ಸಾರಾಂಶ
ಕನ್ನಡಪ್ರಭ ವಾರ್ತೆ ಕಮತಗಿ
ಮಗುವಿಗೆ ಮೊದಲ ಗುರು ತಾಯಿ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿ ಮಹತ್ವದ ಪಾತ್ರ ವಹಿಸುತ್ತಾಳೆ ಎಂದು ಶ್ರೀನಿವಾಸ ಪತ್ತಿನ ಸಹಕಾರಿ ಸಂಘದ ವಿಜಯಪುರ ಶಾಖೆಯ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.ಪಟ್ಟಣದಲ್ಲಿ ವಿಶ್ವಚೇತನ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀನಿವಾಸ ಶಿಕ್ಷಣ ಸಂವರ್ಧನ ಸಮಿತಿ ವಿಶ್ವಚೇತನ ಕನ್ನಡ ಮೀಡಿಯಂ ಶಾಲೆ ಹಾಗೂ ಕುಬೇರಪ್ಪ ಚಿತ್ರಗಾರ ಇಂಗ್ಲಿಷ್ ಮೀಡಿಯಂ ಶಾಲೆಯ 22ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬೆಲ್ಲ ಬಲ್ಲಂಗ ಚಿನ್ನಿಸಕ್ರಿ ತಿಂದಂಗ-2025ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ಮಕ್ಕಳ ಚಲನವಲನದ ಕುರಿತು ಸದಾ ಗಮನ ಹರಿಸಬೇಕು. ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗುವಂತೆ ಮಾಡುವಲ್ಲಿ ಶ್ರಮಿಸಬೇಕು. ತಾಯಿಯಂದಿರರು ಮನೆಯಲ್ಲಿ ದಾರಾವಾಹಿ ವೀಕ್ಷಿಸಲು ನೀಡುತ್ತಿರುವ ಸಮಯ ಮಕ್ಕಳ ಬಗೆಗೆ ಕಾಳಜಿವಹಿಸುವುದರಲ್ಲಿ ನೀಡಿ ಅವರ ಜೊತೆ ವಿದ್ಯಾಭ್ಯಾಸದ ಕುರಿತು, ಸಾಮಾನ್ಯ ಜ್ಞಾನದ ಕುರಿತು ಚರ್ಚಿಸಿ ಮಕ್ಕಳ ಜೊತೆ ಮಾರ್ಗದರ್ಶಕರಾಗಿ, ಸ್ನೇಹಿತರಾಗಿ, ಹಿತೈಷಿಗಳಾಗಿ ಉತ್ತಮ ಸಂಬಂಧ ಹೊಂದಿ ಉತ್ತಮ ಸಮಾಜ ರೂಪಿಸುವಂತಾಗಬೇಕು ಎಂದರು.
ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಉತ್ತಮವಾದ ಶಿಕ್ಷಣ ಎಲ್ಲಿ ಸಿಗುತ್ತದೆಯೋ ಅಲ್ಲಿ ಉತ್ತಮ ಸಂಸ್ಕಾರ ಕೊಡುವ ವ್ಯವಸ್ಥೆ ಇದೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ವಿಶ್ವಚೇತನ ಶಾಲೆಯ ಆಡಳಿತ ಮಂಡಳಿಯು ಪ್ರತಿವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಹೊಸತನ ಕಲಿಸಿಕೊಂಡು ಬರುವ ಮೂಲಕ ತನ್ನ 22ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಶಿಷ್ಟವಾದ ಪ್ರತಿಭೆಗಳನ್ನು ಹೊರ ಹೊಮ್ಮಲು ಸಾಂಸ್ಕೃತಿಕ ವೇದಿಕೆ ಕಲ್ಪಿಸಿಕೊಡುವ ಕಾರ್ಯ ಶ್ಲಾಘನೀಯವಾದುದು ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.ಕಮತಗಿ ಹಿರೇಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ, ಮಾತೋಶ್ರೀ ಬಸವಣೆಮ್ಮತಾಯಿ ಬಸರಕೋಡ, ಅಬೂಬಕರ ಆಶ್ರಫಿ ಸಕಾಫಿ ಸಾಹೇಬ ಅಧ್ಯಕ್ಷತೆ, ಕಾಂಗ್ರೆಸ್ ಯುವ ಮುಖಂಡ ಉಮೇಶ ಮೇಟಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಪಪಂ ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಪಾರ್ವತಿ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಮಂಕಣಿ, ಶ್ರೀನಿವಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಅಂಗಡಿ, ಸಂಸ್ಥೆ ಅಧ್ಯಕ್ಷ ನಾರಾಯಣ ದೇಶಪಾಂಡೆ, ಬಾಗಲಕೋಟೆ ಶ್ರೀನಿವಾಸ ಬ್ಯಾಂಕ್ ಶಾಖೆ ಅಧ್ಯಕ್ಷ ಅಚ್ಯುತರಾವ್ ಮೇಟಿ, ಉಪಾಧ್ಯಕ್ಷ ಇಸಾಕ್ ದಂಡಿಯಾ, ವಿಜಯಪುರ ಶ್ರೀನಿವಾಸ ಬ್ಯಾಂಕ್ ಶಾಖೆ ಉಪಾಧ್ಯಕ್ಷ ಸೋಮಶೇಖರ ಜತ್ತಿ, ಕಾಂಗ್ರೆಸ್ ಮುಖಂಡ ಎನ್.ಎಲ್.ತಹಸೀಲ್ದಾರ್, ಡಾ.ಎಸ್.ಎಲ್.ಬಾಲರಡ್ಡಿ, ಈರಣ್ಣ ಬಲ್ಮಿ, ದೈಹಿಕ ಶಿಕ್ಷಣ ಕ್ರೀಡಾ ನಿರ್ದೇಶಕ ಎಸ್.ಬಿ ಚಳಗೇರಿ, ಪಿಎಸ್‌ಐ ಜ್ಯೋತಿ ವಾಲಿಕಾರ, ಪಪಂ ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ, ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರು, ಶಾಲೆ ಮುಖ್ಯಗುರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಇದೇ ವೇಳೆ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸಂಸ್ಥೆವತಿಯಿಂದ ಸನ್ಮಾನಿಸಿ ಗೌರವಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.