ಸಾರಾಂಶ
ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸುವ ಜತೆಗೆ ಪಾಲಕರು ಹಾಗೂ ಪೋಷಕರು ಆಗಮಿಸಿ ಅಂಗನವಾಡಿಯಲ್ಲಿ ಕಲಿಸುವ ಚಟುವಟಿಕೆಯನ್ನು ನೋಡಿಕೊಂಡು ಮಕ್ಕಳಿಗೆ ಮನೆಯಲ್ಲೂ ಅಳವಡಿಸಿದರೆ ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಕೇಸೂರು ಗ್ರಾಮದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ
ಕನ್ನಡಪ್ರಭ ವಾರ್ತೆ ಕುಷ್ಟಗಿಅಂಗನವಾಡಿ ಕೇಂದ್ರಗಳು ಮೂರು ವರ್ಷಗಳಿಂದ ಆರು ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವ ಮೂಲಕ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸುವಲ್ಲಿ ಕಾರ್ಯಕರ್ತೆಯರ ಜತೆಗೆ ಪಾಲಕರ ಹಾಗೂ ಪೋಷಕರ ಪಾತ್ರ ಬಹಳಷ್ಟು ಪ್ರಮುಖವಾದದ್ದು ಎಂದು ದೋಟಿಹಾಳ ವಲಯದ ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ ಅಭಿಪ್ರಾಯಪಟ್ಟರು.ತಾಲೂಕಿನ ಕೇಸೂರು ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಅಂಗನವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿ ನಡೆದ ಪೋಷಕರ ನಡೆ ಅಂಗನವಾಡಿ ಕಡೆ, ಶಾಲಾ ಪೂರ್ವ ಶಿಕ್ಷಣದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸುವ ಜತೆಗೆ ಪಾಲಕರು ಹಾಗೂ ಪೋಷಕರು ಆಗಮಿಸಿ ಅಂಗನವಾಡಿಯಲ್ಲಿ ಕಲಿಸುವ ಚಟುವಟಿಕೆಯನ್ನು ನೋಡಿಕೊಂಡು ಮಕ್ಕಳಿಗೆ ಮನೆಯಲ್ಲೂ ಅಳವಡಿಸಿದರೆ ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪಾಲಕರು ಮಕ್ಕಳನ್ನು ಅಂಗನವಾಡಿ ಕಳುಹಿಸುವ ಮನೋಭಾವ ಹೊಂದಬೇಕು. ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ಅಂಗನವಾಡಿಗಳು ಶ್ರಮಿಸುತ್ತಿವೆ. ಬಾಣಂತಿಯರಿಗಾಗಿ ಪೌಷ್ಟಿಕ ಆಹಾರ ವಿತರಣೆಗೆ ಮುಂದಾಗಿದ್ದು, ಕೇಂದ್ರದಲ್ಲಿ ಮಕ್ಕಳನ್ನು ಸಕ್ರಿಯವಾಗಿ ಎಲ್ಲ ಚಟುವಟಿಕೆಯಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು.ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಿಬ್ಬಂದಿ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ ಚೌಡಮ್ಮ ದಾಸರ, ರೇಣುಕಾ ಮಡಿವಾಳರ ಹಾಗೂ ಪಾಲಕರು, ಪೋಷಕರು ಮಕ್ಕಳು ಭಾಗವಹಿಸಿದ್ದರು.