ಸಮಾಜದ ಬದಲಾವಣೇಲಿ ಪತ್ರಿಕೆ ಪಾತ್ರ ಮಹತ್ವ

| Published : Feb 02 2024, 01:04 AM IST

ಸಾರಾಂಶ

ಕಾನೂನು ಮತ್ತು ಸಾಮಾಜಿಕ ಬದಲಾವಣೆಯಾಗಲು ಹೆಚ್ಚಿನ ಮಟ್ಟದಲ್ಲಿ ಪತ್ರಿಕಾ ವರದಿಗಳೆ ಕಾರಣ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಹೇಳಿದರು.

ಎಲ್.ನಾರಾಯಣಸ್ವಾಮಿ ಅಭಿಮತ । ಜಾತಿಯತೆ ಇರುವವರೆಗೂ ಅಸ್ಪೃಶ್ಯತೆ ಇರುತ್ತದೆ

ಕನ್ನಡಪ್ರಭ ವಾರ್ತೆ ಚಾಮರಾಜನಗರಕಾನೂನು ಮತ್ತು ಸಾಮಾಜಿಕ ಬದಲಾವಣೆಯಾಗಲು ಹೆಚ್ಚಿನ ಮಟ್ಟದಲ್ಲಿ ಪತ್ರಿಕಾ ವರದಿಗಳೆ ಕಾರಣ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಷ್ಟೋ ದೂರುಗಳು ನಮಗೆ ಪತ್ರಿಕಾ ವರಿದಿಯನ್ನೆ ಆಧರಿಸಿ ಬಂದಿವೆ, ಅವುಗಳ ಮೇಲೆಯೇ ತನಿಖೆಯನ್ನು ಮಾಡಲಾಗಿದೆ ಎಂದರು. ನಾವು ದೂರದಾರರನ್ನು ನೋಡಿರುವುದಿಲ್ಲ, ಪತ್ರಿಕಾ ವರದಿಗಳನ್ನು ನೋಡಿ ಅದರ ಮೇಲೆ ನಮಗೆ ದೂರು ನೀಡಿರುತ್ತಾರೆ. ಆದ್ದರಿಂದ ಕಾನೂನು ಮತ್ತು ಸಾಮಾಜಿಕ ಬದಲಾವಣೆಗಲ್ಲಿ ಮಾಧ್ಯಮ ವರದಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಚಾಮರಾಜನಗರದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ ನೋಂದಣಿಯಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ವಿಲೇ ಮಾಡಿ ಕ್ರಮಕೈಗೊಳ್ಳಲಾಗಿದೆ, ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ, ನೊಂದವರಿಗೆ ಸಹಾಯ ಮಾಡಬೇಕು ಎಂದರು. ಸಾಮಾಜಿಕ ಬಹಿಷ್ಕಾರಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ, ಮಾಧ್ಯಮದವರು ಸಹ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳು ಇದ್ದರೆ ನೇರವಾಗಿ ನಮ್ಮ ಕಚೇರಿಗೆ ಕಳುಹಿಸಬಹುದು ಎಂದರು.ಜಾತಿಯತೆ ಇರುವವರೆಗೂ ಈ ಅಸ್ಪೃಶ್ಯತೆ ಎನ್ನವುದು ಇರುತ್ತದೆ. ಈ ಸಂಕೋಲೆಯಿಂದ ನಾವು ಹೊರಬರಬೇಕು. ಆಗ ಮಾತ್ರ ಈ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕೊನೆಯಾಗುತ್ತವೆ ಎಂದರು. ಈ ನಿಟ್ಟಿನಲ್ಲಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ, ಸರ್ಕಾರಗಳು ಸಹ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು, ಆಕ್ಸಿಜನ್ ದುರಂತಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತವೇ ಸೂಕ್ರ ಕ್ರಮಕೈಗೊಂಡಿದೆ ಎಂದರು.ಪ್ರತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಶಾಮ್ ಭಟ್ಟರು, ಹೊನ್ನೇಗೌಡ, ಡಿಸಿ, ಶಿಲ್ಪಾನಾಗ್, ಜಿಪಂ ಸಿಇಒ ಅನಂದ್ ಕುಮಾರ್ ಮೀನಾ ಇತರರು ಇದ್ದರು.