ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಉಳಿತಾಯ ಮತ್ತು ಸಾಲ ಚಟುವಟಿಕೆ ಉತ್ತೇಜಿಸುವದು

ಹನುಮಸಾಗರ: ಮಹಿಳೆಯರು ಸ್ವಾಲಂಭಿಯಾಗಿ ಕುಟುಂಬ ನಿರ್ವಹಿಸಲು ಸಂಘಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ಯೋಜನಾಧಿಕಾರಿ ಪ್ರಕಾಶ ರಾವ್ ಹೇಳಿದರು.

ಇಲ್ಲಿನ ಶ್ರೀಅಂಭಾಭವಾನಿ ದೇಗುಲದ ಜಗದಂಬಾ ಕಲ್ಯಾಣ ಮಂಟಪದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಹನುಮಸಾಗರ ಕಾರ್ಯ ಕ್ಷೇತ್ರದ ಒಕ್ಕೂಟ ಪದಾಧಿಕಾರಿಗಳ ತರಬೇತಿಯಲ್ಲಿ ಮಾತನಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಉಳಿತಾಯ ಮತ್ತು ಸಾಲ ಚಟುವಟಿಕೆ ಉತ್ತೇಜಿಸುವದು. ಸಂಸ್ಥೆಯಿಂದ ಸಂಘಗಳಿಗೆ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಸರ್ಕಾರದ ಆರ್ಥಿಕ ಯೋಜನೆಗಳ ಲಾಭ ಪಡೆಯಲು ಸಹಾಯ ಮಾಡುವದು. ಸಾಮಾಜಿಕ ಸಬಲೀಕರಣಕ್ಕಾಗಿ ವರದಕ್ಷಿಣೆ, ಮಧ್ಯಪಾನ, ಬಾಲ್ಯ ವಿವಾಹ ತಡೆಗಟ್ಟಲು ಹಾಗೂ ಸಾಮಾಜಿ ಪಿಡುಗುಗಳ ವಿರುದ್ಧ ಹೋರಾಡುವದು ಕೆಲವೊಮ್ಮ ಮಹಿಳೆಯರ ಪಾತ್ರವು ಮುಖ್ಯವಾಗಿರುತ್ತದೆ ಎಂದರು.

ತಾಲೂಕು ಯೋಜನಾಧಿಕಾರಿ ನಿರಂಜನ್, ವಲಯ ಮೇಲ್ವಿಚಾರಕಿ ನಂದಾ, ನಾನಾ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುನೀತಾ ಕೋಮಾರಿ, ಲಕ್ಷ್ಮೀಬಾಯಿ ಪತ್ತಾರ, ಜಯಶ್ರೀ, ಶಿವಬಾಯಿ ಕವಲೂರ, ಶೋಭಾ ವಡ್ಡರ, ವಲಯ ಸೇವಾಪ್ರತಿನಿಧಿ ಅಬುಬಕರ್, ರೇಷ್ಮಾ, ಮಂಜುಳಾ, ಗಿರೀಜಾ, ಫಾತೀಮಾ, ಶರಣಮ್ಮ ಇತರರು ಇದ್ದರು.