ಸಾರಾಂಶ
ನಮ್ಮ ದೇಶದ ವಿಜ್ಞಾನಿಗಳಾದ ಎ.ಪಿ.ಜಿ. ಅಬ್ದುಲ್ ಕಲಾಂ ಬಾಹ್ಯಾಕಾಶ ಸಂಶೋಧನೆ ಮತ್ತು ರಕ್ಷಣಾ ಪಡೆಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಸಮಾಜದ ಅಭಿವೃದ್ಧಿಯಲ್ಲಿ ವಿಜ್ಞಾನವು ಪ್ರಮುಖ ಪಾತ್ರ ವಹಿಸುವ ಮೂಲಕ ನಮ್ಮ ಜೀವನವನ್ನೇ ಸುಲಭ, ನಿರಾತಂಕವಾಗಿ ಮಾಡಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವ್ಹಿ. ಧರಣಾ ಹೇಳಿದರು.ಪಟ್ಟಣದ ಗುಡ್ ಶರ್ಫಡ್ ಆಂಗ್ಲ ಮಾಧ್ಯಮ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ವಿದ್ಯಾಥಿಗಳಿಂದ ಸೈನ್ಸ್ ಎಕ್ಸಾಮಿನೇಷನ್ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ವಿಜ್ಞಾನವು ನಮ್ಮನ್ನು ಚಂದ್ರನತ್ತ ಜತೆಗೆ ಮಂಗಳ ಗ್ರಹದತ್ತ ತಲುಪುವಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ನಮ್ಮ ದೇಶದ ವಿಜ್ಞಾನಿಗಳಾದ ಎ.ಪಿ.ಜಿ. ಅಬ್ದುಲ್ ಕಲಾಂ ಬಾಹ್ಯಾಕಾಶ ಸಂಶೋಧನೆ ಮತ್ತು ರಕ್ಷಣಾ ಪಡೆಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಮೂಡನಂಬಿಕೆಗಳಿಂದ ಯಾವ ರೀತಿ ದೂರವಿಬೇಕೆಂದನ್ನು ವಿಜ್ಞಾನದ ಪ್ರಯೋಗಗಳ ಮುಖಾಂತರ ವಿವರಿಸುತ್ತಾ ಮಕ್ಕಳಿಗೆ ಮನಮುಟ್ಟುವಂತೆ ಮನವರಿಕೆ ಮಾಡಿದರು.ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಅಶೋಕ ಮಾಲಿಪಾಟೀಲ ಮಾತನಾಡಿದರು.
ಸಂಸ್ಥೆ ವ್ಯವಸ್ಥಾಪಕ ದೀನ ದಯಾಳ ಶಿರೋಳ ಸಭೆ ಅಧ್ಯಕ್ಷತೆ ವಹಿಸಿದ್ದರು. ಪಾಲಕರ ಸಲಹಾ ಸಮಿತಿ ಸದಸ್ಯರಾದ ಗಣೇಶ ಶೇಠ್, ಇಬ್ರಾಹಿಂಸಾಬ ಕನಕಗಿರಿ ಹಾಗೂ ಶಾಲಾ ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿ ಇದ್ದರು.