ಸಾರಾಂಶ
-ಡಯಟ್‍ನಲ್ಲಿ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನಾಸಿರುದ್ದೀನ್
-----ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ಪಡೆಯಲು ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯವಾದುದು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.ನಗರದ ಡಯಟ್‍ನಲ್ಲಿ ಫಲಿತಾಂಶ ಉತ್ತಮಪಡಿಸುವ ಸಂಬಂಧ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರ ಸಮನ್ವಯತೆಯಿಂದ ಮಕ್ಕಳ ಕಲಿಕಾ ಪ್ರಗತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಶಾಲಾ ಕ್ರಿಯಾ ಯೋಜನೆಯಂತೆ ಶಿಕ್ಷಕರು ಅಭ್ಯಾಸ ಪರೀಕ್ಷೆ, ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ, ವಿಶೇಷ ತರಗತಿ, ವಿಷಯಾಧಾರಿತ ರಸಪ್ರಶ್ನೆ, ಸರಣಿ ಪರೀಕ್ಷೆ ನಡೆಸುವುದರ ಮೂಲಕ ಮಕ್ಕಳನ್ನು ಪರೀಕ್ಷೆ ಎದುರಿಸಲು ಪೂರ್ವ ಸಿದ್ಧತೆ ಮಾಡಿ ಜಿಲ್ಲೆಯ ಫಲಿತಾಂಶ 10 ರ ಸ್ಥಾನದೊಳಗೆ ಬರುವಂತೆ ಶ್ರಮಿಸಬೇಕು ಎಂದರು.
ನೋಡಲ್ ಅಧಿಕಾರಿ ಎಸ್.ಸಿ ಪ್ರಸಾದ್ ಮಾತನಾಡಿ, ಫಲಿತಾಂಶ ಉತ್ತಮ ಪಡಿಸುವ ಸಂಬಂಧ ಶಿಕ್ಷಕರ ಶಿಕ್ಷಣ ಯೋಜನೆಯಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಆಯ್ದ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಸೇರಿ ಒಟ್ಟು 290 ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಮುಖ್ಯ ಶಿಕ್ಷಕರು ಪ್ರತಿ ಶನಿವಾರ ಶಿಕ್ಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಕುರಿತು ಚರ್ಚಿಸಬೇಕು. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯ ಮಾಧರಿ ಪರಿಚಯಿಸಿ ಪ್ರಶ್ನೆಗಳ ವಿಧ, ನಿಗದಿಪಡಿಸಿರುವ ಅಂಕಗಳು, ಉತ್ತರಿಸುವ ಸಮಯದ ಮಾಹಿತಿ ಪರಿಚಯಿಸಬೇಕು. ಈ ತರಬೇತಿಯಲ್ಲಿ ಪೋಕ್ಸೋ ಕಾಯಿದೆ ಕುರಿತು ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದಿದರು.ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್, ಶಿವಣ್ಣ, ಶ್ರೀನಿವಾಸ್, ಜಿ.ಎಸ್.ನಾಗರಾಜು, ತಿಮ್ಮರಾಜು, ಉಪನ್ಯಾಸಕರಾದ ಸಿ.ಎಸ್.ಲೀಲಾವತಿ, ಶಿವಲೀಲ, ವಿ.ಕನಕಮ್ಮ ಮತ್ತು ಮುಖ್ಯ ಶಿಕ್ಷಕರು ಇದ್ದರು.
----------ಪೋಟೋ: ಚಿತ್ರದುರ್ಗದ ಡಯಟ್‍ನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಾಚಾರ್ಯ ಎಂ.ನಾಸಿರುದ್ದೀನ್ ಉದ್ಘಾಟಿಸಿದರು.
------ಫೋಟೋ: 7 ಸಿಟಿಡಿ2