ಸಾರಾಂಶ
ಕನ್ನಡ ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ನಾಡಿಗೆ ಸಾರುವಲ್ಲಿ ನಾಟಕಗಳು ಪ್ರಮುಖ ಪಾತ್ರವನ್ನು ವಹಿಸುವ ಜತೆಯಲ್ಲಿ ಉತ್ತಮ ಸಂದೇಶಗಳನ್ನು ತಳಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಕರವೇ ತಾಲೂಕು ಅಧ್ಯಕ ಹೇಮಂತ್ ಕುಮಾರ್ ಹೇಳಿದರು. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾಟಕ ಕ್ಷೇತ್ರ ಮಾಡುತ್ತಾ ಬರುತ್ತಿದೆ. ಕನ್ನಡದ ಮಂದಿ ನಾಟಕಗಳನ್ನು ಹೆಚ್ಚು ವೀಕ್ಷಿಸುವ ಜತೆಯಲ್ಲಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಅಲ್ಲದೇ ತಮ್ಮ ಮಕ್ಕಳನ್ನು ರಂಗಭೂಮಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕನ್ನಡ ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ನಾಡಿಗೆ ಸಾರುವಲ್ಲಿ ನಾಟಕಗಳು ಪ್ರಮುಖ ಪಾತ್ರವನ್ನು ವಹಿಸುವ ಜತೆಯಲ್ಲಿ ಉತ್ತಮ ಸಂದೇಶಗಳನ್ನು ತಳಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಕರವೇ ತಾಲೂಕು ಅಧ್ಯಕ ಹೇಮಂತ್ ಕುಮಾರ್ ಹೇಳಿದರು.ನಗರದ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಅರಸೀ ಸಾಂಸ್ಕೃತಿಕ ವೇದಿಕೆ ವತಿಯಿಂದ ಮತ್ತು ನಿರ್ದಿಗಂತ ತಂಡದಿಂದ ಏರ್ಪಡಿಸಿದ್ದ "ತಿಂಡಿಗೆ ಬಂದ ತುಂಡೆರಾಯ " ಎಂಬ ನಾಟಕ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾಟಕ ಕ್ಷೇತ್ರ ಮಾಡುತ್ತಾ ಬರುತ್ತಿದೆ. ಕನ್ನಡದ ಮಂದಿ ನಾಟಕಗಳನ್ನು ಹೆಚ್ಚು ವೀಕ್ಷಿಸುವ ಜತೆಯಲ್ಲಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಅಲ್ಲದೇ ತಮ್ಮ ಮಕ್ಕಳನ್ನು ರಂಗಭೂಮಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಇಂದು ನಾಟಗಳ ವೀಕ್ಷಣೆ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ. ಇದಕ್ಕಾಗಿ ಕಲಾಪೋಷಕರು ಹೆಚ್ಚಾಗಬೇಕು. ನಾಟಕಗಳು ಅದ್ಭುತ ದೃಶ್ಯ ಮಾಧ್ಯಮ ಎಂದರು.
ಅರಸೀ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಮಮತಾ ಮಾತನಾಡಿ, ಕಲಾ ಪ್ರಕಾರಗಳಿಗೆ ಉತ್ತೇಜನ ಈಗೀಗ ಕಡಿಮೆಯಾಗುವ ಜತೆಯಲ್ಲಿ ಚಟುವಟಿಕೆಗಳಿಗೆ ಜನರು ಸೇರುವುದು ಕಡಿಮೆಯಾಗುತ್ತಿದೆ. ದೂರದರ್ಶನ, ಮೊಬೈಲ್ ಫೋನ್‌ಗಳು ಸಾಮಾನ್ಯರ ಅಭಿರುಚಿಯನ್ನು ಹಾಳು ಮಾಡುತ್ತಿವೆ. ಕಲಾಪ್ರಕಾರಗಳು ಮನುಷ್ಯರ ಅಭಿರುಚಿಯನ್ನು ಉತ್ತಮಪಡಿಸುತ್ತವೆ ಎಂದರು.ನಿರ್ದಿಂಗತ ತಂಡದ ವ್ಯವಸ್ಥಾಪಕ ಗಣೇಶ್ ಮಾತನಾಡಿ, ಅರಾಜಕತೆಯನ್ನು, ಜನಗಳ ಮುಗ್ಧತೆಯನ್ನು, ಪರಿಸ್ಥಿತಿಯನ್ನೂ ಉಪಯೋಗಿಸಿಕೊಂಡು ಪುಡಾರಿಗಳು ಹಾಗೂ ರೌಡಿಗಳು ಎಲ್ಲಾ ಕ್ಷೇತ್ರಗಳಲ್ಲೂ ಹೇಗೆ ತಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಾರೆ. ಆ ಮೂಲಕ ಹೇಗೆ ಸಮಾಜದಲ್ಲಿ ಅರಾಜಕತೆಯನ್ನುಂಟು ಮಾಡುತ್ತಾರೆ ಎಂಬ ಸಂದೇಶ ಈ ನಾಟಕದಲ್ಲಿ ಅಡಗಿದೆ ಎಂದರು.
ನಿರ್ದಿಗಂತ ತಂಡದ ವಿನ್ಯಾಸಕ ಶಕೀಲ್ ಅಹಮ್ಮದ್, ಕಲಾವಿದ ಸಿದ್ದಪ್ಪ ಮಾದರ, ಮಂಜುನಾಥ್ ವನಗೇರಿ, ಪಂಪನಗೌಡ, ರೇಣುಕ ವೈ.ಕೆ, ಸಂಭ್ರಮ್, ಗಣೇಶ್ ಭೀಮನಕೋಟೆ, ಅರಸೀ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಮತಾರಾಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ದಿನೇಶ್, ಕೊಬ್ಬರಿ ಕಲಾವಿದ ಹರೀಶ್, ಸಿನೆಮಾ ಹಾಗೂ ರಂಗಭೂಮಿ ಕಲಾವಿದ ಮಂಜುನಾಥ್, ಉಪನ್ಯಾಸಕ ಡಾ. ಹರೀಶ್ ಕುಮಾರ್, ಡಾ. ಬಸವರಾಜ್, ಶ್ರೀಲಕ್ಷ್ಮಿ, ದೇವೇಗೌಡರು, ಬಸವರಾಜ್, ಮೊದಲಾದ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.