ಸ್ವಾತಂತ್ರ್ಯಪೂರ್ವ, ನಂತರ ಪತ್ರಕರ್ತರ ಪಾತ್ರ ದೊಡ್ಡದು

| Published : Feb 16 2025, 01:46 AM IST

ಸಾರಾಂಶ

ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿನ ಪತ್ರಕರ್ತರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ವರದಿ ಮಾಡಿ ಅನೇಕರು ಜೀವ ತ್ಯಾಗ ಮಾಡಿದ ಉದಾಹರಣೆಗಳಿದ್ದು, ಸ್ವತಂತ್ರ ನಂತರವೂ ಅವರನ್ನು ಕಾರ್ಯ ದೇಶ ಬೆಳವಣಿಗೆಯಲ್ಲಿ ರಾಜಕಾರಣಿಗಳ ಬೆಳವಣಿಗೆ ಮತ್ತು ಹಿನ್ನಡೆಯಲ್ಲಿ ಪತ್ರಕರ್ತರ ಪಾತ್ರ ಮಂಚೂಣಿಯಲ್ಲಿ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿನ ಪತ್ರಕರ್ತರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ವರದಿ ಮಾಡಿ ಅನೇಕರು ಜೀವ ತ್ಯಾಗ ಮಾಡಿದ ಉದಾಹರಣೆಗಳಿದ್ದು, ಸ್ವತಂತ್ರ ನಂತರವೂ ಅವರನ್ನು ಕಾರ್ಯ ದೇಶ ಬೆಳವಣಿಗೆಯಲ್ಲಿ ರಾಜಕಾರಣಿಗಳ ಬೆಳವಣಿಗೆ ಮತ್ತು ಹಿನ್ನಡೆಯಲ್ಲಿ ಪತ್ರಕರ್ತರ ಪಾತ್ರ ಮಂಚೂಣಿಯಲ್ಲಿ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ ಹೇಳಿದರು.

ಗೋವಾ ರಾಜ್ಯದ ಮಡಗಾಂವ ಹತ್ತಿರ ಕೊಲೀಮಾರ ಬೀಚ್ ರೆಸಾರ್ಟ್‌ನಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘ ಮತ್ತು ಗೋವಾ ಯೂನಿಯನ್ ಆಫ್ ಜರ್ನಲಿಸ್ಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಪ್ರಸಕ್ತ ರಾಜ್ಯದ ಎಲ್ಲ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದು, ₹3000 ಇದ್ದ ನಿವೃತ್ತಿ ವೇತನವನ್ನು ₹12,000 ಮಾಡಿದ್ದು, ಪತ್ರಕರ್ತರ ಅನುಕೂಲಕ್ಕೆ ಅನೇಕ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ಇನ್ನು ಅನೇಕ ಕೆಲಸಗಳಿಗೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಪತ್ರಕರ್ತರ ಕೆಲಸಗಳನ್ನು ಮೂತವರ್ಜಿ ವಹಿಸಿ ತಮ್ಮ ಕೆಲಸಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಮಾತನಾಡಿ, ಪತ್ರಕರ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ, ರಕ್ಷಣೆ ಮಾಡುವ ಕೆಲಸ ಆಗಬೇಕು. ನಿಮ್ಮ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಮ್ಮ ಬೆಂಬಲಿಗನಾಗಿ ನಾನು ಇದ್ದೇನೆ ಎಂದು ಭರವಸೆ ನೀಡಿದರು.ಶೇಗುಣಸಿ ಮಹಾಂತ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ನೆಲದ ಸ್ವಾಸ್ಥ್ಯ ಕಾಪಾಡಿ ಸಮಾಜದ ಸುಧಾರಣೆಗೆ ಪತ್ರಕರ್ತರು ಶ್ರಮಿಸುತ್ತಿದ್ದು, ಅವರ ಒಳಿತಿಗೆ ಸರ್ಕಾರ, ರಾಜಕಾರಣಿಗಳು ಕೆಲಸ ಮಾಡಬೇಕು ಎಂದರು.ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮುರಘೇಶ ಶಿವಪೂಜಿ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಸಂಘದ ಸುಮಾರು ಜನ ಸೇರಿ ಸಂಘವನ್ನು ಈ ಹಂತಕ್ಕೆ ತಂದಿದ್ದು, ಅಪಘಾತ ವಿಮೆ ₹1 ಲಕ್ಷ, ₹2 ಲಕ್ಷ, ಈಗ ₹5 ಲಕ್ಷಗಳನ್ನು ಮಾಡಿದ್ದು, ಸಂಘಕ್ಕೆ ಇದುವರೆಗೂ ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಅದಕ್ಕಾಗಿ ಸ್ಪೀಕರ್ ಖಾದರ್ ಅವರು ನಮ್ಮ ಸಂಘದ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಮುಂದೆ ಬರಬೇಕು ಎಂದು ತಿಳಿಸಿದರು.ರಾಷ್ಟ್ರೀಯ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಕೆ.ಬಿ.ಪಂಡಿತ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಮಸ್ಯೆಗಳ ಮಾತನಾಡಿದರು. ಸಂಘದ ಕಾರ್ಯದರ್ಶಿ ಸುಜನ ಚೌದರಿ, ದೇಶದ ನಾನಾ ರಾಜ್ಯಗಳ ಹಿರಿಯ ಪತ್ರಕತ್ರರು ಹಾಗೂ ನಿರ್ದೇಶಕರಾದ ಮದನಸಿಂಗ, ದೊರೈಸ್ವಾಮಿ, ಜಸ್ಮಿತ್ ಪಟ್, ಗಣಪತಿ ಪಾಂಡ್ಯ, ಡಾ.ಮಹೇಂದ್ರ ಮಧುರ, ನವೀನಕುಮಾರ, ಸುದೇಶ ಕುಮಾರ, ಆಶಿಫ್ ಚೌದರಿ ಸೇರಿದಂತೆ ದೇಶದ ಅನೇಕ ರಾಜ್ಯಗಳ ಪತ್ರಕರ್ತರು ಭಾಗವಹಿಸಿದ್ದರು. ಪ್ರೀಯ ಸುದೇಶ ನಿರೂಪಣೆ ಮಾಡಿದರು.