಗಿದೆ. ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಮಳೆ ಬಂದೆ ಸಾಕು ದಿಗ್ಬಂಧನ ಆದಂತೆ ಆಗುತ್ತದೆ, ತ್ವರಿತವಾಗಿ ನಾವು ಓಡಾಡಲು ಸೇತುವೆಯನ್ನ ನಿರ್ಮಾಣ ಮಾಡಿಕೊಡಿ.- ಮಂಜುನಾಥ್. ಹನುಮೇನಹಳ್ಳಿ ಗ್ರಾಮಸ್ಥ

ಚುನಾವಣೆ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ರಸ್ತೆ ಹಾಗೂ ಊರಿಗೆ ಅಭಿವೃದ್ದಿ ಕೆಲಸಗಳು ಮಾಡಿಕೊಡಲಾಗುವುದು ಎಂದು ಭರವಸೆ ಕೊಟ್ಟು ಹೋಗ್ತಾರೆ ನಂತರ ಯಾರು ಕೂಡ ಇತ್ತ ತಿರುಗಿ ನೋಡಲ್ಲ. ಇನ್ನೂ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರು ಯಾವುದೆ ಪ್ರಯೋಜನ ಆಗಿಲ್ಲ.- ಶ್ರೀನಿವಾಸ್ ಪಣ್ಣೇನಹಳ್ಳಿ ಗ್ರಾಮಸ್ಥಅತಿವೃಷ್ಟಿಯಾದ ಕಾರಣ ಹನುಮೇನಹಳ್ಳಿ ಗ್ರಾಮಕ್ಕೆ ಸಂರ್ಪಕಿಸುವ ರಸ್ತೆಯಲ್ಲಿರುವ ಸೇತುವೆ ಹಾಳಾಗಿದ್ದು, ನಾನು ನಮ್ಮ ತಂಡ ಸ್ಥಳಕ್ಕೆ ಭೇಟಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ತಂದು ಪಂಚಾಯತ್ ರಾಜ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅದಷ್ಟು ಬೇಗ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ.- ಕೆ.ಮಂಜುನಾಥ್ ತಹಸೀಲ್ದಾರ್ ಕೊರಟಗೆರೆ.